ಕಾನ್ಸರ್ಟ್ನಲ್ಲಿ ಹಿಜಾಬ್ ಧರಿಸದ ಕಾರಣ ಇರಾನ್ ಗಾಯಕಿ ಪರಸ್ಟೋ ಅಹ್ಮದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇರಾನ್‌ನಲ್ಲಿ ಹಿಜಾಬ್ ವಿವಾದ ಇನ್ನೂ ಮುಂದುವರೆದಿದೆ. ಇಲ್ಲಿ ಗಾಯಕಿ ಹಿಜಾಬ್ ಇಲ್ಲದೆ ಲೈವ್ನಲ್ಲಿ ಹಾಡಿದ್ದರು. ಇರಾನಿನ ವಕೀಲ ಮಿಲಾದ್ ಪನಾಹಿಪೂರ್ ಪ್ರಕಾರ, 27 ವರ್ಷದ ಮಹಿಳಾ ಗಾಯಕಿ ಪರಸ್ಟೋ ಅಹ್ಮದಿ ಅವರನ್ನು ಬಂಧಿಸಲಾಗಿದೆ. ಮಜಂದರನ್ ರಾಜಧಾನಿ ಸಾರಿಯಿಂದ ಅವರನ್ನು ಶನಿವಾರ ಬಂಧಿಸಲಾಯಿತು.
ಆಕೆ ತನ್ನ ಸಂಗೀತ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಗುರುವಾರ ದಾಖಲಿಸಿದ ಪ್ರಕರಣದ ನಂತರ ಆಕೆಯ ಬಂಧನವಾಗಿದೆ. ಆಕೆ ತೋಳಿಲ್ಲದ ಅಂಗಿ ಧರಿಸಿದ್ದಳು, ಜತೆಗೆ ಹಿಜಾಬ್ ಧರಿಸಿರಲಿಲ್ಲ. ವಿಡಿಯೋದಲ್ಲಿ ನಾಲ್ಕು ಪುರುಷರು ಕೂಡ ಅವಳೊಂದಿಗಿದ್ದರು ಎನ್ನುವ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.
ಇರಾನ್‌ನಲ್ಲಿ ಮಹಿಳೆಯರ ಹಾಡುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಇದರ ನಂತರ, ಪುರುಷರ ಮುಂದೆ ಹಾಡುವುದು ಮತ್ತು ನೃತ್ಯ ಮಾಡುವುದನ್ನು ನಿಷೇಧಿಸಲಾಯಿತು. ಮಹಿಳೆಯರು ಹಾಡಿನ ಕೆಲವು ಭಾಗಗಳನ್ನು ಮಾತ್ರ ಹಾಡಬಹುದು. ಆದರೆ ಮಹಿಳೆಯರಿಗೆ ಮಾತ್ರ ಇರುವ ಸಭಾಂಗಣದಲ್ಲಿ ಹಾಡಲು ಅವಕಾಶವಿದೆ.
ಮತ್ತಷ್ಟು ಓದಿ: Fact Check: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯ ಕೊಲೆ?
ಇದಲ್ಲದೆ, ಇರಾನ್‌ನಲ್ಲಿನ ಇಸ್ಲಾಮಿಕ್ ಕಾನೂನಿನ ಪ್ರಕಾರ, ಮಹಿಳೆಯರು ತಮಗೆ ತಿಳಿದಿಲ್ಲದ ಪುರುಷರ ಮುಂದೆ ಹಿಜಾಬ್ ಇಲ್ಲದೆ ಬರುವಂತಿಲ್ಲ.
ಇರಾನ್‌ನಲ್ಲಿ ಹಿಜಾಬ್‌ನ ಅರ್ಥ ಹಿಜಾಬ್ ಎಂದರೆ ನಿಮ್ಮ ತಲೆ ಮತ್ತು ಮುಖವನ್ನು ಮುಚ್ಚುವುದು. 1979 ರ ಕ್ರಾಂತಿಯ ನಂತರ ಕಡ್ಡಾಯವಾಯಿತು.
2022 ರಲ್ಲಿ ಇರಾನ್‌ನಲ್ಲಿ, ಹಿಜಾಬ್ ಅನ್ನು ಸರಿಯಾಗಿ ಧರಿಸದ ಕಾರಣಕ್ಕಾಗಿ ಮಹ್ಸಾ ಅಮಿನಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಅವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರು. ಇದರ ನಂತರ, ಇರಾನ್‌ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತು. ಈ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ