Fact Check: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯ ಕೊಲೆ?

ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ನಡೆಸಿ ವೈರಲ್ ಹಕ್ಕು ತಪ್ಪುದಾರಿಗೆಳೆಯುತ್ತಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಮೊದಲು ಬಂಧಿಸಲಾಯಿತು ಮತ್ತು ನಂತರ ಮನೋವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಯಿತು.

Fact Check: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯ ಕೊಲೆ?
ವೈರಲ್​​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 18, 2024 | 10:18 AM

ಕಳೆದ ವಾರ ಇರಾನ್‌ನ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಹುಡುಗಿಯೊಬ್ಬಳು ಒಳ ಉಡುಪಿನಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಕೇವಲ ಇರಾನ್​ನಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ದೊಡ್ಡ ಸುದ್ದಿ ಆಯಿತು. ಇದೀಗ ಸಾಮಾಜಿಕ ತಾಣಗಳಲ್ಲಿ ಕೆಲ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಳ ಉಡುಪುಗಳಲ್ಲಿ ತಿರುಗಾಡಿದ್ದಕ್ಕಾಗಿ ಇರಾನ್ ಪೊಲೀಸರು ಈ ಹುಡುಗಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ದೀಪಕ್ ಶರ್ಮಾ ಎಂಬ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು, ‘‘ಸರ್ಕಾರದ ಪ್ರಕಾರ ಬಟ್ಟೆ ಧರಿಸದ ಕಾರಣ ಇರಾನ್ ಪೊಲೀಸರು ಈ ಹುಡುಗಿಯನ್ನು ಕೊಂದಿದ್ದಾರೆ, ಇದು ಎಂತಹ ಕೊಲೆಗಾರ ಧಾರ್ಮಿಕ ವ್ಯವಸ್ಥೆ.’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ತ್ರಿನೇತ್ರ ಸೂತ್ರಧಾರ ಎಂಬ ಫೇಸ್​ಬುಕ್ ಖಾತೆಯಿಂದ ಕೂಡ ಇದೇ ವಿಡಿಯೋ ಅಪ್ಲೋಡ್ ಆಗಿದ್ದು, ‘‘ಇರಾನಿನ ನೈತಿಕತೆಯ ಪೊಲೀಸರು #ಹಿಜಾಬ್ ಧರಿಸದಿದ್ದಕ್ಕಾಗಿ ಮಹಿಳೆಯ ಒಳಉಡುಪುಗಳನ್ನು ಕಿತ್ತೆಸೆದಿದ್ದಾರೆ. ಬಳಿಕ ಆಕೆಯನ್ನು ಥಳಿಸಿ ಬಂಧಿಸಿದ್ದಾರೆ. ಅಂದಿನಿಂದ ಅವಳು ಇಲ್ಲ.’’ ಎಂದು ಹೇಳಿಕೊಂಡಿದ್ದಾರೆ.

Fact Check:

ವೈರಲ್ ವಿಡಿಯೋವನ್ನು ತನಿಖೆ ಮಾಡಲು ಟಿವಿ9 ಕನ್ನಡ ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್​ನಲ್ಲಿ ಹುಡುಕಿದೆ. ಆಗ ನಮಗೆ ಹಲವು ಮಾಧ್ಯಮ ವರದಿಗಳು ಸಿಕ್ಕಿವೆ. ಇರಾನ್‌ನಲ್ಲಿ ಈ ಘಟನೆ ವರದಿಯಾಗಿದೆ. ಮಹಿಳೆಯನ್ನು ಬಂಧಿಸಲಾಗಿದೆ. ಈ ವರದಿಯಲ್ಲಿ ಮಾನವ ಹಕ್ಕುಗಳ ಸಂಘಟನೆಯಾದ ಅಮ್ನೆಸ್ಟಿಯನ್ನು ಉಲ್ಲೇಖಿಸಿ, ಬಂಧಿತ ಮಹಿಳೆಯ ಬಿಡುಗಡೆಯ ಬೇಡಿಕೆಯನ್ನೂ ಪ್ರಕಟಿಸಲಾಗಿದೆ. ಆದರೆ, ಕೊಲೆಗೈದ ಬಗ್ಗೆ ಎಲ್ಲಯೂ ಉಲ್ಲೇಖವಿಲ್ಲ.

ಹಾಗೆಯೆ ನ್ಯೂಸ್ 9 ಕೂಡ ಈ ಕುರಿತು ವರದಿ ಪ್ರಕಟಿಸಿದ್ದು, ಇರಾನ್‌ನಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ತನ್ನ ಒಳ ಉಡುಪನ್ನು ತೆಗೆದ ಕಾರಣಕ್ಕೆ ನಂತರ ಬಂಧಿಸಲಾಯಿತು. ಟೆಹ್ರಾನ್ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 2 ಶನಿವಾರದಂದು ಈ ಘಟನೆ ಸಂಭವಿಸಿದೆ. ಮಹಿಳೆಯನ್ನು ಮೊದಲು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ಮನೋವೈದ್ಯಕೀಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.

Where is the Iranian woman who stripped in protest against hijab rules?

ಈ ವರೆಗೆ ಪ್ರಕಟವಾದ ಯಾವುದೇ ವರದಿಯಲ್ಲಿ ಮಹಿಳೆಯ ಸಾವಿನ ಬಗ್ಗೆ ಹೇಳಲಾದ ಯಾವುದೇ ಸುದ್ದಿ ನಮಗೆ ಕಂಡುಬಂದಿಲ್ಲ.

ಹೀಗಾಗಿ ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ನಡೆಸಿ ವೈರಲ್ ಹಕ್ಕು ತಪ್ಪುದಾರಿಗೆಳೆಯುತ್ತಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಮೊದಲು ಬಂಧಿಸಲಾಯಿತು ಮತ್ತು ನಂತರ ಮನೋವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಯಿತು. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಿಳೆಯ ಸಾವು ದೃಢಪಟ್ಟಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:34 am, Wed, 13 November 24