Fact Check: ಅಣ್ಣ-ತಂಗಿ ಪರಸ್ಪರ ಮದುವೆಯಾಗಿದ್ದಾರೆ ಎಂದು ವೈರಲ್ ಆಗುತ್ತಿರುವ ಫೋಟೋದ ನಿಜಾಂಶ ಏನು?
ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಈ ಪ್ರಕರಣವು ಬಿಹಾರದಿಂದ ಬಂದಿಲ್ಲ, ಅಥವಾ ಈ ಹುಡುಗ ಮತ್ತು ಹುಡುಗಿ ಸಹೋದರ ಮತ್ತು ಸಹೋದರಿಯರಲ್ಲ ಎಂಬುದನ್ನು ಕಂಡುಹಿಡಿದಿದೆ. ಇದು ಗ್ವಾಲಿಯರ್‌ನ ಹಳ್ಳಿಯೊಂದರಲ್ಲಿ ನಡೆದ ಮಧ್ಯಪ್ರದೇಶದಲ್ಲಿ ವಾಸಿಸುವ ಸಂದೀಪ್ ಮತ್ತು ಅಂಜಲಿ ಅವರ ನಿಶ್ಚಿತಾರ್ಥದ ಫೋಟೋ ಆಗಿದೆ.
ಬಿಹಾರದ ಹಿಂದೂ ವ್ಯಕ್ತಿಯೋರ್ವ ತನ್ನ ಸ್ವಂತ ತಂಗಿಯನ್ನು ಮದುವೆಯಾಗಿದ್ದಾನೆ ಎಂದು ಹೆಣ್ಣು ಮತ್ತು ಗಂಡುವಿನ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರಗಳಲ್ಲಿ ಇಬ್ಬರೂ ಹೂಮಾಲೆ ಹಾಕಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ‘‘ಬಿಹಾರದಲ್ಲಿ, ಒಬ್ಬ ಹಿಂದೂ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದಾನೆ, ಹೀಗೆ ಏಕೆ ಮಾಡಿದೆ ಎಂದು ಸ್ಥಳೀಯರು ಕೇಳಿದಾಗ, ನನ್ನ ಸಹೋದರಿ ಬೇರೆಯವರ ಬಳಿಗೆ ಹೋದರೆ ಅದು ಸರಿ ಅಲ್ಲ. ಮನೆಯ ವಸ್ತುಗಳು ಮನೆಯಲ್ಲಿಯೇ ಇರಬೇಕು, ಅದಕ್ಕಾಗಿಯೇ ನಾನು ಇದನ್ನು ಮಾಡಿದ್ದೇನೆ ಎಂದನು’’ ಎಂದು ಬರೆದುಕೊಂಡಿದ್ದಾರೆ.
ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಈ ಪ್ರಕರಣವು ಬಿಹಾರದಿಂದ ಬಂದಿಲ್ಲ, ಅಥವಾ ಈ ಹುಡುಗ ಮತ್ತು ಹುಡುಗಿ ಸಹೋದರ ಮತ್ತು ಸಹೋದರಿಯರಲ್ಲ ಎಂಬುದನ್ನು ಕಂಡುಹಿಡಿದಿದೆ. ಇದು ಗ್ವಾಲಿಯರ್‌ನ ಹಳ್ಳಿಯೊಂದರಲ್ಲಿ ನಡೆದ ಮಧ್ಯಪ್ರದೇಶದಲ್ಲಿ ವಾಸಿಸುವ ಸಂದೀಪ್ ಮತ್ತು ಅಂಜಲಿ ಅವರ ನಿಶ್ಚಿತಾರ್ಥದ ಫೋಟೋ ಆಗಿದೆ.
ನಿಜಾಂಶ ಹೇಗೆ ತಿಳಿಯಿತು?:
ವೈರಲ್ ಫೋಟೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಾವು ಅಕ್ಟೋಬರ್ 27, 2024 ರ ಫೇಸ್‌ಬುಕ್ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಜೈ ತೋಮರ್ ಮೋಹನಪುರ ಹೆಸರಿನ ಖಾತೆಯಿಂದ ಮಾಡಿದ ಈ ಪೋಸ್ಟ್‌ನಲ್ಲಿ ವೈರಲ್ ಆಗುತ್ತಿರುವ ಎರಡು ಚಿತ್ರಗಳ ಹೊರತಾಗಿ ಇತರ ಚಿತ್ರಗಳೂ ಕಂಡಿವೆ. ಜೈ ಅವರ ಸ್ನೇಹಿತ ಸಂದೀಪ್ ಕುಶ್ವಾಹ ಅವರ ನಿಶ್ಚಿತಾರ್ಥದ ಫೋಟೋಗಳು ಎಂದು ಇಲ್ಲಿ ಬರೆಯಲಾಗಿದೆ.
ಈ ವಿಷಯದ ಬಗ್ಗೆ ನಿಜಾಂಶ ತಿಳಿಯಲು ಖಾಸಗಿ ವೆಬ್ಸೈಟ್ ಒಂದು ಜೈ ತೋಮರ್ ಅವರನ್ನು ಸಂಪರ್ಕಿಸಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಕ್ಟೋಬರ್ 27 ರಂದು ತನ್ನ ಸ್ನೇಹಿತ ಸಂದೀಪ್ ಕುಶ್ವಾಹಾ ಅವರ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿಸಿದ್ದಾರೆ. ಇದು ನಡೆದಿರುವುದು ಬಿಹಾರದಲ್ಲ ಮಧ್ಯಪ್ರದೇಶದ್ದು ಎಂಬುದು ಇಲ್ಲಿ ಸಾಬೀತಾಗಿದೆ.
ಈ ಕುರಿತು ಸಂದೀಪ್ ಕುಶ್ವಾಹ ಕೂಡ ಮಾತನಾಡಿದ್ದು, ನಾವು ಮೊರೆನಾ ನಿವಾಸಿ ಮತ್ತು ಈ ಚಿತ್ರಗಳು ನಮ್ಮ ನಿಶ್ಚಿತಾರ್ಥದ ಫೋಟೋಗಳು ಎಂದು ಹೇಳಿದ್ದಾರೆ. ಗ್ವಾಲಿಯರ್ ಜಿಲ್ಲೆಯ ಭೈಪುರ ಗ್ರಾಮದಲ್ಲಿ ವಾಸಿಸುವ ತಮ್ಮ ಭಾವಿ ಪತ್ನಿಯ ಹೆಸರು ಅಂಜಲಿ ಕುಶ್ವಾಹ ಎಂದು ಸಂದೀಪ್ ಹೇಳಿದ್ದಾರೆ. ತಮ್ಮ ನಿಶ್ಚಿತಾರ್ಥ ಭೈಪುರ ಗ್ರಾಮದಲ್ಲಿಯೇ ನಡೆದಿದೆ. ಅಂಜಲಿ ತನ್ನ ಸಹೋದರಿ ಅಲ್ಲ ಮತ್ತು ಇಬ್ಬರೂ ಅರೇಂಜ್ಡ್ ಮ್ಯಾರೇಜ್ ಆಗಲಿದ್ದೇವೆ, ಈ ಮೊದಲು ಒಬ್ಬರಿಗೊಬ್ಬರು ಯಾವುದೇ ಪರಿಚಯ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಸಂದೀಪ್ ಅವರು ಮೊರೆನಾ ನಿವಾಸಿಯಾಗಿದ್ದು, ಒಡಿಶಾದ ಪರದೀಪ್‌ನಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರಂತೆ.
ಇದನ್ನೂ ಓದಿ: ಸೌದಿ ಅರೇಬಿಯಾದ ʼರಿಯಾದ್ ಮೆಟ್ರೋʼ ಓಡಿಸಲಿದ್ದಾರೆ ಹೈದರಾಬಾದ್ ಮಹಿಳೆ
ಸಂದೀಪ್ ಮತ್ತು ಅಂಜಲಿ ಸಹೋದರ ಮತ್ತು ಸಹೋದರಿ ಎಂದು ಹೇಳಿಕೊಳ್ಳುವ “ಲವ್ಲಿ ಸಿಮ್ರಾನ್” ಖಾತೆಯ ವಿರುದ್ಧ ದೂರು ನೀಡುವ ಕುರಿತು ಜೈ ತೋಮರ್ ಹಲವಾರು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಬರೆದಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಬಿಹಾರದಲ್ಲಿ, ಒಬ್ಬ ಹಿಂದೂ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದಾನೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 13 November 24