Viral: ಸೌದಿ ಅರೇಬಿಯಾದ ʼರಿಯಾದ್‌ ಮೆಟ್ರೋʼ ಓಡಿಸಲಿದ್ದಾರೆ ಹೈದರಾಬಾದ್‌ ಮಹಿಳೆ

ಸೌದಿ ಅರೇಬಿಯಾದಲ್ಲಿ ಆರಂಭವಾಗಲಿರುವ ರಿಯಾದ್‌ ಮೆಟ್ರೋ ಸೇವೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತಿರಿ ಅಲ್ವಾ. ಈ ಮೆಟ್ರೋ ಸೇವೆ 2025 ರ ಆರಂಭದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದ್ದು, ಇದೀಗ ರಿಯಾದ್‌ ಮೆಟ್ರೋ ಓಡಿಸಲು ಹೈದರಾಬಾದ್‌ನ ಮಹಿಳಾ ಲೋಕೋ ಪೈಲಟ್‌ ಒಬ್ಬರು ಆಯ್ಕೆಯಾಗಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಸೌದಿ ಅರೇಬಿಯಾದ ʼರಿಯಾದ್‌ ಮೆಟ್ರೋʼ ಓಡಿಸಲಿದ್ದಾರೆ ಹೈದರಾಬಾದ್‌ ಮಹಿಳೆ
ವೈರಲ್​​​ ಸುದ್ದಿಗಳು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2024 | 3:09 PM

ಪ್ರಸ್ತುತ ಇರುವಂತಹದ್ದು ನಾರಿ ಶಕ್ತಿಯ ಯುಗ ಅಂತಾನೇ ಹೇಳಬಹುದು. ಈಗಂತೂ ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲೂ ಸಾಧನೆಗೈಯುತ್ತಿದ್ದಾರೆ. ಇದೇ ಕಾರಣಕ್ಕೆ ಹೆಣ್ಮಕ್ಳೆ ಸ್ಟ್ರಾಂಗು ಅಂತ ಹೇಳ್ತಾರೆ. ಇದೀಗ ಈ ಮಾತಿಗೆ ಉತ್ತಮ ನಿದರ್ಶನದಂತಿರುವ ಮತ್ತೊಂದು ಘಟನೆ ನಡೆದಿದ್ದು, ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋವನ್ನು ಓಡಿಸಲು ಹೈದರಾಬಾದ್‌ನ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಹೌದು ಲೋಕೋ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಈ ಮಹಿಳೆ ಇದೀಗ ದೂರದ ಸೌದಿ ಅರೇಬಿಯಾದಲ್ಲಿ ಮೆಟ್ರೋ ಟ್ರೈನ್‌ ಓಡಿಸಲಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಹೈದರಾಬಾದ್‌ನ ಇಂದಿರಾ ಈಗಳಪತಿ ಎಂಬ 33 ವರ್ಷ ವಯಸ್ಸಿನ ಮಹಿಳೆ ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಸುಮಾರು 5 ವರ್ಷಗಳಿಂದ ಲೋಕೋ ಪೈಲಟ್‌ ಮತ್ತು ಸ್ಟೇಷನ್‌ ಅಪರೇಷನ್‌ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋ ಓಡಿಸಲು ಆಯ್ಕೆಯಾಗಿದ್ದು, ನಾನು ಕೂಡಾ ಈ ವಿಶ್ವ ದರ್ಜೆಯ ಮತ್ತು ಪ್ರತಿಷ್ಠಿತ ಯೋಜನೆಯ ಭಾಗವಾಗಿದ್ದೇನೆ ಎಂದು ಹೇಳಲು ನನಗೆ ತುಂಬಾನೇ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಧೂಳಪಳ್ಳ ನಿವಾಸಿಯಾಗಿದ್ದ ಇಂದಿರಾ 2006 ರಲ್ಲಿ ಹೈದರಾಬಾದ್‌ಗೆ ಬಂದು ನೆಲೆಸಿದರು. ಮೆಕ್ಯಾನಿಕ್‌ ಆಗಿದ್ದ ಅವರ ತಂದೆ ಇಂದಿರಾ ಸೇರಿದಂತೆ ತನ್ನ ಮೂವರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದರು. ಉತ್ತಮ ವಿದ್ಯಾಭ್ಯಾಸ ಪಡೆದು ಇಂದಿರಾ ಅವರ ಅಕ್ಕ ಶಿಕ್ಷಕಿಯಾಗಿ ಹಾಗೂ ಇಂದಿರಾ ಜೊತೆಗೆ ಅವರ ಕಿರಿಯ ಸಹೋದರ ಇಂಜಿನಿಯರಿಂಗ್‌ ಪದವಿ ಪಡೆದು ಹೈದರಾಬಾದ್‌ನ ಮೆಟ್ರೋದಲ್ಲಿ ಲೋಕೋ ಪೈಲಟ್‌ ಆಗಿ ಕೆಲಸ ಗಿಟ್ಟಿಸಿಕೊಂಡರು. ಹೀಗೆ ಬಡ ಕುಟುಂಬದಿಂದ ಬೆಳೆದು ಬಂದ ಇಂದಿರಾ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಲೋಕೋ ಪೈಲಟ್‌ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಖತರ್ನಾಕ್‌ ಕಳ್ಳಿಯರು; ಚಿನ್ನಂದಗಡಿ ಮಾಲೀಕನನ್ನೇ ಯಾಮಾರಿಸಿ 16 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಿಲಾಡಿ ಲೇಡೀಸ್

2019 ರಲ್ಲಿಯೇ ಇಂದಿರಾ ಸೇರಿದಂತೆ ಮತ್ತಿಬ್ಬರು ಭಾರತೀಯರು ರಿಯಾದ್‌ ಮೆಟ್ರೋದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದರು. ಆದರೆ ಕೊರೋನಾದ ಕಾರಣದಿಂದಾಗಿ ಅಲ್ಲಿ ಅವರು ಆರಂಭಿಕ ತರಬೇತಿಯನ್ನಷ್ಟೇ ಪಡೆದರು. ಆ ತರಬೇತಿ ಕೂಡಾ ಡಿಜಿಟಲ್‌ ರೂಪದಲ್ಲಿತ್ತು. ವರದಿಗಳ ಪ್ರಕಾರ ಪ್ರಸ್ತುತ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, 2025 ರ ಆರಂಭದಲ್ಲಿ ರಿಯಾದ್‌ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಈ ಮೆಟ್ರೋ ಓಡಿಸಲು ಇಂದಿರಾ ಕೂಡಾ ಆಯ್ಕೆಯಾಗಿದ್ದಾರೆ. “ಸೌದಿ ಅರೇಬಿಯಾದಲ್ಲಿ ಇದುವರೆಗಿನ ಅನುಭವ ತುಂಬಾ ಉತ್ತಮವಾಗಿದೆ. ಇಲ್ಲಿನ ಜನರು ಕೂಡಾ ತುಂಬಾ ಒಳ್ಳೆಯವರು ಮತ್ತು ಸಂಸ್ಕಾರವಂತರು. ಇಲ್ಲಿ ನಾನು ಇಷ್ಟು ದಿನ ಕಳೆದಿದ್ದೇನೆ, ಆದ್ರೆ ಯಾವುದೇ ಲಿಂಗ ತಾರತಮ್ಯವಿಲ್ಲ” ಎಂದು ಇಂದಿರಾ ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ