AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖತರ್ನಾಕ್‌ ಕಳ್ಳಿಯರು; ಚಿನ್ನಂದಗಡಿ ಮಾಲೀಕನನ್ನೇ ಯಾಮಾರಿಸಿ 16 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಿಲಾಡಿ ಲೇಡೀಸ್

ಕೆಲವರು ಕಳ್ಳತನ ಮಾಡುವುದನ್ನೇ ಕಸುಬು ಮಾಡಿಕೊಂಡಿರುತ್ತಾರೆ. ಅದೇ ರೀತಿ ಇಲ್ಲೊಂದು ನಾಲ್ವರು ಕಳ್ಳಿಯರು ಚಿನ್ನದಂಗಡಿಯನ್ನೇ ಟಾರ್ಗೆಟ್‌ ಮಾಡಿ ಚಿನ್ನ ಖರೀದಿಸುವ ಸೋಗಿನಲ್ಲಿ ಬಂದು ಅಂಗಡಿಯವನನ್ನೇ ಯಾಮಾರಿಸಿ ಬೆಲೆಬಾಳುವ ಚಿನ್ನಾಭರಣ ಕದ್ದಿದ್ದಾರೆ. ಈ ಖತರ್ನಾಕ್‌ ಕಳ್ಳಿಯರ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇವರುಗಳು ಚಿನ್ನ ಎಗರಿಸುವ ಪರಿ ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

ಖತರ್ನಾಕ್‌ ಕಳ್ಳಿಯರು; ಚಿನ್ನಂದಗಡಿ ಮಾಲೀಕನನ್ನೇ ಯಾಮಾರಿಸಿ 16 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಿಲಾಡಿ ಲೇಡೀಸ್
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 12, 2024 | 2:56 PM

Share

ಕಳ್ಳತನದ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಕೆಲವರು ಪರ್ಸ್‌ ಎಗರಿಸುವುದು ಇತ್ಯಾದಿ ಸಣ್ಣಪುಟ್ಟ ಕಳ್ಳತನವನ್ನು ಮಾಡಿದ್ರೆ ಈ ಕೆಲ ಮಹಿಳೆಯರು ಚಿನ್ನದಂಗಡಿಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿ ಅಲ್ಲಿದ್ದ ಚಿನ್ನಾಭರಣವನ್ನು ಎಗರಿಸಿ ಎಸ್ಕೆಪ್‌ ಆಗ್ತಾರೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಿನ್ನ ಖರೀದಿಸುವ ಸೋಗಿನಲ್ಲಿ ಬಂದ ನಾಲ್ವರು ಖತರ್ನಾಕ್‌ ಕಳ್ಳಿಯರು ಅಂಗಡಿ ಮಾಲೀಕನಿಗೆ ಟೋಪಿ ಹಾಕಿ ಲಕ್ಷಾಂತರ ಬೆಲೆಯ ಚಿನ್ನವನ್ನು ಕದ್ದಿದ್ದಾರೆ. ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಕಿಲಾಡಿ ಲೇಡೀಸ್‌ ಚಿನ್ನ ಎಗರಿಸುವ ಪರಿ ಕಂಡು ನೋಡುಗರು ದಂಗಾಗಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ್ದ ನಾಲ್ವರು ಮಹಿಳೆಯರು ಅಂಗಡಿ ಮಾಲೀಕನನ್ನು ಯಾಮಾರಿಸಿ ಬರೋಬ್ಬರಿ 16.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ್ದಾರೆ. ಹೌದು ಒಬ್ಬ ಮಹಿಳೆ ಕಿವಿಗೆ ಓಲೆ ಹಾಕಿಸಿಕೊಳ್ಳುವಂತೆ ನಾಟಕವಾಡಿದರೆ, ಇನ್ನೊಬ್ಬ ಮಹಿಳೆ ಅಂಗಡಿಯವನಿಗೆ ಅಡ್ಡ ನಿಂತು ಚಿನ್ನ ಕದಿಯುವಂತೆ ಸಿಗ್ನಲ್‌ ಕೊಟ್ಟಿದ್ದಾಳೆ. ಆಗ ಇನ್ನುಳಿದ ಇಬ್ಬರು ಮಹಿಳೆಯರು ಚಿನ್ನವನ್ನು ಥಟ್‌ ಅಂತ ಎಗರಿಸಿದ್ದಾರೆ.

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಾಲ್ವರು ಮಹಿಳೆಯರಿಂದ 16.5 ಲಕ್ಷ ರೂ. ಗಳಿಗೂ ಅಧಿಕ ಚಿನ್ನಾಭರಣ ಲೂಟಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ್ದ ನಾಲ್ವರು ಮಹಿಳೆಯರು ಖತರ್ನಾಕ್‌ ಪ್ಲಾನ್‌ ಮಾಡಿ ಅಂಗಡಿ ಮಾಲೀಕನನ್ನೇ ಯಾಮಾರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಎಗರಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹುಡುಗರ ಸಹವಾಸವೇ ಬೇಡಪ್ಪಾ ಅಂತ ಮರದೊಂದಿಗೆ ಡೇಟಿಂಗ್‌ ಶುರು ಮಾಡಿದ ಯುವತಿ

ನವೆಂಬರ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ರೀತಿಯ ಕಳ್ಳತನ ಮಾಡಲು ಇವರಿಗೆ ಹಲವಾರು ವರ್ಷಗಳ ಅನುಭವ ಇದ್ದಂಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಖತರ್ನಕ್‌ ಮಹಿಳೆಯರಿವರುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ