ಗಿನ್ನೆಸ್ ದಾಖಲೆಯ ಬರೆದ ಕೋಳಿಯ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಹೋಟೆಲ್
ಫಿಲಿಪೈನ್ಸ್‌ನಲ್ಲಿರುವ 39 ಅಡಿ ಎತ್ತರದ ದೈತ್ಯ ಕೋಳಿ ಆಕಾರದ ಹೋಟೆಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರು ವಿನ್ಯಾಸಗೊಳಿಸಿದ ಈ ಹೋಟೆಲ್ "ಕೋಳಿಯ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಕಟ್ಟಡ" ಎಂಬ ಗಿನ್ನೆಸ್ ದಾಖಲೆಯನ್ನು ಪಡೆದುಕೊಂಡಿದೆ.
ಫಿಲಿಪೈನ್ಸ್‌ನಲ್ಲಿರುವ ದೈತ್ಯ ಕೋಳಿಯ ಆಕಾರದ ಹೋಟೆಲಿನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಕೋಳಿಯ ಆಕಾರದ ಹೋಟೆಲ್ 39 ಅಡಿ ಎತ್ತರವಿದ್ದು, ಇದನ್ನು ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರು ವಿನ್ಯಾಸಗೊಳಿಸಿದ್ದಾರೆ. ಇದೀಗ ಈ ಹೋಟೆಲ್ “ಕೋಳಿಯ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಕಟ್ಟಡ” ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ.
ಸೆಪ್ಟೆಂಬರ್‌ನಲ್ಲಿ, ಹೋಟೆಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ಮೊದಲು ಬೃಹತ್ ರಚನೆಯನ್ನು ಆರು ತಿಂಗಳ ಕಾಲ ಯೋಜಿಸಲಾಗಿತ್ತು ಎಂದು ವರದಿಯಾಗಿದೆ. ಹೋಟೆಲ್ 34.931 m (114 ft 7 in) ಎತ್ತರ, 12.127 m (39 ft 9 in) ಅಗಲ ಮತ್ತು 28.172 m (92 ft 5 in) ಉದ್ದವನ್ನು ಹೊಂದಿದೆ.
View this post on Instagram
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್
ಈ ಹೋಟೆಲ್ 15 ಕೊಠಡಿಗಳನ್ನು ಹೊಂದಿದೆ, ಇದು ಬೃಹತ್ ಮತ್ತು ಆರಾಮದಾಯಕವಾದ ಹಾಸಿಗೆಗಳು, ಹವಾನಿಯಂತ್ರಣಗಳು ಸೇರಿದಂತೆ ಹೆಚ್ಚು ಅಗತ್ಯವಿರುವ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ ಎಂದು ಹೇಳಲಾಗುತ್ತದೆ. ಫಿಲಿಪೈನ್ಸ್‌ಗೆ ತಮ್ಮ ಪ್ರವಾಸದ ಸಮಯದಲ್ಲಿ ಸ್ಮರಣೀಯ ವಸತಿ ಸೌಕರ್ಯವನ್ನು ಪಡೆಯಲು ಯೋಜಿಸುವ ಕುಟುಂಬಗಳು ಮತ್ತು ಗುಂಪುಗಳಿಗೆ ಬುಕಿಂಗ್ ಮಾಡಲು ಕೊಠಡಿಗಳು ತೆರೆದಿರುತ್ತವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ