Video: ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್

Video: ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್

ಅಕ್ಷತಾ ವರ್ಕಾಡಿ
|

Updated on:Nov 12, 2024 | 10:34 AM

ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಆಗ್ರಾದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ನಗರ ಪೊಲೀಸ್ ಔಟ್‌ಪೋಸ್ಟ್‌ನ ಹೊರಗೆ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಆಗ್ರಾ: ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಮೂತ್ರ ವಿಸರ್ಜಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಪೊಲೀಸರ ಘನತೆಗೆ ಮಸಿ ಬಳಿಯುವ ನಾಚಿಕೆಗೇಡಿನ ಈ ವಿಡಿಯೋ ಸೋಶಿಯಲ್​​​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಆಗ್ರಾದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ನಗರ ಪೊಲೀಸ್ ಔಟ್‌ಪೋಸ್ಟ್‌ನ ಹೊರಗೆ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆ ಮಧ್ಯೆ ಹಾಗೂ ಜನಸಂದಣಿಯ ಸಮ್ಮುಖದಲ್ಲಿ ಪೊಲೀಸ್ ಪೇದೆಯ ನಾಚಿಕೆಗೇಡಿನ ಕೃತ್ಯಕ್ಕೆ ನೆಟ್ಟಿಗರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಹೀದ್ ನಗರ ಪೊಲೀಸ್ ಔಟ್‌ಪೋಸ್ಟ್‌ನಲ್ಲಿರುವ ಕಾನ್‌ಸ್ಟೆಬಲ್ ಅನ್ನು ಬಬ್ಲು ಗೌತಮ್ ಎಂದು ಗುರುತಿಸಲಾಗಿದೆ. @priyarajputlive ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 60 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಪ್ರೀತಿ ವಿಚಾರ ಗೊತ್ತಾಗಿ ಮಗಳನ್ನು ಅಮೆರಿಕಕ್ಕೆ ಕಳುಹಿಸಿದ ತಂದೆ, ಕೋಪಕ್ಕೆ ಗರ್ಲ್‌ಫ್ರೆಂಡ್‌ ಅಪ್ಪನಿಗೆ ಗುಂಡು ಹಾರಿಸಿದ ಪ್ರೇಮಿ

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 12, 2024 10:34 AM