ಪ್ರೀತಿ ವಿಚಾರ ಗೊತ್ತಾಗಿ ಮಗಳನ್ನು ಅಮೆರಿಕಕ್ಕೆ ಕಳುಹಿಸಿದ ತಂದೆ, ಕೋಪಕ್ಕೆ ಗರ್ಲ್‌ಫ್ರೆಂಡ್‌ ಅಪ್ಪನಿಗೆ ಗುಂಡು ಹಾರಿಸಿದ ಪ್ರೇಮಿ

ಪ್ರೀತಿ-ಪ್ರೇಮದ ವಿಚಾರ ಗೊತ್ತಾದ್ರೆ ಮನೆಯವರು ಮಕ್ಕಳನ್ನು ಪ್ರೇಮದ ಕೂಪದಲ್ಲಿ ಹೊರತರಲು ಪ್ರಯತ್ನಿಸುತ್ತಾರೆ. ಇದೇ ರೀತಿ ಇಲ್ಲೊಬ್ಬರು ವ್ಯಕ್ತಿ ಕೂಡಾ ಮಗಳ ಪ್ರೀತಿ ವಿಚಾರ ಗೊತ್ತಾಗಿ ಆಕೆಯನ್ನು ಅಮೆರಿಕಕ್ಕೆ ಕಳುಹಿಸಿದ್ದು, ಇದರಿಂದ ಕೋಪಗೊಂಡ ಬಾಯ್‌ಫ್ರೆಂಡ್‌ ತನ್ನ ಗೆಳತಿಯ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಅಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 11, 2024 | 12:27 PM

ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಪ್ರೀತಿಗೆ ಒಪ್ಪಿಗೆ ನೀಡಲ್ಲ. ಪ್ರೀತಿ-ಪ್ರೇಮದ ವಿಚಾರ ಗೊತ್ತಾದ್ರೆ ದೊಡ್ಡ ರಂಪಾಟ ನಡೆಸಿ ಪ್ರೇಮಿಗಳನ್ನು ದೂರ ದೂರ ಮಾಡಿ ಬಿಡುತ್ತಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಕೂಡಾ ತಮ್ಮ ಮಗಳ ಪ್ರೀತಿ ವಿಚಾರ ಗೊತ್ತಾಗಿ ಅವಳನ್ನು ಗೆಳೆಯನಿಂದ ದೂರ ಮಾಡಬೇಕೆಂದು ಆಕೆಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಬಾಯ್‌ಫ್ರೆಂಡ್‌ ನನ್ನಿಂದ ನನ್ನ ಗರ್ಲ್‌ಫ್ರೆಂಡ್‌ ಅನ್ನು ದೂರ ಮಾಡೋಕೆ ಎಷ್ಟು ಧೈರ್ಯ ಎನ್ನುತ್ತಾ ಗೆಳತಿಯ ತಂದೆಗೆ ಗುಂಡು ಹಾರಿಸಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಹೈದರಬಾದ್‌ನಲ್ಲಿ ನಡೆದಿದ್ದು, ಬಲ್ವಿಂದರ್‌ ಸಿಂಗ್‌ ಎಂಬ 25 ವರ್ಷದ ಯುವಕ ತನ್ನ ಗರ್ಲ್‌ಫ್ರೆಂಡ್‌ ತಂದೆಯ ಮೇಲೆಯೇ ಏರ್‌ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಮಗಳ ಪ್ರೀತಿ ವಿಚಾರ ಗೊತ್ತಾಗಿ ಕೋಪಗೊಂಡ ತಂದೆ ರೇವಂತ್‌ ಆನಂದ್‌ ತಮ್ಮ ಮಗಳು ಮನ್ವೀತಾಳನ್ನು ಅಮೆರಿಕಕ್ಕೆ ಕಳುಹಿದ್ದಾರೆ. ಇದೇ ಕೋಪದಿಂದ ನನ್ನಿಂದ ಆಕೆಯನ್ನು ದೂರ ಮಾಡಲು ಇವರಿಗೆ ಎಷ್ಟು ಧೈರ್ಯ ಎಂದು ಬಲ್ವಿಂದರ್‌ ಸಿಂಗ್‌ ನವೆಂಬರ್‌ 10 ರಂದು ತನ್ನ ಗೆಳತಿಯ ತಂದೆಯ ಮೇಲೆ ಏರ್‌ ಗನ್‌ನಿಂದ ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ. ಹೌದು ನಿನ್ನೆ ವೆಂಕಟೇಶ್ವರ ಕಾಲೋನಿಯಲ್ಲಿರುವ ರೇವಂತ್‌ ಮನೆಗೆ ಬಂದ ಬಲ್ವಿಂದರ್‌ ಅವರ ಜೊತೆ ಜಗಳವಾಡಿ ಕೊನೆಗೆ ರೇವಂತ್‌ ಮೇಲೆ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲದೆ ರೇವಂತ್‌ ಅವರ ಕಾರಿಗೂ ಹಾನಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ಓದಿ: Viral: ನನ್ನ ಬಿಟ್ಟೋಗ್ಬೇಡಾ, ನಾನು ಬರ್ತೀನಿ ಅಮ್ಮಾ ಮಾಲೀಕರೊಂದಿಗೆ ಬಸ್‌ ಏರಿದ ಶ್ವಾನ

ತೆಲುಗು ಸ್ಕ್ರೈಬ್‌ ನ್ಯೂಸ್‌ ಪೋರ್ಟಲ್‌ ಪ್ರಕಾರ, ಗಂಡು ರೇವಂತ್‌ ಆನಂದ್‌ ಅವರ ಬಲಗಣ್ಣಿಗೆ ತಗುಲಿದ್ದು, ಪರಿಣಾಮ ಗಂಭೀರ ಗಾಯಗಳಾಗಿವೆ. ಈ ಸಂಬಂಧ ರೇವಂತ್‌ ಆನಂದ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರೀತಿಯ ಹೆಸರಲ್ಲಿ ಆತ ತನ್ನ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ದೂರಿನ ಮೇರೆಗೆ ಹೈದರಬಾದ್‌ ಪೊಲೀಸರು ಬಲ್ವಿಂದರ್‌ ವಿರುದ್ಧ ಸೆಕ್ಷನ್‌ 109 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಬಳಿಕ ಸರೂರ್‌ನಗರ ಪೊಲೀಸರ್‌ ಬಲ್ವಿಂದರ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ರೇವಂತ್‌ ಆನಂದ್‌ ಕಣ್ಣಿನ ಗಾಯಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:25 pm, Mon, 11 November 24

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ