Viral: ನನ್ನ ಬಿಟ್ಟೋಗ್ಬೇಡಾ, ನಾನು ಬರ್ತೀನಿ ಅಮ್ಮಾ… ಮಾಲೀಕರೊಂದಿಗೆ ಬಸ್‌ ಏರಿದ ಶ್ವಾನ

ಅಮ್ಮಂದಿರು ಎಲ್ಲಾದ್ರೂ ಹೋದ್ರೆ ಪುಟ್‌ ಪುಟಾಣಿ ಮಕ್ಕಳು ಕೂಡಾ ಅಮ್ಮನ ಹಿಂದೆಯೇ ಅಳುತ್ತಾ ಓಡಿ ಹೋಗ್ತಾರೆ. ಅದೇ ರೀತಿ ಇಲ್ಲೊಂದು ನಾಯಿ ಕೂಡಾ ಅಮ್ಮಾ ನನ್ನನ್ನು ಬಿಟ್ಟೋಗ್ಬೇಡಾ, ನಾನು ಕೂಡಾ ನಿನ್‌ ಜೊತೆ ಬರ್ತೀನಿ ಎನ್ನುತ್ತಾ ಓನರ್‌ ಹಿಂದೆ ಓಡೋಡಿ ಹೋಗಿ ಥಟ್ಟನೆ ಬಸ್‌ ಏರಿ ಕುಳಿತಿದೆ. ಶ್ವಾನದ ಈ ಮುದ್ದಾದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 10, 2024 | 12:06 PM

ಸಾಕು ಪ್ರಾಣಿಗಳಿಗೆ ಮನೆ ಮಾಲೀಕರೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಮೂರು ಹೊತ್ತು ಚೆನ್ನಾಗಿ ಊಟ ಹಾಕುವ ಅಮ್ಮಂದಿರೆಂದರೆ ಎಲ್ಲಿಲ್ಲದ ಪ್ರೀತಿ. ಹೌದು ಮನೆಯಲ್ಲಿರುವ ನಾಯಿ, ಬೆಕ್ಕುಗಳು ಯಾವಾಗ್ಲೂ ಪುಟ್‌ ಪುಟಾಣಿ ಮಕ್ಕಳಂತೆ ಅಮ್ಮಂದಿರ ಹಿಂದೆಯೇ ಓಡಾಡುತ್ತಾ, ಸುತ್ತಾಡುತ್ತಾ ಇರುತ್ತವೆ. ಅದರಲ್ಲೂ ಕೆಲವು ಸಾಕು ಪ್ರಾಣಿಗಳು ತಮ್ಮ ಮಾಲೀಕರ ಹಿಂದೆ ಕಿಲೋ ಮೀಟರ್‌ಗಟ್ಟಲೆ ಓಡಿ ಹೋಗುತ್ತವೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಶ್ವಾನವೊಂದು ಅಮ್ಮಾ ನನ್ನನ್ನು ಬಿಟ್ಟೋಗ್ಬೇಡಾ, ನಾನು ಕೂಡಾ ನಿನ್‌ ಜೊತೆ ಬರ್ತೀನಿ ಎನ್ನುತ್ತಾ ಓನರ್‌ ಹಿಂದೆ ಓಡಿ ಹೋಗಿ ಥಟ್ಟನೆ ಬಸ್‌ ಏರಿ ಕುಳಿತಿದೆ. ಶ್ವಾನದ ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಕೇರಳದಲ್ಲಿ ನಡೆದಿದ್ದು, ಬಸ್‌ಸ್ಟಾಂಡ್‌ನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪ್ರೈವೆಟ್‌ ಬಸ್‌ ಅಲ್ಲಿ ಬಂದು ಕುಳಿತಿದ್ದು, ಅವರ ಹಿಂದೆಯೇ ಅವರ ಮನೆಯ ಸಾಕು ನಾಯಿ ಕೂಡಾ ನಾನು ಬರ್ತೀನಿ ಅಮ್ಮಾ ಎನ್ನುತ್ತಾ ಬಸ್‌ ಏರಿದೆ. ಈ ಮುದ್ದಾದ ದೃಶ್ಯವನ್ನು ಕಂಡು ಪ್ರಯಾಣಿಕರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು, ನಂತರ ಮಹಿಳೆ ಬಸ್ಸಿನಿಂದ ಇಳಿದು ಪ್ರೀತಿಯ ಶ್ವಾನವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಬಸ್ಸಿನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತ ವಿಡಿಯೋವನ್ನು kara_kalanja_bus_premi ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಚೂಡಿದಾರ್‌ ತೊಟ್ಟ ಮಹಿಳೆಯೊಬ್ಬರು ಪ್ರೈವಟ್‌ ಬಸ್‌ ಹತ್ತಿ ಕುಳಿತುಕೊಳ್ಳುವ ದೃಶ್ಯವನ್ನು ಕಾಣಬಹುದು. ಆ ಮಹಿಳೆ ಬಸ್‌ ಹತ್ತುತ್ತಿದ್ದಂತೆ ಅವರ ಮನೆಯ ಸಾಕು ನಾಯಿ ಕೂಡಾ ಓಡಿ ಬಂದು ನನ್ನನ್ನು ಬಿಟ್ಟೋಗ್ಬೇಡಾ, ನಾನು ಕೂಡಾ ನಿಮ್‌ ಜೊತೆ ಬರ್ತೀನಿ ಎನ್ನುತ್ತಾ ಥಟ್ಟನೆ ಬಸ್‌ ಏರಿದೆ. ಎಷ್ಟೇ ಹೇಳಿದರೂ ಬಸ್ಸಿನಿಂದ ಶ್ವಾನ ಇಳಿಯದಾಗ ಕೊನೆಗೆ ಮಹಿಳೆಯೇ ಬಸ್ಸಿನಿಂದ ಇಳಿದು ಶ್ವಾನವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಹಳೆ ಕಾರನ್ನು ಗುಜರಿಗೆ ಹಾಕುವ ಬದಲು ಅದ್ಧೂರಿಯಾಗಿ ಅಂತ್ಯಸಂಸ್ಕಾರ ಮಾಡಿದ ವ್ಯಕ್ತಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾಯಿಗಳಿಗೆ ತಮ್ಮ ಮಾಲೀಕರ ಮೇಲಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾಯಿಗೂ ಕೂಡಾ ಒಂದು ಟಿಕೆಟ್‌ ಕೊಡ್ಬೇಕಿತ್ತುʼ ಎಂದು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ