Viral: ಭತ್ತದ ಗದ್ದೆಯಲ್ಲಿ ಶ್ವಾನಗಳು ಮತ್ತು ಮುಂಗುಸಿ ನಡುವೆ ನಡೆಯಿತು ಬಿಗ್‌ ಫೈಟ್;‌ ವಿಡಿಯೋ ವೈರಲ್‌

ಸಾಮಾನ್ಯವಾಗಿ ಹಾವು ಮತ್ತು ಮುಂಗುಸಿಗಳು ಪರಸ್ಪರ ಎದುರಾದಾಗ ಅಲ್ಲಿ ದೊಡ್ಡ ಯುದ್ಧವೇ ನಡೆಯುತ್ತದೆ. ಹೀಗೆ ಹಾವು-ಮುಂಗಿಸಿ ಜಗಳಗಳನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ನೀವು ಎಂದಾದ್ರೂ ಮುಂಗುಸಿ ಶ್ವಾನಗಳೊಂದಿಗೆ ಜಗಳ ಆಡೋದನ್ನು ನೋಡಿದ್ದೀರಾ? ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಭತ್ತದ ಗದ್ದೆಯಲ್ಲಿ ಮೂರು ಶ್ವಾನಗಳು ಒಂಟಿ ಮುಂಗುಸಿಯೊಂದಿಗೆ ಕಾಳಗಕ್ಕೆ ಇಳಿದಿದ್ದು, ಈ ರಣ ರೋಚಕ ಫೈಟಿಂಗ್‌ ಸೀನ್‌ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Nov 10, 2024 | 4:29 PM

ಸೋಷಿಯಲ್‌ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಾವು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಒಂಟಿ ಮುಂಗುಸಿಯೊಂದಿಗೆ ಮೂರು ಶ್ವಾನಗಳು ಭತ್ತದ ಗದ್ದೆಯಲ್ಲಿ ಫೈಟ್‌ ಮಾಡಿವೆ. ನಾಯಿಗಳು ಮತ್ತು ಮುಂಗುಸಿಯ ನಡುವಿನ ಈ ರಣರೋಚಕ ಫೈಟಿಂಗ್‌ ಸೀನ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಹಾವು ಮತ್ತು ಮುಂಗುಸಿ ಕಾದಾಡುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ನೀವು ಎಂದಾದ್ರೂ ಮುಂಗುಸಿ ಇತರೆ ಪ್ರಾಣಿಗಳೊಂದಿಗೆ ಜಗಳ ಆಡುವುದನ್ನು ನೋಡಿದ್ದೀರಾ? ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಒಂಟಿ ಮುಂಗುಸಿಯೊಂದು ಧೈರ್ಯದಿಂದ ಮೂರು ನಾಯಿಗಳೊಂದಿಗೆ ಫೈಟ್‌ ಮಾಡಿದೆ. ಈ ಕುರಿತ ಇಂಟರೆಸ್ಟಿಂಗ್‌ ವಿಡಿಯೋವನ್ನು MojClips ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಭತ್ತದ ಗದ್ದೆಯಲ್ಲಿ ಮುಂಗುಸಿ ಮತ್ತು ನಾಯಿಗಳ ನಡುವೆ ರೋಚಕ ಫೈಟ್‌ ನಡೆಯುವ ದೃಶ್ಯವನ್ನು ಕಾಣಬಹುದು. ಮುಂಗುಸಿಯನ್ನು ಕಂಡ ನಾಯಿಗಳು ಅದರ ಹತ್ತಿರ ಬಂದು ಆ ಮುಂಗುಸಿಯನ್ನು ಎಳೆದಾಡುತ್ತಾ ಜಗಳ ಆಡಿವೆ. ಮುಂಗುಸಿ ಕೂಡಾ ಶ್ವಾನಗಳಿಗೆ ಭಯ ಪಡದೆ ಧೈರ್ಯದಿಂದ ಪ್ರಾಣ ಉಳಿಸಲು ನಾಯಿಗಳೊಂದಿಗೆ ಹೋರಾಡಿದೆ.

ಇದನ್ನೂ ಓದಿ: ನನ್ನ ಬಿಟ್ಟೋಗ್ಬೇಡಾ, ನಾನು ಬರ್ತೀನಿ ಅಮ್ಮಾ… ಮಾಲೀಕರೊಂದಿಗೆ ಬಸ್‌ ಏರಿದ ಶ್ವಾನ

ನವೆಂಬರ್‌ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಫೈಟ್‌ WWE ಗಿಂತ ಕಡಿಮೆಯಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಫೈಟಿಂಗ್‌ ಸೀನ್‌ ತುಂಬಾ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.‌

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:29 pm, Sun, 10 November 24

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ