Video: ಹಳೆ ಕಾರನ್ನು ಗುಜರಿಗೆ ಹಾಕುವ ಬದಲು ಅದ್ಧೂರಿಯಾಗಿ ಅಂತ್ಯಸಂಸ್ಕಾರ ಮಾಡಿದ ವ್ಯಕ್ತಿ
ಗುಜರಾತ್‌ನ ರೈತ ಸಂಜಯ್ ಪೊಲ್ಲಾರ ಅವರು ತಮ್ಮ 12 ವರ್ಷಗಳಿಂದ ಜೊತೆಗಿದ್ದ ಹಳೆಯ ವ್ಯಾಗನ್ ಆರ್ ಕಾರಿಗೆ ಅದ್ಧೂರಿ ಅಂತ್ಯಕ್ರಿಯೆ ಮಾಡಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ, 1500 ಜನರಿಗೆ ಭೋಜನ ಏರ್ಪಡಿಸಿ, ಕಾರು ಸಮಾಧಿ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿಗೆ ಹೂವುಗಳಿಂದ ಅಲಂಕರಿಸಿ, ಮೆರವಣಿಗೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ನೀವು ಅನೇಕ ವಿಧದ ಬೀಳ್ಕೊಡುಗೆ ಸಮಾರಂಭಗಳನ್ನು ನೋಡಿರುತ್ತೀರಿ. ಆದರೆ ಎಂದಾದರೂ ಕಾರಿನ ಅಂತಿಮ ವಿದಾಯವನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು ಗುಜರಾತ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಹಳೆಯ ಕಾರನ್ನು ಗುಜರಿಗೆ ಹಾಕುವ ಬದಲು ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿ 1500 ಮಂದಿಗೆ ಭೋಜನ ವ್ಯವಸ್ಥೆ ಮಾಡಿ ಅದ್ಧೂರಿಯಾಗಿ ಕಾರಿಗೆ ಮನುಷ್ಯರಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪಾದರ್‌ಶಿಂಗ ಗ್ರಾಮದ ನಿವಾಸಿಗಳಾದ ಸಂಜಯ್ ಪೊಲ್ಲಾರ ಮತ್ತು ಅವರ ಕುಟುಂಬ 12 ವರ್ಷಗಳಿಂದ ತಮ್ಮ ಜೊತೆಗಿದ್ದ ವ್ಯಾಗನ್‌ಆರ್ ಕಾರಿಗೆ ಯಾರೂ ಊಹಿಸದ ರೀತಿಯಲ್ಲಿ ವಿದಾಯ ಹೇಳಿದ್ದಾರೆ. ಕಾರನ್ನು ಹೂವಿನಿಂದ ಅಲಂಕರಿಸಿ, ತಮ್ಮ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಇದಲ್ಲದೇ ಕಾರಿಗೆ ಅಂತ್ಯಸಂಸ್ಕಾರದ ಔತಣಕೂಟ ಏರ್ಪಡಿಸಿದ್ದು, ಅದರಲ್ಲಿ 15 ಸಾವಿರ ಮಂದಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಈ ಬೈಕ್ ನಲ್ಲಿ ಪೆಟ್ರೋಲ್ ಟ್ಯಾಂಕ್ ಇಲ್ವೇ ಇಲ್ಲಾ, ವಿಚಿತ್ರ ಬೈಕನ್ನು ಓಡಿಸುತ್ತಿರುವ ಯುವಕ
ನವೆಂಬರ್ 08ರಂದು @ManojSh28986262 ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಕಾರಿನ ಅಂತ್ಯಸಂಸ್ಕಾರದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ರೈತ ಸಂಜಯ್ ತನ್ನ ಸ್ವಂತ ಗದ್ದೆಯಲ್ಲಿ ದೊಡ್ಡ ಹೊಂಡ ತೋಡಿ ಕಾರಿಗೆ ಸಮಾಧಿ ಮಾಡಿರುವುದು ಮತ್ತು ಈ ವೇಳೆ ಕುಟುಂಬದ ಸದಸ್ಯರೆಲ್ಲರೂ ಭಾವುಕರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ