AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಬೈಕ್ ನಲ್ಲಿ ಪೆಟ್ರೋಲ್ ಟ್ಯಾಂಕ್ ಇಲ್ವೇ ಇಲ್ಲಾ, ವಿಚಿತ್ರ ಬೈಕನ್ನು ಓಡಿಸುತ್ತಿರುವ ಯುವಕ

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಫಾಲ್ಲೋರ್ಸ್ ಗಳಿಗಾಗಿ ವಿಚಿತ್ರವೆನಿಸುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವರು ತಮ್ಮಲ್ಲಿರುವ ವಸ್ತುಗಳಲ್ಲಿಯೇ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಉಳಿದವರನ್ನು ಅಚ್ಚರಿ ಪಡಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬನು ರಸ್ತೆಯಲ್ಲಿ ವಿಚಿತ್ರ ಬೈಕನ್ನು ಓಡಿಸಿದ್ದಾನೆ. ಹೌದು, ಈ ಬೈಕ್ ನಲ್ಲಿ ಇಂಜಿನ್ ಆಗಲಿ ಅಥವಾ ಪೆಟ್ರೋಲ್ ಟ್ಯಾಂಕ್ ಆಗಲಿ ಇಲ್ಲ. ಆದರೂ ಸಲೀಸಾಗಿ ಬೈಕ್ ಓಡಿಸಲಾಗಿದ್ದು, ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಸಾಯಿನಂದಾ
| Edited By: |

Updated on: Nov 09, 2024 | 12:57 PM

Share

ಹುಡುಗರಿಗೆ ಬೈಕ್ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮಾರುಕಟ್ಟೆಗೆ ಹೊಸ ಮಾದರಿಯ ಬೈಕ್‌ ಗಳು ಎಂಟ್ರಿ ಕೊಟ್ಟರೆ ಸಾಕು ಖರೀದಿಸಲು ಮುಂದಾಗುತ್ತಾರೆ. ಅದಲ್ಲದೇ, ಯುವಕರು ತಮ್ಮ ಬೈಕ್ ಅನ್ನು ಮಾರ್ಪಡಿಸುವ ಮೂಲಕ ವಿಭಿನ್ನವಾಗಿ ಕಾಣಲು ಪ್ರಯತ್ನಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ವಿಚಿತ್ರವಾದ ಬೈಕ್ ಓಡಿಸುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾನೆ.

ಈ ಬೈಕ್‌ನಲ್ಲಿ ಯಾವುದೇ ಇಂಜಿನ್ ಆಗಲಿ ಅಥವಾ ಪೆಟ್ರೋಲ್ ಟ್ಯಾಂಕ್ ಆಗಲಿ ಕಾಣಿಸುವುದಿಲ್ಲ. ಆದರೂ ಈ ಯುವಕನು ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದಾನೆ. ಈ ವಿಡಿಯೋವನ್ನು vasu n patel ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಈ ಬೈಕ್ ಪೆಟ್ರೋಲ್ ಇಲ್ಲದೆ.. ಪೆಡಲ್ ಇಲ್ಲದೇ ಹೇಗೆ ಓಡುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಹೇಗೆ ಬೈಕ್ ಓಡಿಸುತ್ತಾನೆ ಎಂಬುದನ್ನು ನೋಡಬಹುದು.

ಈ ಬೈಕ್‌ನಲ್ಲಿ ಯಾವುದೇ ಇಂಜಿನ್ ಆಗಲಿ ಅಥವಾ ಪೆಟ್ರೋಲ್ ಟ್ಯಾಂಕ್ ಆಗಲಿ ಇಲ್ಲ. ಅದಲ್ಲದೇ ಯಾವುದೇ ಪೆಡಲನ್ನು ನೀವು ಕಾಣುವುದೇ ಇಲ್ಲ. ಆದರೂ ಈ ಬೈಕನ್ನು ಓಡಿಸಲಾಗುತ್ತಿದೆ. ಈ ಯುವಕನ ಬಳಿ, ಅಲ್ಲೇ ಇದ್ದ ಬೈಕ್ ಸವಾರನು ಪ್ರಶ್ನೆ ಮಾಡಿದ್ದಾನೆ.. ಅಣ್ಣ, ಇದು ಯಾವ ಬೈಕ್, ಹೇಗೆ ಓಡುತ್ತಿದೆ ಎಂದು ಕೇಳಿದ್ದಾನೆ. ಯುವಕನು ಗಾಳಿಯಿಂದ ಓಡಿಸಲಾಗುತ್ತಿದೆ ಎಂದು ಉತ್ತರಿಸಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಬೈಕ್ ಸವಾರನಿಗೆ ಶಾಕ್ ಆಗಿದ್ದಾನೆ.

ಇದನ್ನೂ ಓದಿ: ಅಪಹರಣಕಾರರಿಂದ 10 ವರ್ಷದ ಬಾಲಕಿಯನ್ನು ಕಾಪಾಡಿದ ಬೀದಿ ನಾಯಿಗಳು

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬನು, ‘ಇವನು ಹಾರ್ಲೆ ಡೇವಿಡ್ ಅವರ ಮಗ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಮೊದಲು ಬೈಕ್ ತಳ್ಳಿ ನಂತರ ಅದರ ವಿಡಿಯೋ ಮಾಡಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ