Viral: ಅಪಹರಣಕಾರರಿಂದ 10 ವರ್ಷದ ಬಾಲಕಿಯನ್ನು ಕಾಪಾಡಿದ ಬೀದಿ ನಾಯಿಗಳು

ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುವ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ಎಲ್ಲರೂ ಭಯ ಪಡುವ ಬೀದಿನಾಯಿಗಳೇ ಬಾಲಕಿಯೊಬ್ಬಳ ರಕ್ಷಣೆಗೆ ಧಾವಿಸಿವೆ. ಹೌದು ಅಪಹರಣಕಾರರು 10 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದಾಗ ಬೀದಿ ನಾಯಿಗಳು ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಹೋಗುವ ಮೂಲಕ ಬಾಲಕಿಯನ್ನು ರಕ್ಷಣೆ ಮಾಡಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಅಪಹರಣಕಾರರಿಂದ 10 ವರ್ಷದ ಬಾಲಕಿಯನ್ನು ಕಾಪಾಡಿದ ಬೀದಿ ನಾಯಿಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 12:13 PM

ನಾಯಿಗಳು ನಿಯತ್ತಿನ ಪ್ರಾಣಿ ಮನುಷ್ಯನೊಂದಿಗೆ ಅವುಗಳು ತುಂಬಾ ಫ್ರೆಂಡ್ಲಿಯಾಗಿರುತ್ತದೆ ನಿಜ ಆದ್ರೆ ಬೀದಿ ನಾಯಿಗಳು ಮಾತ್ರ ತುಂಬಾ ಅಪಾಯಕಾರಿ ಅಲ್ವಾ ಎಂದು ಹಲವರು ಹೇಳುತ್ತಿರುತ್ತಾರೆ. ಹೌದು ಬೀದಿ ನಾಯಿಗಳು ಕೆಲವೊಂದು ಬಾರಿ ದಾರಿಯಲ್ಲಿ ಹೋಗುವವರ ಮೇಲೆ ದಾಳಿ ನಡೆಸುವ ಕಾರಣ ಹೆಚ್ಚಿನವರು ಇವುಗಳನ್ನು ಕಂಡರೆ ಭಯ ಪಡ್ತಾರೆ. ಹೀಗೆ ಬೀದಿನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುವಂತಹ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಆದ್ರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ಅಪಹರಣಕಾರರು ಮನೆಯೊಂದರಲ್ಲಿ ಆಟವಾಡುತ್ತಿದ್ದ 10 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದಾಗ ಬೀದಿ ನಾಯಿಗಳು ಕಿಡ್ನ್ಯಾಪರ್‌ಗಳನ್ನು ಅಟ್ಟಾಡಿಸಿಕೊಂಡು ಹೋಗುವ ಮೂಲಕ ಬಾಲಕಿಯನ್ನು ರಕ್ಷಣೆ ಮಾಡಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, 10 ವರ್ಷದ ಬಾಲಕಿಯೊಬ್ಬಳನ್ನು ಅಪಹರಣಕಾರರು ಅಪಹರಿಸಲು ಯತ್ನಿಸಿದಾಗ ಆ ತಕ್ಷಣ ರಕ್ಷಣೆಗೆ ಧಾವಿಸಿದ ಬೀದಿ ನಾಯಿಗಳು ಬಾಲಕಿಯನ್ನು ದೊಡ್ಡ ಕಂಟಕದಿಂದ ಪಾರು ಮಾಡಿವೆ.

ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ ಬಗ್ಗೆ ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿ

ಮಾಹಿತಿಯ ಪ್ರಕಾರ ಸೋಮವಾರ (ನವೆಂಬರ್‌ 4) ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಅಂಗಡಿಗೆ ಹೋದಾಗ ಹಾಗೂ ತಾಯಿ ಛಾವಣಿಯ ಮೇಲೆ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಅಪಹರಣಕಾರರು 10 ವರ್ಷದ ಬಾಲಕಿಯನ್ನು ಅಪಹರಿಸಿ ಬೈಕ್‌ನಲ್ಲಿ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿ ಇದ್ದ ಬೀದಿ ನಾಯಿಗಳು ಬೊಗಳುತ್ತಾ, ಅಟ್ಟಾಡಿಸಿಕೊಂಡು ಹೋಗಿ ಕಿಡ್ನ್ಯಾಪರ್‌ಗಳ ಮೇಲೆ ದಾಳಿ ನಡೆಸಿವೆ. ಇದರಿಂದ ಬೆಚ್ಚಿ ಬಿದ್ದ ಕಿಡ್ನ್ಯಾಪರ್ಸ್‌ ಬಾಲಕಿಯ ಸಮೇತ ಕೆಳಗೆ ಬೀಳುತ್ತಾರೆ. ತಕ್ಷಣ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ದೇವಸ್ಥಾನದ ಬಳಿಗೆ ಓಡಿ ಹೋಗಿದ್ದಾಳೆ. ಕಿಡ್ನ್ಯಾಪರ್ಸ್‌ ಕೂಡಾ ಸಿಕ್ಕಿ ಬಿದ್ರೆ ಕಷ್ಟ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ನಾಯಿಗಳ ಬೊಗಳುವ ಸದ್ದು ಕೇಳಿಸಿ ಓಡಿ ಬಂದ ಕುಟುಂಬಸ್ಥರು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬಾಲಕಿಯ ಕುಟುಂಬಸ್ಥರು ಬೆಟ್ಮಾ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರನ್ನು ನೀಡಿದ್ದು, ಪ್ರಾಥಮಿಕ ವರದಿಯ ಆಧಾರದ ಮೇರೆಗೆ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ