AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baba Vanga’s Prediction: ಡೊನಾಲ್ಡ್‌ ಟ್ರಂಪ್‌ ಬಗ್ಗೆ ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿ

ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಹೌದು ಅಮೆರಿಕದ ಮೇಲೆ ಉಗ್ರರ ದಾಳಿ, ಕೋವಿಡ್‌ ಸಾಂಕ್ರಾಮಿಕ ರೋಗ ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇದೀಗ ಅವರು ಡೊನಾಲ್ಡ್‌ ಟ್ರಂಪ್‌ ಬಗ್ಗೆ ನುಡಿದಿ ಶಾಕಿಂಗ್‌ ಭವಿಷ್ಯವಾಣಿಯ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ.

Baba Vanga’s Prediction: ಡೊನಾಲ್ಡ್‌ ಟ್ರಂಪ್‌ ಬಗ್ಗೆ ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿ
ಸಾಂದರ್ಭಿಕ ಚಿತ್ರ (ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿ)
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 08, 2024 | 11:03 AM

Share

ಇಡೀ ಜಗತ್ತಿನ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರನ್ನು ಮಣಿಸಿ, ಭಾರೀ ಜಯಭೇರಿ ಬಾರಿಸುವ ಮೂಲಕ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಎಲ್ಲೆಡೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ಟ್ರಂಪ್‌ ಅವರದ್ದೇ ಸುದ್ದಿ. ಈ ನಡುವೆ ಬಾಬಾ ವಂಗಾ ಟ್ರಂಪ್‌ ಬಗ್ಗೆ ನುಡಿದಿದ್ದ ಭವಿಷ್ಯವಾಣಿಯ ಸುದ್ದಿಯೊಂದು ಕೂಡಾ ಸಖತ್‌ ವೈರಲ್‌ ಆಗುತ್ತಿದೆ. ಹೌದು ಅಮೆರಿಕದ ಮೇಲೆ ಉಗ್ರರ ದಾಳಿ, ಕೋವಿಡ್‌ ಸಾಂಕ್ರಾಮಿಕ ರೋಗ ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ಭವಿಷ್ಯ ನುಡಿದಿದ್ದ ಬಾಬಾ ವಂಗಾ ಟ್ರಂಪ್‌ ಬಗ್ಗೆ ಕೂಡಾ ಶಾಕಿಂಗ್‌ ಭವಿಷ್ಯವನ್ನು ನುಡಿದಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಬಗ್ಗೆ ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿ:

ಬಾಬಾ ವಂಗಾ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇದೆ. ಬಲ್ಗೇರಿಯಾದ ಪ್ರವಾದಿಯಾಗಿದ್ದ ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. 1911 ರಲ್ಲಿ ಜನಿಸಿದ ಇವರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚಂಡಮಾರುತದ ಧೂಳಿನಿಂದ ಶಾಶ್ವತವಾಗಿ ಕಣ್ಣನ್ನು ಕಳೆದುಕೊಂಡರು. ದೃಷ್ಟಿ ಕಳೆದುಕೊಂಡ ನಂತರ ಅವರು ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ ತನ್ನ ಅತೀಂದ್ರಿಯ ಶಕ್ತಿಗಳ ಮೂಲಕ 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ಮೊದಲೇ ನುಡಿದಿದ್ದಾರೆ. ಅವರು ಕೋವಿಡ್ ಸಾಂಕ್ರಾಮಿಕ ರೋಗ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಆರ್ಥಿಕ ಬಿಕ್ಕಟ್ಟು ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿತ್ತು. ಇದೀಗ ಅವರು ಡೊನಾಲ್ಡ್‌ ಟ್ರಂಪ್‌ ಬಗ್ಗೆ ನುಡಿದ ಶಾಕಿಂಗ್‌ ಭವಿಷ್ಯವಾಣಿಯ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:  ಯೂಟ್ಯೂಬ್​ನಲ್ಲಿ ಅಡುಗೆ ಚಾನಲ್ ಪ್ರಾರಂಭಿಸಿ ನಂ. 1 ಶ್ರೀಮಂತೆಯಾದ ನಿಶಾ ಮಧುಲಿಕಾ

ಜುಲೈ 13, 2024 ರಂದು ಡೊನಾಲ್ಡ್‌ ಟ್ರಂಪ್‌ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಟ್ರಂಪ್‌ ಮೇಲೆ ಗುಂಡು ಹಾರಿಸಿದ್ದನು. ಈ ದಾಳಿಯಿಂದ ಟ್ರಂಪ್‌ ಕಿವಿಗೆ ಗಾಯಗಳಾಗಿತ್ತು. ಈ ದಾಳಿಯ ಬಗ್ಗೆಯೂ ಬಾಬಾ ವಂಗಾ ಮೊದಲೇ ಊಹಿಸಿದ್ದರು. ಇದಲ್ಲದೆ ಟ್ರಂಪ್‌ ನಿಗೂಢ ಕಾಯಿಲೆಗೆ ತುತ್ತಾಗುತ್ತಾರೆ. ಇದರಿಂದ ಅವರು ಕಿವುಡರಾಗುತ್ತಾರೆ ಮತ್ತು ಅವರು ಬ್ರೈನ್‌ ಟ್ಯೂಮರ್‌ಗೂ ತುತ್ತಾಗುವ ಸಾಧ್ಯತೆ ಇದೆ ಎಂದು ಡೊನಾಲ್ಡ್‌ ಟ್ರಂಪ್‌ ಆರೋಗ್ಯದ ಬಗ್ಗೆ ಬಾಬಾ ವಂಗಾ ಶಾಕಿಂಗ್‌ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ