Sign In

By signing in or creating an account, you agree with Associated Broadcasting Company's Terms & Conditions and Privacy Policy.

Success Story: ಯೂಟ್ಯೂಬ್​ನಲ್ಲಿ ಅಡುಗೆ ಚಾನಲ್ ಪ್ರಾರಂಭಿಸಿ ನಂ. 1 ಶ್ರೀಮಂತೆಯಾದ ನಿಶಾ ಮಧುಲಿಕಾ

65 ವರ್ಷದ ನಿಶಾ ಮಧುಲಿಕಾ ಇಂದು ಭಾರತದ ನಂಬರ್​ 1 ಶ್ರೀಮಂತ ಮಹಿಳಾ ಯೂಟ್ಯೂಬರ್​ ಎಂದೆನಿಸಿಕೊಂಡಿದ್ದಾರೆ. ಯೂಟ್ಯೂಬ್​​​ ಜಗತ್ತಿನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಮಧುಲಿಕಾ ಅವರು ವೀಡಿಯೋಗಳಿಂದಲೇ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಇವರ ಯೂಟ್ಯೂಬ್ ಚಾನೆಲ್​ ಬರೋಬ್ಬರಿ 14.4 ಮಿಲಿಯನ್​ ಅಂದರೆ ಸುಮಾರು 1.44 ಕೋಟಿ ಚಂದಾದಾರರನ್ನು ಹೊಂದಿದೆ.

Success Story: ಯೂಟ್ಯೂಬ್​ನಲ್ಲಿ ಅಡುಗೆ ಚಾನಲ್ ಪ್ರಾರಂಭಿಸಿ ನಂ. 1 ಶ್ರೀಮಂತೆಯಾದ ನಿಶಾ ಮಧುಲಿಕಾ
Nisha MadhulikaImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Nov 08, 2024 | 10:54 AM

ಕೊರೊನಾ ನಂತರದ ವರ್ಷಗಳಿಂದ ತಂತ್ರಜ್ಞಾನದ ಯುಗದಲ್ಲಿ ಯೂಟ್ಯೂಬ್​​​ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಯೂಟ್ಯೂಬ್​ ಅನ್ನೇ ನಂಬಿ ಹಲವಾರು ಜನರು ಜೀವನ ನಡೆಸುತ್ತಿದ್ದಾರೆ. ಇಲ್ಲಿ ನೀವು ನಿಮ್ಮ ಸ್ವಂತ ಉದ್ಯಮವನ್ನು ನಡೆಸಿ ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸಬಹುದು. ಇದೀಗ ಅಡುಗೆ ಚಾನೆಲ್​​​ ಪ್ರಾರಂಭಿಸಿ ಭಾರತದ ನಂಬರ್​ 1 ಶ್ರೀಮಂತ ಮಹಿಳಾ ಯೂಟ್ಯೂಬರ್​ ಎಂದೆನಿಸಿಕೊಂಡಿರುವ ಮಹಿಳೆಯೊಬ್ಬರ ಯಶಸ್ಸಿನ ಕಥೆ ಇಲ್ಲಿದೆ.

65 ವರ್ಷದ ನಿಶಾ ಮಧುಲಿಕಾ ಇಂದು ಭಾರತದ ನಂಬರ್​ 1 ಶ್ರೀಮಂತ ಮಹಿಳಾ ಯೂಟ್ಯೂಬರ್​ ಎಂದೆನಿಸಿಕೊಂಡಿದ್ದಾರೆ. ಯೂಟ್ಯೂಬ್​​​ ಜಗತ್ತಿನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಮಧುಲಿಕಾ ಅವರು ವೀಡಿಯೋಗಳಿಂದಲೇ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

ಉತ್ತರ ಪ್ರದೇಶದ ಮಧ್ಯಮ ಕುಟುಂಬದಲ್ಲಿ ಜನಿಸಿದ ನಿಶಾ ಅವರು ತಮ್ಮ ಪದವಿ ಶಿಕ್ಷಣ ಮುಗಿಸಿ , ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಮೊದಲಿನಿಂದಲೂ ಅಡುಗೆಯ ಆಸಕ್ತಿಯನ್ನು ಹೊಂದಿರುವ ಇವರು 2011 ರಲ್ಲಿ, ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಸಣ್ಣ ಪುಟ್ಟ ಪಾಕವಿಧಾನಗಳ ಮೂಲಕ ಪ್ರಾರಂಭವಾದ ಈ ಚಾನೆಲ್​​​ ಬೆಳೆಯಲು ಪ್ರಾರಂಭವಾಗುತ್ತಿದ್ದಂತೆ ಶಿಕ್ಷಕಿ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಂಡರು.

2016 ರಲ್ಲಿ, ದಿ ಎಕನಾಮಿಕ್ ಟೈಮ್ಸ್ ನಿಶಾ ಮಧುಲಿಕಾ ಅವರನ್ನು ಭಾರತದ ಟಾಪ್ 10 ಯೂಟ್ಯೂಬ್ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ಸೇರಿಸಿತು. ಇದರ ನಂತರ ವೊಡಾಫೋನ್‌ನ ವುಮೆನ್ ಆಫ್ ಪ್ಯೂರ್ ವಂಡರ್ ಕಾಫಿ ಟೇಬಲ್ ಪುಸ್ತಕದಲ್ಲಿ ಇವರ ಸಾಧನೆಗಳ ಬಗ್ಗೆ ಪ್ರಕಟವಾಯಿತು.

ಇಲ್ಲಿಂದ ನಿಶಾ ಮಧುಲಿಕಾ ಅವರ ಯಶಸ್ಸಿನ ಪ್ರಯಾಣ ಪ್ರಾರಂಭವಾಯಿತು ಮತ್ತು 2020 ರಲ್ಲಿ ಅವರು ಯೂಟ್ಯೂಬ್‌ನಲ್ಲಿ 10 ಮಿಲಿಯನ್ ಅಂದರೆ 1ಕೋಟಿ ಚಂದಾದಾರರನ್ನು ಪಡೆದರು. ಯೂಟ್ಯೂಬ್ನಿಂದ ಇವರು ‘ಡೈಮಂಡ್ ಪ್ಲೇ ಬಟನ್’ ಅನ್ನು ಸಹ ಸಿಕ್ಕಿದೆ. ಇಂದು(2024ರಲ್ಲಿ) ಇವರ ಯೂಟ್ಯೂಬ್ ಚಾನೆಲ್​ ಬರೋಬ್ಬರಿ 14.4 ಮಿಲಿಯನ್​ ಅಂದರೆ ಸುಮಾರು 1.44 ಕೋಟಿ ಚಂದಾದಾರರನ್ನು ಹೊಂದಿದೆ.

ಇದನ್ನೂ ಓದಿ: ‘ವಿವಾಹಿತ ಮಹಿಳೆಯರ ಫೋಟೋ ಬಳಸಿ ಜನರನ್ನು ಮೂರ್ಖರನ್ನಾಗಿಸುತ್ತಿದೆ ಮ್ಯಾಟ್ರಿಮೋನಿಯಲ್ ಸೈಟ್’; ವಿಡಿಯೋ ವೈರಲ್​

ಇಂದು ಭಾರತದ ಶ್ರೀಮಂತ ಮಹಿಳಾ ಯೂಟ್ಯೂಬರ್ ಪಟ್ಟಿಯಲ್ಲಿ ನಿಶಾ ಮಧುಲಿಕಾ ಹೆಸರನ್ನು ಸೇರಿಸಲಾಗಿದೆ. ಅವರು ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿಯೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್ನು ನಿಶಾ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಇಂದು ಅವರು ತಮ್ಮ ಅಡುಗೆ ಚಾನೆಲ್ ಮೂಲಕ 13 ವರ್ಷಗಳಲ್ಲಿ 43 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್