‘ವಿವಾಹಿತ ಮಹಿಳೆಯರ ಫೋಟೋ ಬಳಸಿ ಜನರನ್ನು ಮೂರ್ಖರನ್ನಾಗಿಸುತ್ತಿದೆ ಮ್ಯಾಟ್ರಿಮೋನಿಯಲ್ ಸೈಟ್’; ವಿಡಿಯೋ ವೈರಲ್
ಮದುವೆಯಾಗಿ ಗಂಡನೊಂದಿಗೆ ಜೀವನ ನಡೆಸುತ್ತಿರುವ ಮಹಿಳೆಯೊಬ್ಬರ ಫೋಟೋ ಬಳಸಿ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನಕಲಿ ಖಾತೆಯಲ್ಲಿ ಸೃಷ್ಟಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ವತಃ ಮಹಿಳೆ "ನನಗೆ ಈಗಾಗಲೇ ಮದುವೆಯಾಗಿದೆ, ಆದರೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನನ್ನ ಫೋಟೋ ಬಳಸಿ ನಕಲಿ ಖಾತೆಯನ್ನು ತೆರೆಲಾಗಿದೆ. ಜನರನ್ನು ಮೂರ್ಖರನ್ನಾಗಿಸುತ್ತಿರುವ ಈ ಸೈಟ್ ಅನ್ನು ಬಳಸುವಾಗ ಎಚ್ಚರದಿಂದಿರಿ" ಎಂದು ಎಚ್ಚರಿಸಿದ್ದಾರೆ.
ಅನೇಕ ಜನರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್ ಸೈಟ್ ಬಳಸುತ್ತಿದ್ದಾರೆ. ಈ ಸೈಟ್ನಲ್ಲಿ ಪ್ರೀಮಿಯಂಗೆ ಶುಲ್ಕ ಪಾವತಿಸಿದರೆ ನಕಲಿ ಖಾತೆ ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದೀಗ ವಿವಾಹಿತ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್ ಜನರನ್ನು ಹೇಗೆ ಮೂರ್ಖರನ್ನಾಗಿಸುತ್ತಿದೆ ಎಂಬುದರ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಾಸ್ತವವಾಗಿ ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರುವ ಮಹಿಳೆಯೊಬ್ಬರ ಫೋಟೋ ಬಳಸಿ ನಕಲಿ ಖಾತೆಯಲ್ಲಿ ಸೃಷ್ಟಿಸಲಾಗಿದೆ. ಇದನ್ನು ಗಮನಿಸಿದ ಮಹಿಳೆ ತಕ್ಷಣ ಮ್ಯಾಟ್ರಿಮೋನಿಯಲ್ ಸೈಟ್ ವಿರುದ್ದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: 14 ವರ್ಷದ ಬಾಲಕಿಯ ಜತೆ ಸಂಭೋಗ ನಡೆಸಿ ಪ್ರಾಣ ಕಳೆದುಕೊಂಡ 41ರ ಹರೆಯದ ವ್ಯಕ್ತಿ
ಸ್ವಾತಿ ಮುಕುಂದ್(Swati Mukund) ಎಂಬ ಸೋಶಿಯಲ್ ಮೀಡಿಯಾ ಪ್ರಭಾವಿ ತನ್ನ ಫೋಟೋ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಯಾವ ರೀತಿ ದುರುಪಯೋಗವಾಗುತ್ತಿದೆ ಎಂಬುದರ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸ್ವಾತಿ ತನ್ನ ಗಂಡನ ಜೊತೆಗೆ ಕುಳಿತು ವಿಡಿಯೋ ಮಾಡಿದ್ದು, ” ನನಗೆ ಈಗಾಗಲೇ ಮದುವೆಯಾಗಿದೆ, ಆದರೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನನ್ನ ಫೋಟೋ ಬಳಸಿ ನಕಲಿ ಖಾತೆಯನ್ನು ತೆರೆಲಾಗಿದೆ. ಜನರನ್ನು ಮೂರ್ಖರನ್ನಾಗಿಸುತ್ತಿರುವ ಈ ಸೈಟ್ ಅನ್ನು ಬಳಸುವಾಗ ಎಚ್ಚರದಿಂದಿರಿ” ಎಂದು ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ