Viral: 14 ವರ್ಷದ ಬಾಲಕಿಯ ಜತೆ ಸಂಭೋಗ ನಡೆಸಿ ಪ್ರಾಣ ಕಳೆದುಕೊಂಡ 41ರ ಹರೆಯದ ವ್ಯಕ್ತಿ

ಇಲ್ಲೊಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 14 ರ ಹರೆಯದ ಬಾಲಕಿಯ ಜೊತೆ ಹೊಟೇಲ್‌ ರೂಮ್‌ನಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಹಠಾತ್‌ ಸಾವನ್ನಪ್ಪಿದ್ದಾನೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

Viral: 14 ವರ್ಷದ ಬಾಲಕಿಯ ಜತೆ ಸಂಭೋಗ ನಡೆಸಿ ಪ್ರಾಣ ಕಳೆದುಕೊಂಡ 41ರ ಹರೆಯದ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 07, 2024 | 2:48 PM

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಸಾವು ಹೇಗೆ ಬರುತ್ತೆ ಎಂದು ಹೇಳಲು ಕೂಡಾ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯಂತಿರುವ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹದಿಹರೆಯದ ಬಾಲಕಿಯ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಸಾವನ್ನಪ್ಪಿದ್ದಾನೆ. ಈ ಸಾವಿನ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಈ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಗುಜರಾತ್‌ ಮೂಲದ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯನ್ನು ಮುಂಬೈಗೆ ಕರೆತಂದು ಹೊಟೇಲ್‌ ರೂಮಿನಲ್ಲಿ ಆಕೆಯ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಹಠಾತ್‌ ಸಾವನ್ನಪ್ಪಿದ್ದಾನೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ 41 ವರ್ಷದ ಈ ವ್ಯಕ್ತಿ ಬಾಲಕಿಯ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದನು. ಅಲ್ಲದೆ ಬಾಲಕಿಗೂ ವಜ್ರದ ಫ್ಯಾಕ್ಟರಿಯಲ್ಲಿಯೇ ಕೆಲಸವನ್ನು ಸಹ ಕೊಟ್ಟಿದ್ದನು. ಬಾಲಕಿಯ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಮ್ಯಾನೇಜರ್‌ ಹಣದ ಸಹಾಯವನ್ನು ಕೂಡಾ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಅವರು ಆತನ ಮೇಲಿನ ನಂಬಿಕೆಯಿಂದ ಮಗಳನ್ನು ಆತನೊಂದಿಗೆ ಕೆಲಸದ ನಿಮಿತ್ತ ಹೊರಗಡೆ ಕೂಡಾ ಕಳುಹಿಸಿಕೊಡುತ್ತಿದ್ದರು.

ಹೀಗೆ ನವೆಂಬರ್‌ 2 ರಂದು ಮ್ಯಾನೇಜರ್‌ ಕೆಲಸದ ನಿಮಿತ್ತ ಆ ಬಾಲಕಿಯನ್ನು ಮುಂಬೈಗೆ ಕರೆತಂದು ಇಲ್ಲಿನ ಗ್ರಾಂಟ್‌ ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಬಾಲಕಿಯ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಆಕೆಯೊಂದಿಗೆ ಹೊಟೇಲ್‌ ರೂಮ್‌ನಲ್ಲಿ ತಂಗಿದ್ದಾನೆ. ಜೊತೆಗೆ ನೀನು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ನಿನ್ನ ಕುಟುಂಬಕ್ಕೆ ಹಣ ನೀಡುವುದನ್ನು ನಿಲ್ಲಿಸುತ್ತೇನೆ, ಇಲ್ಲಿಯವರೆಗೆ ಕೊಟ್ಟ ಹಣವನ್ನು ಸಹ ವಾಪಸ್‌ ಪಡೆಯುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿ ಬಾಲಕಿಯ ಜೊತೆ ಬಲವಂತವಾಗಿ ಸಂಭೋಗ ನಡೆಸಿದ್ದಾನೆ. ಆತ ಮಿತಿಮೀರಿ ವಯಾಗ್ರ ಮಾತ್ರೆಯನ್ನು ಸೇವಿಸಿದ ಕಾರಣ ಸಂಭೋಗದ ಬಳಿಕ ಹಠಾತ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅಮ್ಮನ ಜೊತೆ ಸ್ಕೂಲ್‌ಗೆ ಹೋಗುವಾಗ ಸ್ಕೂಟಿಯಲ್ಲೇ ಕುಳಿತು ಹೋಮ್‌ವರ್ಕ್‌ ಮಾಡಿದ ಬಾಲಕ; ವಿಡಿಯೋ ವೈರಲ್‌

ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಮುಂಬೈಗೆ ಆಗಮಿಸಿದ ಬಾಲಕಿಯ ತಾಯಿ ಮೃತ ಮ್ಯಾನೇಜರ್‌ ವಿರುದ್ಧ ಪೊಲೀಸ್‌ ದೂರನ್ನು ನೀಡಿದ್ದಾರೆ. ಪೊಲೀಸರು BNS ಮತ್ತು POCSO ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು, ಆರೋಪಿ ಬದುಕಿಲ್ಲ ಹೀಗಾಗಿ ಸಾರಾಂಶ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:25 pm, Thu, 7 November 24