Viral: ಅಮ್ಮನ ಜೊತೆ ಸ್ಕೂಲ್‌ಗೆ ಹೋಗುವಾಗ ಸ್ಕೂಟಿಯಲ್ಲೇ ಕುಳಿತು ಹೋಮ್‌ವರ್ಕ್‌ ಮಾಡಿದ ಬಾಲಕ; ವಿಡಿಯೋ ವೈರಲ್‌

ಕೊಟ್ಟ ಹೋಮ್‌ವರ್ಕ್‌ಗಳನ್ನು ಸರಿಯಾಗಿ ಮಾಡಿಲ್ಲ ಎಂದ್ರೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೈಯಿಂದ ಪನಿಶ್‌ಮೆಂಟ್‌ ಸಿಗೋದು ಖಂಡಿತ. ಇದೇ ಭಯಕ್ಕೆ ಹೆಚ್ಚಿನ ಮಕ್ಕಳು ತಪ್ಪದೆ ಹೋಮ್‌ವರ್ಕ್‌ ಮಾಡ್ತಾರೆ. ಇಲ್ಲೊಬ್ಬ ಬಾಲಕ ಕೂಡಾ ಮನೆಯಲ್ಲಂತೂ ಹೋಮ್‌ವರ್ಕ್‌ ಮಾಡಿಲ್ಲ, ಇವಾಗ ಟೀಚರ್‌ ಬೈದ್ರೆ ಏನು ಮಾಡೋದು ಎಂದು ಭಯದಿಂದ ಅಮ್ಮನ ಜೊತೆ ಸ್ಕೂಲ್‌ಗೆ ಹೋಗುವಾಗ ಸ್ಕೂಟಿಯಲ್ಲಿಯೇ ಕುಳಿತು ಹೋಮ್‌ವರ್ಕ್‌ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 07, 2024 | 12:14 PM

ಸಾಮಾನ್ಯವಾಗಿ ಶಾಲೆಗಳಲ್ಲಿ ಪ್ರತಿನಿತ್ಯ ಮಕ್ಕಳಿಗೆ ಹೋಮ್‌ವರ್ಕ್‌ ಕೊಟ್ಟೇ ಕೊಡುತ್ತಾರೆ. ಕೆಲ ಮಕ್ಕಳಂತೂ ಕೊಟ್ಟ ಹೋಮ್‌ವರ್ಕ್‌ಗಳನ್ನು ಸರಿಯಾಗಿ ಮಾಡದೆ ಟೀಚರ್‌ ಕೈಯಿಂದ ಪೆಟ್ಟು ತಿನ್ನುತ್ತಾರೆ. ಈ ಪೆಟ್ಟಿನ ಭಯಕ್ಕೆ ಕಷ್ಟ ಆದ್ರೂ ಮಕ್ಕಳು ಬೇಗ ಬೇಗ ಹೋಮ್‌ವರ್ಕ್‌ ಮಾಡಿ ಮುಗಿಸುತ್ತಾರೆ. ಆದ್ರೆ ಇಲ್ಲೊಬ್ಬ ಬಾಲಕ ಆಟ ಆಡೋ ಭರದಲ್ಲಿ ಮನೆಯಲ್ಲಿ ಹೋಮ್‌ವರ್ಕ್‌ ಮಾಡೋದನ್ನು ಮರೆತು, ಇವಾಗ ಟೀಚರ್‌ ಬೈದ್ರೆ ಏನು ಮಾಡೋದು ಎಂದು ಭಯದಿಂದ ಅಮ್ಮನ ಜೊತೆ ಸ್ಕೂಲ್‌ಗೆ ಹೋಗುವಾಗ ಸ್ಕೂಟಿಯಲ್ಲಿಯೇ ಕುಳಿತು ಹೋಮ್‌ವರ್ಕ್‌ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವೊಂದನ್ನು HasnaZaruiHai ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಬಾಲಕ ಮುಂದೊಂದು ದಿನ ತನ್ನ ತಾಯಿಯನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಸ್ಕೂಲ್‌ಗೆ ಹೋಗೋ ಹುಡುಗ ಸ್ಕೂಟಿಯಲ್ಲಿ ಕುಳಿತು ಹೋಮ್‌ವರ್ಕ್‌ ಮಾಡಿದ್ದಾನೆ. ಟೀಚರ್‌ ಬೈತಾರೇ ಅನ್ನೋ ಭಯದಿಂದ ಹುಡುಗು ಅಮ್ಮನ ಜೊತೆ ಸ್ಕೂಲ್‌ಗೆ ಹೋಗುವಾಗ ಸ್ಕೂಟಿಯ ಹಿಂಬದಿಯಲ್ಲಿ ಕುಳಿತು ಹೋಮ್‌ವರ್ಕ್‌ ಮಾಡಿದ್ದಾನೆ.

ಇದನ್ನೂ ಓದಿ: ಹಿಂಗೂ ಇದ್ಯಾ ಮಾರ್ರೆ…ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ 40 ರೂ. ಚಾರ್ಜ್‌ ಮಾಡಿದ ರೆಸ್ಟೋರೆಂಟ್‌

ನವೆಂಬರ್‌ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ 56 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈತನ ಓದುವ ಉತ್ಸಾಹವನ್ನು ನೋಡ್ತಾ ಇದ್ರೆ ಈತ ಮುಂದೊಂದು ದಿನ ಖಂಡಿತವಾಗಿಯೂ ದೊಡ್ಡ ಮನುಷ್ಯನಾಗ್ತಾನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಪ ಭಯದಿಂದ ಸ್ಕೂಟಿಯಲ್ಲೇ ಹೋಮ್‌ವರ್ಕ್‌ ಮಾಡ್ತಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ತಮಾಷೆಯಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ