Viral: ಹಿಂಗೂ ಇದ್ಯಾ ಮಾರ್ರೆ…ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ 40 ರೂ. ಚಾರ್ಜ್‌ ಮಾಡಿದ ರೆಸ್ಟೋರೆಂಟ್‌

ಜನರು ಕೆಲವು ತಮಾಷೆಯ ಸಂಗತಿಗಳ ಬಗ್ಗೆ, ಮೋಸ, ಸಮಸ್ಯೆಯ ವಿಚಾರಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಇಂತಹ ಪೋಸ್ಟ್‌ಗಳು ಸಾಕಷ್ಟು ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಕೂಡಾ ಅಂತಹದ್ದೇ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಮ್ಯಾಂಗೋ ಜ್ಯೂಸ್‌ ಜೊತೆಗೆ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ ರೆಸ್ಟೋರೆಂಟ್‌ ಬರೋಬ್ಬರಿ 40 ರೂ. ಬಿಲ್‌ ಹಾಕಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.

Viral: ಹಿಂಗೂ ಇದ್ಯಾ ಮಾರ್ರೆ…ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ 40 ರೂ. ಚಾರ್ಜ್‌ ಮಾಡಿದ ರೆಸ್ಟೋರೆಂಟ್‌
ವೈರಲ್​​ ಫೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 07, 2024 | 11:41 AM

ಹಣ ಮಾಡಲು, ಲಾಭಕ್ಕಾಗಿ ಎಂತೆಂತಹ ಖತರ್ನಾಕ್‌ ಪ್ಲಾನ್‌ಗಳನ್ನು ಮಾಡುವವರಿದ್ದಾರೆ. ಹೌದು ಜನರಿಗೆ ಸುಲಭವಾಗಿ ಟೋಪಿ ಹಾಕುವ ಮೂಲಕ ಲೂಟಿ ಮಾಡುತ್ತಾರೆ. ಇದೀಗ ಇದಕ್ಕೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಒಂದು ರೆಸ್ಟೋರೆಂಟ್‌ ಗ್ರಾಹಕರು ಕೊಳ್ಳುವ ಜ್ಯೂಸ್‌ಗಳಿಗೆ ಬಿಲ್‌ ಹಾಕುವುದು ಮಾತ್ರಲ್ಲದೆ, ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ ಬರೋಬ್ಬರಿ 40 ರೂ. ಬಿಲ್‌ ಹಾಕುವ ಮೂಲಕ ಗ್ರಾಹಕರಿಂದ ಹಣ ಲೂಟಿ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೆ. ಈ ಪ್ಲಾಸ್ಟಿಕ್‌ ಲೋಟಕ್ಕೂ ಬಿಲ್‌ ಹಾಕ್ತಾರೆ ಎಂಬ ವಿಚಾರ ತಿಳಿದು ಶಾಕ್‌ ಆದ ಗ್ರಾಹಕರೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮುಂಬೈನ ಥಾಣೆಯ ವಿವಿಯನ್‌ ಮಾಲ್‌ನಲ್ಲಿರುವ ಶಾಹಿ ದರ್ಬಾರ್‌ ರೆಸ್ಟೋರೆಂಟ್‌ ಜ್ಯೂಸ್‌ ಜೊತೆಗೆ ಒಂದು ಪ್ಲಾಸ್ಟಿಕ್‌ ಲೋಟಕ್ಕೂ ಬರೋಬ್ಬರಿ 40 ರೂ. ಚಾರ್ಜ್‌ ಮಾಡಿದೆ. ಈ ಬಿಲ್‌ ಫೋಟೋವನ್ನು ಮುಂಬೈ ನಿವಾಸಿ ರವಿ ಹಾಂಡಾ (ravihanda) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಜ್ಯೂಸ್‌ ಕುಡಿದ ಮೇಲೆ ಬಿಸಾಡುವಂತಹ ಪ್ಲಾಸ್ಟಿಕ್‌ ಗ್ಲಾಸ್‌ಗೆ 40 ರೂ. ಚಾರ್ಜ್‌ ಮಾಡುವವರಿದ್ದಾರೆಯೇ? ಮುಂಬೈ ತುಂಬಾ ದುಬಾರಿ ಎಂದು ಗೊತ್ತಿತ್ತು, ಆದ್ರೆ ಹಿಂಗೆ ಅನ್ನೋ ವಿಚಾರ ಗೊತ್ತಿರಲಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ರೆಸ್ಟೋರೆಂಟ್‌ ಬಿಲ್‌ ಫೋಟೋದಲ್ಲಿ ಒಂದು ಮ್ಯಾಂಗೋ ಜ್ಯೂಸ್‌ಗೆ 250 ರಂತೆ ಹಾಗೂ ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೆ ಒಂದಕ್ಕೆ 40 ರೂ. ನಂತೆ ಜಾರ್ಚ್‌ ಮಾಡಿರುವಂತಹ ಶಾಕಿಂಗ್‌ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಯಮುನಾ ನದಿಯ ವಿಷಕಾರಿ ನೊರೆಯನ್ನು ಶಾಂಪೂ ಎಂದು ತಪ್ಪಾಗಿ ಭಾವಿಸಿ ತಲೆ ಸ್ನಾನ ಮಾಡಿದ ಮಹಿಳೆ

ನವೆಂಬರ್‌ 04 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೋಡಿ ಹೇಗೆಲ್ಲಾ ಗ್ರಾಹಕರನ್ನು ವಂಚಿಸುತ್ತಾರೆ ಅಲ್ವಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ, ಮತ್ತೊಬ್ಬ ಬಳಕೆದಾರರು ʼಈ ಬೆಲೆಗೆ ಒಂದು ಗಾಜಿನ ಲೋಟವೇ ಸಿಗುತ್ತಿತ್ತುʼ ಎಂದು ಹೇಳಿದ್ದಾರೆ.

ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ