Viral: ಯಮುನಾ ನದಿಯ ವಿಷಕಾರಿ ನೊರೆಯನ್ನು ಶಾಂಪೂ ಎಂದು ತಪ್ಪಾಗಿ ಭಾವಿಸಿ ತಲೆ ಸ್ನಾನ ಮಾಡಿದ ಮಹಿಳೆ
ಅತಿಯಾದ ಮಾಲಿನ್ಯದ ಕಾರಣದಿಂದ ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಯಮುನಾ ನದಿ ಸಂಪೂರ್ಣವಾಗಿ ಕುಲುಷಿತವಾಗಿದ್ದು, ನದಿಯಲ್ಲಿ ದಟ್ಟ ನೊರೆ ಆವರಿಸಿದೆ. ಇದೇ ನದಿ ದಡದಲ್ಲಿ ಭಕ್ತರು ಛತ್ ಪೂಜೆಯನ್ನು ಕೂಡಾ ಮಾಡಿದ್ದು, ಈ ಪೂಜೆಯ ಸಂದರ್ಭದಲ್ಲಿ ವಯಸ್ಸಾದ ಮಹಿಳೆಯೊಬ್ಬರು ನದಿಯ ವಿಷಕಾರಿ ನೊರೆಯನ್ನು ಶಾಂಪೂ ಎಂದು ಭಾವಿಸಿ ಅದೇ ನೊರೆಯಲ್ಲಿ ತಲೆಗೂದಲನ್ನು ತೊಳೆದಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಮನುಷ್ಯನ ಸ್ವಾರ್ಥ ಮತ್ತು ಮಾಲಿನ್ಯದ ಕಾರಣದಿಂದಾಗಿ ಅದೆಷ್ಟೋ ಪವಿತ್ರ ನದಿಗಳು ಕಲುಷಿತಗೊಂಡಿವೆ. ಅದರಲ್ಲೂ ಸದ್ಯ ದೆಹಲಿಯ ಯಮುನಾ ನದಿ ಮಾಲಿನ್ಯದ ಕಾರಣದಿಂದ ವಿಷಪೂರಿತ ನೊರೆಯಿಂದ ತುಂಬಿ ಹೋಗಿದೆ. ಛತ್ ಪೂಜೆ ಸಂದರ್ಭದಲ್ಲಿಯೇ ಯಮುನಾ ನದಿಯ ಸ್ಥಿತಿ ಹದಗೆಟ್ಟಿದ್ದು, ಛತ್ ಪೂಜೆಯ ಸಂದರ್ಭದಲ್ಲಿ ಇದೇ ವಿಷಕಾರಿ ನೊರೆ ತುಂಬಿದ ನೀರಿನ ದಡದಲ್ಲಿ ನಿಂತು ಭಕ್ತರು ಸೂರ್ಯ ದೇವನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ನಡುವೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಛತ್ ಪೂಜೆಯ ಸಂದರ್ಭದಲ್ಲಿ ಯಮುನಾ ನದಿಗೆ ಇಳಿದ ವಯಸ್ಸಾದ ಮಹಿಳೆಯೊಬ್ಬರು ವಿಷಪೂರಿತ ನೊರೆಯನ್ನು ಶ್ಯಾಂಪೂ ಎಂದು ತಪ್ಪಾಗಿ ಭಾವಿಸಿ ಅದೇ ನೊರೆಯಲ್ಲಿ ತಲೆಗೂದಲನ್ನು ತೊಳೆದಿದ್ದಾರೆ. ಈ ದೃಶ್ಯ ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಈ ಘಟನೆ ನಡೆದಿದ್ದು, ಛತ್ ಪೂಜೆಯಲ್ಲಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಯಮುನಾ ನದಿ ನೀರಿಗೆ ಇಳಿದ ಸಂದರ್ಭದಲ್ಲಿ ನದಿಯಲ್ಲಿದ್ದ ನೊರೆಯನ್ನು ಕಂಡು ಇದು ಶ್ಯಾಂಪೂ ಇರಬೇಕೆಂದು ಭಾವಿಸಿ ವಯಸ್ಸಾದ ಮಹಿಳೆಯೊಬ್ಬರು ಅದೇ ನೊರೆಯಲ್ಲಿ ತಮ್ಮ ತಲೆ ಕೂದಲನ್ನು ತೊಳೆದಿದ್ದಾರೆ.
I’m saying it again, Basic education is necessary for everyone. Look at how this Aunty is washing her hairs thinking that foam is shampoo !!
📍 Chhath Puja scenes from Yamuna River, Delhi pic.twitter.com/3d4uwZXBZW
— ZORO (@BroominsKaBaap) November 5, 2024
ಈ ಕುರಿತ ವಿಡಿಯೋವನ್ನು BroominsKaBaap ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ”ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಎಲ್ಲರಿಗೂ ಮೂಲಭೂತ ಶಿಕ್ಷಣದ ಅಗತ್ಯವಿದೆ; ದೆಹಲಿಯ ಯಮುನಾ ನದಿಯಲ್ಲಿ ಛತ್ ಪೂಜೆಯ ಸಂದರ್ಭದಲ್ಲಿ ವಿಷಕಾರಿ ನೊರೆಯನ್ನು ಶ್ಯಾಂಪೂ ಎಂದುಕೊಂಡು ತಲೆ ಕೂದಲನ್ನು ತೊಳೆದ ಮಹಿಳೆʼʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುಮುನಾದ ನದಿಯಲ್ಲಿ ನಿಂತು ಒಂದುಷ್ಟು ಮಹಿಳೆಯರು ಛತ್ ಪೂಜೆಯ ಭಾಗವಾಗಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಅಲ್ಲೇ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬರು ಆ ನದಿಯಲ್ಲಿ ತುಂಬಿ ಹೋಗಿದ್ದ ವಿಷಕಾರಿ ನೊರೆಯನ್ನು ಶ್ಯಾಂಪೂ ಎಂದು ತಪ್ಪಾಗಿ ಭಾವಿಸಿ ಆ ನೊರೆಯನ್ನು ತಲೆ ಕೂದಲಿಗೆ ಹಾಕಿ ಚೆನ್ನಾಗಿ ಕೂದಲು ತಿಕ್ಕಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕಪ್ಪು ಬಿಳುಪು ಗೆರೆಗಳಿರುವ ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದು ಎಂದು ಹುಡುಕಬಲ್ಲಿರಾ?
ನವೆಂಬರ್ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಪ್ರತಿಯೊಬ್ಬರಿಗೂ ಮೂಲಭೂತ ಶಿಕ್ಷಣ ತುಂಬಾನೇ ಮುಖ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಜನ ಇಷ್ಟೊಂದು ಮೂರ್ಖರೇʼ ಎಂದು ಪ್ರಶ್ನೆ ಕೇಳಿದ್ದಾರೆ.
ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ