ಹುಟ್ಟಿದ ಕೆಲವೇ ಗಂಟೆಯಲ್ಲಿ ಫೇಸ್ ಬುಕ್ ಮೂಲಕ ಮಗುವನ್ನು ಮಾರಾಟ ಮಾಡಿದ ಮಹಿಳೆ
ಅಮೇರಿಕದ ಟೆಕ್ಸಾಸ್‌ನಲ್ಲಿ 21 ವರ್ಷದ ಜುನಿಪರ್ ಬ್ರೈಸನ್ ಎಂಬ ಮಹಿಳೆ ತನ್ನ ಹೆರಿಗೆಯಾದ ಕೆಲವೇ ಗಂಟೆಗಳ ನಂತರ ತನ್ನ ನವಜಾತ ಶಿಶುವನ್ನು ಫೇಸ್‌ಬುಕ್ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿದ್ದಾಳೆ. ಹಣಕಾಸಿನ ತೊಂದರೆಯಿಂದಾಗಿ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಹೇಳಿಕೊಂಡಿದ್ದಾಳೆ. ಪೊಲೀಸರು ಮಗುವನ್ನು ರಕ್ಷಿಸಿ ಮಹಿಳೆಯನ್ನು ಬಂಧಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಮಾರಾಟಕ್ಕೆ ಮುಂದಾಗಿದ್ದು, ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಜುನಿಪರ್ ಬ್ರೈಸನ್(21) ಮಗುವಿನ ಫೋಟೋವನ್ನು ಫೇಸ್‌ಬುಕ್ನ ಮಗು ದತ್ತು ಪಡೆಯಲು ಬಯಸುವ ದಂಪತಿಗಳ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಪ್ರಾರಂಭದಲ್ಲಿ ಯಾವುದೇ ಹಣಕ್ಕೆ ಬೇಡಿಕೆ ಇಡದ ಈ ಮಹಿಳೆ ಬಳಿಕ ಸಾಕಷ್ಟು ದಂಪತಿಗಳು ದತ್ತು ಪಡೆಯಲು ಮುಂದೆ ಬಂದಾಗ ಹಣದ ಬೇಡಿಕೆ ಇಟ್ಟಿದ್ದಾಳೆ.
ಇದನ್ನೂ ಓದಿ: ಹಿಂಗೂ ಇದ್ಯಾ ಮಾರ್ರೆ…ಜ್ಯೂಸ್ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಕ್ಕೂ 40 ರೂ. ಚಾರ್ಜ್ ಮಾಡಿದ ರೆಸ್ಟೋರೆಂಟ್
ಹಣಕಾಸಿನ ತೊಂದರೆಗಳಿಂದ ನಾನು ನನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ಜುನಿಪರ್ ಹೇಳಿಕೊಂಡಿದ್ದಾಳೆ. 150 ಡಾಲರ್ ಅಂದರೆ ಸುಮಾರು 12 ಸಾವಿರ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾಳೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯ ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ