ಅಮ್ಮನೊಂದಿಗೆ ಹೋಗುವಾಗ ಕಾಲು ಜಾರಿ ಬಾವಿಗೆ ಬಿದ್ದ ಆನೆಮರಿ ಬದುಕುಳಿದಿದ್ದು ಹೇಗೆ?
ಒಡಿಶಾದ ದಿಯೋಗರ್‌ನಲ್ಲಿ ಪಾಳುಬಿದ್ದ ಬಾವಿಗೆ ಆನೆ ಮರಿಯೊಂದು ಬಿದ್ದಿತ್ತು. ಅಮ್ಮನೊಂದಿಗೆ ಕಾಡಿನಲ್ಲಿ ಹೋಗುತ್ತಿದ್ದ ಆನೆ ಮರಿ ನಿಯಂತ್ರಣ ತಪ್ಪಿ ಬಾವಿಯೊಳಗೆ ಬಿದ್ದಿತ್ತು. ಅರಣ್ಯ ಇಲಾಖೆಯಿಂದ ಮರಿ ಆನೆಯ ರಕ್ಷಣಾ ಕಾರ್ಯಾಚರಣೆ ಹೇಗಿತ್ತೆಂಬ ವಿಡಿಯೋ ಇಲ್ಲಿದೆ.
ಪುರಿ: ಕಾಡುಪ್ರಾಣಿಗಳಿಗೆ ಸಂಬಂಧಿಸಿದ ವಿಷಯವನ್ನು ನಿಯಮಿತವಾಗಿ ಪೋಸ್ಟ್ ಮಾಡಲು ಹೆಸರುವಾಸಿಯಾಗಿರುವ ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ, ಒಡಿಶಾದ ದಿಯೋಗರ್‌ನಲ್ಲಿ ನಡೆದ ಘಟನೆಯ ಬಗ್ಗೆ ನೆಟಿಜನ್‌ಗಳಿಗೆ ಮಾಹಿತಿ ನೀಡಿದ್ದಾರೆ. ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಜೆಸಿಬಿಯಿಂದ ಮಣ್ಣು ತೆಗೆದು ಮರಿ ಆನೆಯನ್ನು ಹೊರಗೆ ಕರೆತರಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos