Viral: ನಾನು ಡೊನಾಲ್ಡ್‌ ಟ್ರಂಪ್‌ ಮಗಳು ಎಂದ ಪಾಕಿಸ್ತಾನಿ ಯುವತಿ; ವೈರಲ್‌ ಆಯ್ತು ವಿಡಿಯೋ

2024 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಈ ನಡುವೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಪಾಕಿಸ್ತಾನಿ ಯುವತಿಯೊಬ್ಬಳು ನಾನು ಡೊನಾಲ್ಡ್‌ ಟ್ರಂಪ್‌ ಮಗಳು, ಮೆಲಾನಿಯ ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಬಂದ್ರು ಎಂಬ ಸ್ಟೇಟ್‌ಮೆಂಟ್‌ ನೀಡಿದ್ದಾಳೆ. ಈ ವಿಡಿಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 07, 2024 | 3:31 PM

ಅಮೆರಿಕದಲ್ಲಿ ನವೆಂಬರ್‌ 5 ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ತಮ್ಮ ಎದುರಾಳಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ನಡುವೆ ಟ್ರಂಪ್‌ಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದ್ದು, ಪಾಕಿಸ್ತಾನಿ ಯುವತಿಯೊಬ್ಬಳು ನಾನು ಟ್ರಂಪ್‌ ಮಗಳು, ಮೆಲಾನಿಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ವಾಪಸ್‌ ಕರೆದುಕೊಂಡು ಬಂದ್ರು ಎಂಬ ಸ್ಟೇಟ್‌ಮೆಂಟ್‌ ನೀಡಿದ್ದಾಳೆ. ಸದ್ಯ ಈ ದೃಶ್ಯ ಸಖತ್‌ ವೈರಲ್‌ ಆಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ ತಾನು ಮುಸ್ಲಿಂ ಮತ್ತು ಪಂಜಾಬಿ ಮೂಲಕ್ಕೆ ಸೇರಿದವಳು ಆದರೆ ನನ್ನ ತಂದೆ ಟ್ರಂಪ್‌ ಎಂದು ಉರ್ದುವಿನಲ್ಲಿ ಹೇಳಿದ್ದಾಳೆ. ಜೊತೆಗೆ ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಬಂದ್ರು ಎಂದು ಹೇಳಿದ್ದಾಳೆ. 2018 ನೇ ಇಸವಿಯಲ್ಲಿ ನಡೆದ ಘಟನೆ ಇದಾಗಿದ್ದು, ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗಿದೆ.

ಈ ಕುರಿತ ವಿಡಿಯೋವೊಂದನ್ನು MeghUpdates ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಾನು ಟ್ರಂಪ್‌ ಮಗಳು ಎಂದು ಹೇಳಿಕೊಂಡ ಪಾಕಿಸ್ತಾನಿ ಯುವತಿ” ಎಂಬ ಶೀರ್ಷಿಕೆನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ನಾನು ಟ್ರಂಪ್‌ ಮಗಳು, ಆದರೆ ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನಾನು ಪಾಕಿಸ್ತಾನಕ್ಕೆ ಬರಬೇಕಾಯಿತು ಎಂದು ಉರ್ದು ಭಾಷೆಯಲ್ಲಿ ಹೇಳುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 14 ವರ್ಷದ ಬಾಲಕಿಯ ಜತೆ ಸಂಭೋಗ ನಡೆಸಿ ಪ್ರಾಣ ಕಳೆದುಕೊಂಡ 41ರ ಹರೆಯದ ವ್ಯಕ್ತಿ

ನವೆಂಬರ್‌ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂತಾ ಹಾಸ್ಯ ಈಕೆಯದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೆಲ್ಲಾ ಪಾಕಿಸ್ತಾನದಲ್ಲಿ ಮಾತ್ರ ಕಂಡು ಬರಲು ಸಾಧ್ಯʼ ಎಂದು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ