Viral: ಆ ಸಂಭಾಜಿ ಮಹರಾಜ ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು; ಮುಸ್ಲಿಂ ಮಹಿಳೆಯ ವಿವಾದಾತ್ಮಕ ಹೇಳಿಕೆ
ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ವಿಧಾನಸಭೆ ಚುನಾವಣೆಯ ನಿಮಿತ್ತ ಮಹಾರಾಷ್ಟ್ರದಲ್ಲಿ ನಡೆದ ಓವೈಸಿ ರ‍್ಯಾಲಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದು ಔರಂಗಬಾದ್ ನಗರ ಇದರ ಹೆಸರನ್ನು ಸಂಭಾಜಿ ನಗರ ಎಂದು ಬದಲಾಯಿಸಲು ನೀವ್ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು ಎಂದು ತನ್ನ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಹಿಳೆಯ ಈ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮವೂ ಜೋರಾಗಿದೆ. ಜೊತೆಗೆ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರದಲ್ಲೂ ತೊಡಗಿವೆ. ಇದೀಗ ಒವೈಸಿ ಪ್ರಚಾರ ರ‍್ಯಾಲಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಇದು ಔರಂಗಬಾದ್ ನಗರ ಇದರ ಹೆಸರನ್ನು ಸಂಭಾಜಿ ನಗರ ಎಂದು ಬದಲಾಯಿಸಲು ನೀವ್ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು ಎಂದು ತನ್ನ ಭಾಷಣದಲ್ಲಿ ಕಿಡಿ ಕಾರಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮಹಿಳೆಯ ಈ ಹೇಳಿಕೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರ ಚುನಾವಣಾ ರ‍್ಯಾಲಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಇದು ಸಂಭಾಜಿ ನಗರ ಅಲ್ಲ, ಇದು ಔರಂಗಬಾದ್ ನಗರ, ಈ ಭೂಮಿ ನಿಜಾಮರಿಗೆ ಮಾತ್ರ ಸೇರಿದ್ದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
Muslim woman at Owaisi rally in Maharashtra:
Who was Sambhaji Maharaj? Who are you to chnage name of Aurangabad to Sambhajinagar?This land belongs to Razakars of Nizam (Malik Ambar).” pic.twitter.com/a8vzZJUM95
— Megh Updates 🚨™ (@MeghUpdates) November 8, 2024
ಈ ಕುರಿತ ವಿಡಿಯೋವನ್ನು MeghUpdates ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸಂಭಾಜಿ ಮಹಾರಾಜರು ಯಾರು? ಔರಂಗಬಾದ್‌ನ ಹೆಸರನ್ನು ಬದಲಾಯಿಸಲು ನೀವು ಯಾರು ಈ ಭೂಮಿ ನಿಜಾಮರದ್ದು; ಮಹರಾಷ್ಟ್ರದ ಓವೈಸಿ ರ‍್ಯಾಲಿಯಲ್ಲಿ ಹೇಳಿಕೆ ನೀಡಿದ ಮುಸ್ಲಿಂ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಸಂಭಾಜಿ ಮಹರಾಜ ಯಾರು? ಜೌರಂಗಬಾದ್ ಹೆಸರನ್ನು ಬದಲಾಯಿಸಲು ನೀವು ಯಾರು? ಬಂಜರು ನಗರವಾಗಿದ್ದ ಈ ಭೂಮಿಯನ್ನು ಅಭಿವೃದ್ಧಿ ಮಾಡಿದವರೇ ಮಲಿಕ್ ಅಂಬರ್. ನೀವು ಇತಿಹಾಸವನ್ನು ಹೇಗೆ ಬದಲಾಯಿಸುತ್ತೀರಿ? ಈ ಭೂಮಿ ನಿಜಾಮರದ್ದು ಎಂದು ಮಹಿಳೆಯೊಬ್ಬರು ಭಾಷಣದಲ್ಲಿ ಕಿರುಚಾಡುತ್ತಾ ವಿವಾದಾತ್ಮಕ ಹೇಳಿಕೆನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಪಹರಣಕಾರರಿಂದ 10 ವರ್ಷದ ಬಾಲಕಿಯನ್ನು ಕಾಪಾಡಿದ ಬೀದಿ ನಾಯಿಗಳು
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಭೂಮಿ ಹಿಂದೂಸ್ಥಾನಕ್ಕೆ ಸೇರಿದ್ದು ಎಂಬ ಇತಿಹಾಸವನ್ನು ಮೊದಲು ಈಕೆ ತಿಳಿಯಲಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮಲ್ಲಿ ಔರಂಗಬಾದ್ ಎಂದು ಕರೆಯಲ್ಪಡುವ ಯಾವುದೇ ನಗರಲಿಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸರಿಯಾಗಿ ಮುಖ ತೋರಿಸಲು ಸಾಧ್ಯವಾಗದ ಜನರ ಹೇಳಿಕೆಗೆ ಇಲ್ಲಿ ಬೆಲೆ ಇಲ್ಲʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ