Fact Check: ಭಾರತ-ಪಾಕ್ ಸೈನಿಕರು ಗಡಿಯಲ್ಲಿ ಸಿಹಿ ಹಂಚಿ ದೀಪಾವಳಿ ಸಂಭ್ರಮಿಸಿದ್ದು ನಿಜವೇ?
2024 ರ ದೀಪಾವಳಿಯ ಸಂದರ್ಭದಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದೆ ಎಂಬ ಹೇಳಿಕೆಯೊಂದಿಗೆ ಸೈನಿಕರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗುತ್ತಿದೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ಆಚರಿಸಿದ್ದಾರೆ. ಹಿಂದೂಗಳು, ಸಿಖ್ಖರು, ಜೈನರು ಮತ್ತು ಇತರ ಧರ್ಮದವರಿಗೂ ಇದು ಪ್ರಮುಖ ಹಬ್ಬವಾಗಿದೆ. ಪ್ರಪಂಚದಾದ್ಯಂತ ಸುಮಾರು ಒಂದು ಬಿಲಿಯನ್ ಜನರು ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಎಲ್‌ಒಸಿಯ ಬಾರಾಮುಲ್ಲಾ ಸೆಕ್ಟರ್‌ನಲ್ಲಿರುವ ಉರಿಯಲ್ಲಿ ಭಾರತೀಯ ಸೇನೆ ಕೂಡ ಜವಾನರು ಗ್ರಾಮಸ್ಥರೊಂದಿಗೆ ಹಬ್ಬವನ್ನು ಆಚರಿಸಿದರು. ಸೇನೆ ಮತ್ತು ಸ್ಥಳೀಯರು ಉಡುಗೊರೆ ಕೊಟ್ಟು, ಸಿಹಿ ಹಂಚಿದ ದೃಶ್ಯಗಳು ಕಂಡು ಬಂದವು.
ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತದ ಸಶಸ್ತ್ರ ಪಡೆಗಳೊಂದಿಗೆ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಪಾಕಿಸ್ತಾನದ ಗಡಿಯಲ್ಲಿರುವ ಬಿಎಸ್‌ಎಫ್ ಔಟ್‌ಪೋಸ್ಟ್‌ಗೆ ಭೇಟಿ ನೀಡಿದ ಅವರು, ಸೈನಿಕರೊಂದಿಗೆ ಸಂವಾದ ನಡೆಸಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡರು.
ಇದರ ಮಧ್ಯೆ, 2024 ರ ದೀಪಾವಳಿಯ ಸಂದರ್ಭದಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದೆ ಎಂಬ ಹೇಳಿಕೆಯೊಂದಿಗೆ ಸೈನಿಕರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗುತ್ತಿದೆ.
ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ಭಾರತ-ಪಾಕಿಸ್ತಾನ ಗಡಿಯಲ್ಲಿ ದೀಪಾವಳಿಯ ಸಿಹಿತಿಂಡಿಗಳನ್ನು ಹಂಚಲಾಗಿದೆ. ಇದು ಎಲ್ಲಾ ಅವರ ಆಟ. ಇದು ಭಯೋತ್ಪಾದಕರದ್ದು ಎಂದು ತೋರಿಸುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
भारत पाकिस्तान बोर्डर पर दिवाली की मिठाई का आपस में लेना देना, ये दर्शाता है कि सारा गलत खेल केवल अंध भक्त और नेताओं का है, और कुछ आतंकियों का है, pic.twitter.com/ec85rJjjpY
— A K Bhohariya (@k54176) November 2, 2024
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಇಲ್ಲಿ ನೋಡಬಹುದು.
भारत पाकिस्तान बोर्डर पर दिवाली की मिठाई का आपस में लेना देना, ये दर्शाता है कि सारा गलत खेल केवल अंध भक्त और नेताओं का है, और कुछ आतंकियों का है। pic.twitter.com/M4CIU2PVHe
— Shafiq Ahmad INC✋ (भारत जोड़ो यात्री) (@ShafiqA80730195) November 2, 2024
Fact Check:
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು ನಾವು ಮೊದಲು ಗೂಗಲ್ ಲೆನ್ಸ್‌ನಲ್ಲಿ ಈ ವಿಡಿಯೋದ ಕೀಫ್ರೇಮ್‌ಗಳನ್ನು ಹುಡುಕಿದೆವು. ಆಗ ಜನವರಿ 26, 2015 ರಂದು ಸುದ್ದಿ ಸಂಸ್ಥೆ ANI ನ X ಖಾತೆಯಲ್ಲಿ ಈ ವಿಡಿಯೋದ ಎರಡು ಸ್ಕ್ರೀನ್‌ಗ್ರಾಬ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ‘ಕಮಾನ್ ಸೇತು, ಉರಿ (ಜಮ್ಮು-ಕಾಶ್ಮೀರ): 66ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೇನೆಗಳ ನಡುವೆ ಸಿಹಿ ವಿನಿಮಯ ಸಮಾರಂಭ’ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ.
Kaman Setu,Uri (J&K): Sweets exchange ceremony between Indian & Pak Army on the occasion of 66th Republic Day pic.twitter.com/A2oGEiFNOY
— ANI (@ANI) January 26, 2015
ಇದನ್ನೂ ಓದಿ: Fact Check: ತೆಲಂಗಾಣದ ಹನುಮಾನ್ ಮಂದಿರದ ಧ್ವಂಸ ಘಟನೆಗೆ ಕೋಮು ಬಣ್ಣ: ನಿಜವಾಗಿ ನಡೆದಿದ್ದೇನು?
ಹಾಗೆಯೆ 26 ಜನವರಿ 2015 ರಂದು ಅನೇಕ ಖಾಸಗಿ ವೆಬ್ಸೈಟ್ನಲ್ಲಿ ಈ ವಿಷಯದ ಕುರಿತು ಪ್ರಕಟವಾದ ಸುದ್ದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಸುದ್ದಿಯಲ್ಲಿ ವೈರಲ್ ವಿಡಿಯೋ ಕೂಡ ಅಡಕವಾಗಿದೆ. ಸುದ್ದಿ ಪ್ರಕಾರ, ‘‘66 ನೇ ಗಣರಾಜ್ಯೋತ್ಸವದ ಸಂದರ್ಭ, ಗಡಿ ನಿಯಂತ್ರಣ ರೇಖೆಯಲ್ಲಿ (LOC) ನಿಯೋಜಿಸಲಾದ ಭಾರತ ಮತ್ತು ಪಾಕಿಸ್ತಾನಿ ಸೈನಿಕರು ಪರಸ್ಪರ ಸಿಹಿ ಹಂಚಿದರು. ಶ್ರೀನಗರ-ಮುಜಫರಾಬಾದ್ ರಸ್ತೆಯಲ್ಲಿರುವ ಉರಿ ಸೆಕ್ಟರ್‌ನಲ್ಲಿರುವ ಕಮಾಂಡ್ ಪೋಸ್ಟ್‌ನಲ್ಲಿ ಸೇನೆಯ 12 ನೇ ಪದಾತಿ ದಳದ ಘಟಕವು ತಮ್ಮ ಪಾಕಿಸ್ತಾನಿ ಸಹವರ್ತಿಗಳೊಂದಿಗೆ ಸಿಹಿ ವಿನಿಮಯ ಮಾಡಿಕೊಂಡಿತು’’ ಎಂಬ ಮಾಹಿತಿ ಇದೆ. ಆದರೆ, ಪ್ರತಿ ದೀಪಾವಳಿಯಂದು ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ಪಾಕಿಸ್ತಾನಿ ಸೈನಿಕರಿಗೆ ಸಿಹಿ ತಿನ್ನಿಸುತ್ತಿರುವುದು ನಿಜ. ಅದೇ ರೀತಿ, ಈದ್ ಸಂದರ್ಭದಲ್ಲಿ ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡುತ್ತಾರೆ. ಇದು ಸಂಪ್ರದಾಯವಾಗಿ ಮಾರ್ಪಟ್ಟಿದೆ. ಆದರೆ, ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ.
ಹೀಗಾಗಿ 2015 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾಡಿದ ವಿಡಿಯೋ ಇದಾಗಿದ್ದು, 2024 ರ ದೀಪಾವಳಿಯ ಸಂದರ್ಭದಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದೆ ಎಂಬ ಹೇಳಿಕೆ ಸುಳ್ಳು ಎಂಂದು ನಮ್ಮ ತನಿಖೆಯಿಂದ ಕಂಡುಹಿಡಿದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ