AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2050ಕ್ಕೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ, ಹಿಂದೂ ಧರ್ಮ ವಿಶ್ವದ 3ನೇ ಅತಿದೊಡ್ಡ ಧರ್ಮ: ವರದಿಯಲ್ಲಿ ಬಹಿರಂಗ

ಈ ಪ್ರಪಂಚವು ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ , ಸಿಖ್ ಹೀಗೆ ವಿವಿಧ ಧರ್ಮಗಳ ಜನರಿಗೆ ನೆಲೆಯಾಗಿದೆ. ಇನ್ನು ಕೆಲವು ದೇಶಗಳಲ್ಲಿ ಕೆಲವು ಧರ್ಮದ ಜನರನ್ನು ಮಾತ್ರ ಕಾಣಬಹುದು. ಆದರೆ 2050 ರ ವೇಳೆಗೆ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಭಾರತವು ಹೊರಹೊಮ್ಮಲಿದೆಯಂತೆ. ಇದೀಗ ಪ್ಯೂ ರಿಸರ್ಚ್ ಸೆಂಟರ್ ಪ್ರಕಟಿಸಿದ ವರದಿಯಲ್ಲಿ ಭಾರತವು 2050 ರ ವೇಳೆಗೆ (311 ಮಿಲಿಯನ್) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎನ್ನಲಾಗಿದೆ.

2050ಕ್ಕೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ, ಹಿಂದೂ ಧರ್ಮ ವಿಶ್ವದ 3ನೇ ಅತಿದೊಡ್ಡ ಧರ್ಮ: ವರದಿಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Dec 27, 2024 | 11:03 AM

Share

ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದು. ಇಲ್ಲಿ ವಿವಿಧ ಧರ್ಮದ ಜನರು, ವಿವಿಧ ಭಾಷೆ ಮಾತನಾಡುವವರು ಹಾಗೂ ವಿವಿಧ ಸಂಸ್ಕೃತಿಯನ್ನು ಅನುಸರಿಸುವವರನ್ನು ಕಾಣಬಹುದು. ಆದರೆ ವರದಿಯೊಂದರ ಪ್ರಕಾರ 2050ರ ವೇಳೆಗೆ ಭಾರತವು ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ. ಅದರೊಂದಿಗೆ ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಹೌದು, ಪ್ಯೂ ರಿಸರ್ಚ್‌ ಸೆಂಟರ್ ಪ್ರಕಟಿಸಿದ ವರದಿಯಲ್ಲಿ ಹಿಂದೂ ಧರ್ಮವು 2050 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಲಿದೆ. ಭಾರತವು ಇಂಡೋನೇಷ್ಯಾವನ್ನು ಮುಸ್ಲಿಂ ಜನಸಂಖ್ಯೆಯಲ್ಲಿ ಹಿಂದಿಕ್ಕಲಿದ್ದು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ಪಾಕಿಸ್ತಾನವು ಎರಡನೇ ಅತಿ ಹೆಚ್ಚು ಮುಸ್ಲಿಮರನ್ನು (273 ಮಿಲಿಯನ್) ಹೊಂದುವ ನಿರೀಕ್ಷೆಯಿದೆ. ಪ್ರಸ್ತುತ, ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಇಂಡೋನೇಷ್ಯಾವು 2050 ರ ವೇಳೆಗೆ 257 ಮಿಲಿಯನ್ ಮುಸ್ಲಿಮರೊಂದಿಗೆ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.

2050ರ ವೇಳೆಗೆ ಭಾರತವು 31 ಕೋಟಿ ಮುಸ್ಲಿಮರನ್ನು ಹೊಂದಲಿದ್ದು, ಜಾಗತಿಕ ಮುಸ್ಲಿಂ ಜನಸಂಖ್ಯೆಯ 11% ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. 2010 ರಲ್ಲಿ, ಮುಸ್ಲಿಮರ ಒಟ್ಟು ಜನಸಂಖ್ಯೆಯ 14.4% ರಷ್ಟಿತ್ತು. ಆದರೆ 2050ರ ವೇಳೆಗೆ ಇದು 18.4% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

India Muslim Population 2050

India Muslim Population 2050

ಪ್ಯೂ ರಿಸರ್ಚ್ ಸೆಂಟರ್‌ನ “ದಿ ಫ್ಯೂಚರ್ ಆಫ್ ವರ್ಲ್ಡ್ ರೀಜನ್ಸ್” ಅಧ್ಯಯನವು 2050 ರ ವೇಳೆಗೆ ವಿಶ್ವಾದ್ಯಂತ ಹಿಂದೂ ಜನಸಂಖ್ಯೆಯು ಸುಮಾರು 34% ರಷ್ಟು ಹೆಚ್ಚಾಗುತ್ತದೆ. ಅಂದರೆ 1.03 ಶತಕೋಟಿಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು 14.9% ರಷ್ಟಿದ್ದಾರೆ. ಕ್ರಿಶ್ಚಿಯನ್ನರು 31.4% ಮತ್ತು ಮುಸ್ಲಿಮರು 29.7% ಇದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಅಬ್ಬಬ್ಬಾ… ಈ ವ್ಯಕ್ತಿಗೆ 12 ಹೆಂಡ್ತಿಯರು, 102 ಮಕ್ಳು, 578 ಮೊಮ್ಮಕ್ಕಳು

ವಿಶ್ವದ ಈ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಹಿಂದೂಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಲಿದೆ. ವರದಿಯ ಪ್ರಕಾರ 2050 ರಲ್ಲಿ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನಲಾಗಿದೆ. ಹೌದು, 2010 ರಲ್ಲಿ ಶೇಕಡಾ 1.6 ರಷ್ಟಿದ್ದ ಜನಸಂಖ್ಯೆಯೂ 2050 ರಲ್ಲಿ ಶೇಕಡಾ 1.3 ರಷ್ಟು ಇಳಿಕೆ ಕಾಣಲಿದೆ. ಬಾಂಗ್ಲಾದೇಶದಲ್ಲಿ 2010 ರಲ್ಲಿ ಶೇಕಡಾ 8.5 ರಷ್ಟಿತ್ತು, ಆದರೆ 2050 ರಲ್ಲಿ ಹಿಂದೂಗಳ ಸಂಖ್ಯೆಯೂ ಶೇಕಡಾ 7.2 ಇಳಿಕೆಯಾಗಿದೆ. ಇನ್ನು ಉಳಿದಂತೆ ಅಫ್ಘಾನಿಸ್ತಾನದಲ್ಲಿಯೂ ಶೇಕಡಾ 0.4 ರಿಂದ 0.3 ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Thu, 26 December 24

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ