Brain Teaser: 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿದ್ರೆ, 20 ವರ್ಷಗಳ ನಂತರ ನನ್ನ ವಯಸ್ಸು ಎಷ್ಟು? ಉತ್ತರ ಹೇಳಿ
ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ನೀವು ಎಷ್ಟು ಬುದ್ಧಿವಂತರು ಎಂದು ಪರೀಕ್ಷಿಸುವ ಬ್ರೈನ್ ಟೀಸರ್ ಚಿತ್ರವೊಂದು ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿತ್ತು. 20 ವರ್ಷಗಳ ನಂತರ ನನ್ನ ವಯಸ್ಸು ಎಷ್ಟು? ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಇದರ ಸರಿಯಾದ ಉತ್ತರವನ್ನು ನೀವು ಹೇಳಬಲ್ಲಿರಾ.
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಬ್ರೈನ್ ಟೀಸರ್‌ಗಳು ಕೇವಲ ಮೆದುಳಿಗೆ ಮಾತ್ರವಲ್ಲದೇ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಮೇಲ್ನೋಟಕ್ಕೆ ಈ ಕೆಲವು ಪ್ರಶ್ನೆಗಳು ಟ್ರಿಕ್ಕಿ ಎನಿಸಿದರೂ ಉತ್ತರವು ಅಷ್ಟೇ ಸುಲಭವಾಗಿರುತ್ತದೆ. ಇಂತಹ ಒಗಟಿನ ಚಿತ್ರಗಳು ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುತ್ತದೆ. ಇದೀಗ ಬ್ರೈನಿ ಕ್ವಿಜ್ ಹೆಸರಿನ ಖಾತೆಯಲ್ಲಿ ಈ ಒಗಟಿನ ಪ್ರಶ್ನೆಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
ಇದರಲ್ಲಿ 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿತ್ತು. ಆದರೆ 20 ವರ್ಷಗಳ ನಂತರ, ನನ್ನ ವಯಸ್ಸು ಎಷ್ಟು?” ಎನ್ನುವ ಒಗಟಿನ ಪ್ರಶ್ನೆಯಿದೆ. ಈ ಪೋಸ್ಟ್ 2000 ಅಧಿಕ ವೀಕ್ಷಣೆಗಳನ್ನು ಕಂಡಿದ್ದ 100 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, “ನಿಮಗೆ 60 ವರ್ಷ! ಗಣಿತ ಎಂದಿಗೂ ಸುಳ್ಳಲ್ಲ ಎಂದಿದ್ದಾರೆ.
ಮತ್ತೊಬ್ಬರು, “ಪ್ರಶ್ನೆಯನ್ನು ರೂಪಿಸಿದ ವಿಧಾನದಿಂದಾಗಿ ಈ ಒಗಟನ್ನು ಟ್ರಿಕ್ಕಿ ಮಾಡುತ್ತದೆ, ಆದರೆ ನೀವು ತಾರ್ಕಿಕವಾಗಿ ಯೋಚಿಸಿದರೆ ಉತ್ತರ ನೇರವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು,” ಈ ಒಗಟನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾನು ಎರಡು ಬಾರಿ ಓದಬೇಕಾಯಿತು, ಅದ್ಭುತ ಒಗಟು!” ಎಂದಿದ್ದಾರೆ. ಈ ಒಗಟಿನ ಪ್ರಶ್ನೆಗೆ ಹೀಗೆ ನೂರಾರು ಕಾಮೆಂಟ್ ಗಳು ಬಂದಿದೆ.
ಇದನ್ನೂ ಓದಿ: 2050ಕ್ಕೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ, ಹಿಂದೂತ್ವ ವಿಶ್ವದ 3ನೇ ಅತಿದೊಡ್ಡ ಧರ್ಮ: ವರದಿಯಲ್ಲಿ ಬಹಿರಂಗ
ಉತ್ತರ ಇಲ್ಲಿದೆ:
Your Brain TEST ❓ Quickly Answer 🤔 pic.twitter.com/yTTdRS4pP3
— Brainy quiz (@brainyquiz_) December 23, 2024
ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಹಾಗಾದ್ರೆ ಹೆಚ್ಚು ಚಿಂತಿಸಬೇಡಿ 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿತ್ತು. ಆದರೆ 20 ವರ್ಷಗಳ ನಂತರ, ನನ್ನ ವಯಸ್ಸು ಎಷ್ಟು?” ಎನ್ನುವ ಪ್ರಶ್ನೆಯ ಉತ್ತರ ಬಲು ಸುಲಭ. ಪ್ರಸ್ತುತ ಆ ವ್ಯಕ್ತಿಗೆ 40 ವರ್ಷ ಆಗಿದ್ದು, 20 ವರ್ಷಗಳ ನಂತರ ಆತನ ವಯಸ್ಸು 60 ವರ್ಷಗಳಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ