Viral: ಅಬ್ಬಬ್ಬಾ… ಈ ವ್ಯಕ್ತಿಗೆ 12 ಹೆಂಡ್ತಿಯರು, 102 ಮಕ್ಳು, 578 ಮೊಮ್ಮಕ್ಕಳು

ಹಿಂದಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಬಹುಪತ್ನಿತ್ವ, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಈಗಿನ ಕಾಲದಲ್ಲಿ ಇಲ್ವೇ ಇಲ್ಲಾ ಅಂತ ಹೇಳ್ಬೋದು. ಅಂತದ್ರಲ್ಲಿ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ 12 ಮದುವೆಯಾಗಿದ್ದಾನೆ. ಈತ ಒಟ್ಟು 102 ಮಕ್ಕಳು ಹಾಗೂ 578 ಮೊಮ್ಮಕ್ಕಳನ್ನು ಹೊಂದಿದ್ದು, ಈತನ ತುಂಬು ಪರಿವಾರದ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಅಬ್ಬಬ್ಬಾ… ಈ ವ್ಯಕ್ತಿಗೆ 12 ಹೆಂಡ್ತಿಯರು, 102 ಮಕ್ಳು, 578 ಮೊಮ್ಮಕ್ಕಳು
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2024 | 3:28 PM

ಹಿಂದೆಲ್ಲಾ ಕೂಡು ಕುಟುಂಬಗಳೇ ಹೆಚ್ಚಿದ್ದವು. ಆದ್ರೆ ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬಹುತೇಕ ಹೆಚ್ಚಿನ ಕಡೆ ಬರೀ ವಿಭಕ್ತ ಕುಟುಂಬಗಳೇ ಕಾಣಿಸುತ್ತವೆ. ಒಂದು ಮನೆಯಲ್ಲಿ ಅಪ್ಪ-ಅಮ್ಮ, ಮಕ್ಕಳು, ಇಬ್ಬರು ಮೊಮ್ಮಕ್ಕಳು ಇದ್ದರೇ ಅದೇ ಹೆಚ್ಚು. ಇನ್ನೂ ಈಗಂತೂ ಹಿಂದೆಲ್ಲಾ ಅಸ್ತಿತ್ವದಲ್ಲಿದ್ದ ಬಹು ಪತ್ನಿತ್ವ ಪರಿಕಲ್ಪನೆಯೇ ಇಲ್ಲ ಬಿಡಿ, ಬಹುತೇಕ ಎಲ್ಲರೂ ನಾವಿಬ್ಬರು ನಮಗಿಬ್ಬರು ಎಂಬಂತೆ ತಮ್ಮದೇ ಪುಟ್ಟ ಪ್ರಪಂಚದಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ… ಬರೋಬ್ಬರಿ 12 ಮದುವೆಯಾಗಿ, ಒಟ್ಟು 102 ಮಕ್ಕಳು ಹಾಗೂ 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಈತನ ತುಂಬು ಪರಿವಾರದ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಆಫ್ರಿಕಾದ ಉಗಾಂಡದಲ್ಲಿನ ಮೂಸಾ ಹಸಾಹ್ಯ ಎಂಬ 68 ವರ್ಷದ ವ್ಯಕ್ತಿಯೊಬ್ಬ ಬರೋಬ್ಬರಿ 12 ಹೆಂಡ್ತಿಯರು, 102 ಮಕ್ಕಳು ಮತ್ತು 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಇತ್ತೀಚಿಗೆ ಭಾರತ ಮೂಲದ ವ್ಲಾಗರ್‌ ಈ ವ್ಯಕ್ತಿಯ ಸಂದರ್ಶನ ಮಾಡಿದ್ದು, ನಾನು ಆಗಾಗ್ಗೆ ಮಕ್ಕಳ ಹೆಸರನ್ನು ಮರೆಯುತ್ತಿರುತ್ತೇನೆ. ಮತ್ತು ಇದೀಗ ವರ್ಷಗಳು ಕಳೆದಂತೆ ಆದಾಯವೂ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ಕುಟುಂಬವನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಆತ ಹೇಳಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋ ಕ್ರಿಯೆಟರ್‌ ಕೈಲಾಶ್‌ ಮೀನಾ (theindotrekker) ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕೈಲಾಶ್‌ ಮೂಸಾ ಹಸಾಹ್ಯನ ತುಂಬು ಪರಿವಾರದ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನನ್ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ ಫ್ರೀ ಸಮೋಸಾ ಪಡೆಯಿರಿ; ಭರ್ಜರಿ ಆಫರ್‌ ನೀಡಿದ ವ್ಯಕ್ತಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 22.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈತನ ಸಂಪೂರ್ಣ ಕುಟುಂಬವೇ ಒಂದು ಜಿಲ್ಲೆಯಂತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಡೀ ಗ್ರಾಮದಲ್ಲಿ ಈತನ ಪರಿವಾರವೇ ತುಂಬಿ ಹೋಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ತುಂಬು ಪರಿವಾರವನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ