ಅದ್ಭುತ ಜಾಹೀರಾತಿನ ಮೂಲಕ ರಾಮಾಯಣದ ನೈಜ ಸ್ಥಳಗಳನ್ನು ತೋರಿಸಿದ ಶ್ರೀಲಂಕಾದ ಏರ್‌ಲೈನ್ಸ್
ಶ್ರೀಲಂಕಾದ ಏರ್‌ಲೈನ್ಸ್‌ನ ರಾಮಾಯಣಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ಜಾಹೀರಾತು ಹಿಂದೂ ಮಹಾಕಾವ್ಯವಾದ ರಾಮಾಯಣಕ್ಕೆ ಸಂಬಂಧಿಸಿದ ನೈಜ ಸ್ಥಳಗಳನ್ನು ತೋರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ಇದು ಭಾರತೀಯರಿಗೂ ನೇರವಾಗಿ ಕನೆಕ್ಟ್ ಆಗಿದೆ. ಹಿಂದೂ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಈ ಜಾಹೀರಾತು ಪ್ರವಾಸಿಗರನ್ನು ಆಹ್ವಾನಿಸುತ್ತಿದೆ. ರಾವಣ ಸೀತಾಮಾತೆಯನ್ನು ಅಪಹರಿಸಿದ ನಂತರ ಆಕೆಯನ್ನು ಇರಿಸಿದ್ದ ಜಾಗವನ್ನು ಕೂಡ ಈ ಜಾಹೀರಾತಿನ ಮೂಲಕ ತೋರಿಸಲಾಗಿದೆ.
ನವದೆಹಲಿ: ಮೊದಲೆಲ್ಲ ಅಜ್ಜ-ಅಜ್ಜಿ ಮನೆಯಲ್ಲಿ ಸಂಜೆಯಾಗುತ್ತಿದ್ದಂತೆ ಮೊಮ್ಮಕ್ಕಳಿಗೆ ಕತೆ ಹೇಳುತ್ತಿದ್ದರು. ಅವರ ಬಳಿ ಕತೆ ಕೇಳಲು ಮೊಮ್ಮಕ್ಕಳು ಕಾಯುತ್ತಿದ್ದರು. ಶ್ರೀಲಂಕನ್ ಏರ್‌ಲೈನ್ಸ್ ಅದೇ ರೀತಿಯ ಅಜ್ಜಿ ಕತೆಯ ಮೂಲಕ ಅದ್ಭುತವಾದ ಜಾಹೀರಾತೊಂದನ್ನು ಬಿಡುಗಡೆ ಮಾಡುವ ಮೂಲಕ ಶ್ರೀಲಂಕಾದವರಿಗೆ ಮಾತ್ರವಲ್ಲದೆ ಭಾರತೀಯರಿಗೂ ಕನೆಕ್ಟ್ ಆಗಿದೆ. ಶ್ರೀಲಂಕಾಕ್ಕೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಶ್ರೀಲಂಕಾದಲ್ಲಿರುವ ರಾಮಾಯಣದ ನೈಜ ಸ್ಥಳಗಳನ್ನು ಪರಿಚಯಿಸಿದೆ. ಈ ಜಾಹೀರಾತು ನೋಡಿದವರು ಶ್ರೀಲಂಕಾಕ್ಕೆ ತಮ್ಮ ಬ್ಯಾಗ್ ಪ್ಯಾಕ್ ಮಾಡುವುದರಲ್ಲಿ ಅನುಮಾನವಿಲ್ಲ.
ರಾಮಾಯಣ ನಿಜವಾಗಿಯೂ ನಡೆದ ಕತೆಯೇ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಪುರಾತನ ಹಿಂದೂ ಮಹಾಕಾವ್ಯಕ್ಕೆ ಸಂಬಂಧಿಸಿದ ದ್ವೀಪ ರಾಷ್ಟ್ರವಾದ ಶ್ರೀಲಂಕಾದ ಐಕಾನಿಕ್ ಸ್ಥಳಗಳಾದ್ಯಂತ ವೀಕ್ಷಕರನ್ನು ಪ್ರಯಾಣಕ್ಕೆ ಕರೆದೊಯ್ಯುವ ‘ದಿ ರಾಮಾಯಣ ಟ್ರಯಲ್’ ಅನ್ನು ಪ್ರಚಾರ ಮಾಡಲು ಶ್ರೀಲಂಕಾ ಏರ್‌ಲೈನ್ಸ್ ಹೊಸ ಜಾಹೀರಾತನ್ನು ಪ್ರಾರಂಭಿಸಿದೆ. ಈ ಜಾಹೀರಾತು ಶ್ರೀಲಂಕಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಿರೂಪಣೆಯನ್ನು ಒಳಗೊಂಡಿದೆ. ಇದು ಐತಿಹಾಸಿಕ ಸ್ಥಳಗಳಿಗೆ ಪ್ರವಾಸಿಗರನ್ನು ಆಹ್ವಾನಿಸುತ್ತದೆ.
ಇದನ್ನೂ ಓದಿ: Dussehra in Sri Lanka 2024: ರಾವಣನ ತವರು ಶ್ರೀಲಂಕಾದಲ್ಲಿ ದಸರಾ ಹಬ್ಬ ಹೇಗೆ ಜರುಗುತ್ತದೆ ಗೊತ್ತಾ?
“ರಾಮಾಯಣ ಟ್ರಯಲ್‌ನ ಮಹಾಕಾವ್ಯವನ್ನು ಮೆಲುಕು ಹಾಕಿ. ನಿಮ್ಮ ರಜಾ ದಿನಗಳನ್ನು ಶ್ರೀಲಂಕಾದ ಪೌರಾಣಿಕ ಭೂದೃಶ್ಯಗಳ ಮೂಲಕ ಪ್ರಯಾಣವನ್ನು ಪ್ರಾರಂಭಿಸಿ. ಇದು ನಿಮಗಾಗಿ ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ ಅನುಭವವನ್ನು ನೀಡುತ್ತದೆ. ನಿಮ್ಮ ಸಾಹಸದ ಪ್ರತಿಯೊಂದು ಹಂತವು ಪ್ರಾಚೀನ ಕಾಲದ ವೈಭವವನ್ನು ಹೊರತರಲು ವಿನ್ಯಾಸಗೊಳಿಸಲಾಗಿದೆ.
Relive the epic of The Ramayana Trail
Embark on a journey through Sri Lanka’s legendary landscapes with SriLankan Holidays, offering a fully customized experience tailored just for you. Every step of your adventure is designed to bring out the grandeur and glory in the ancient… pic.twitter.com/jctUhc4JKn
— SriLankan Airlines (@flysrilankan) November 8, 2024
ಶ್ರೀಲಂಕನ್ ಏರ್‌ಲೈನ್ಸ್‌ನ ಎಕ್ಸ್ನ ಪೇಜಿನಲ್ಲಿ ಹಂಚಿಕೊಳ್ಳಲಾದ 5 ನಿಮಿಷಗಳ ವೀಡಿಯೊವು ಅಜ್ಜಿಯೊಬ್ಬರು ಮಕ್ಕಳ ಪುಸ್ತಕದಿಂದ ತನ್ನ ಮೊಮ್ಮಗನಿಗೆ ರಾಮಾಯಣದ ಕಥೆಯನ್ನು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ರಾಕ್ಷಸ ರಾಜ ರಾವಣ ಸೀತೆಯನ್ನು ಅಪಹರಿಸಿದ ನಂತರ ಅವಳನ್ನು ಎಲ್ಲಿಗೆ ಕರೆದೊಯ್ದಳು ಎಂದು ಮೊಮ್ಮಗ ಕೇಳುತ್ತಿದ್ದಂತೆ, ಅಜ್ಜಿ ಅವನನ್ನು ಹಳೆಯ ಸಮಯಕ್ಕೆ ಕರೆದೊಯ್ದು ರಾಮಾಯಣದಲ್ಲಿನ ಎಲ್ಲಾ ಸ್ಥಳಗಳು ನಿಜವೆಂದು ವಿವರಿಸುತ್ತಾರೆ. “ಇಂದು ನಾವು ಲಂಕಾವನ್ನು ಶ್ರೀಲಂಕಾ ಎಂದು ಕರೆಯುತ್ತಿದ್ದೇವೆ” ಎನ್ನುತ್ತಾರೆ.
ಇದನ್ನೂ ಓದಿ: ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
ಸೀತೆಯನ್ನು ರಾವಣ ಅಪಹರಿಸಿದ ಸ್ಥಳ, ಆಕೆಯನ್ನು ಇಟ್ಟ ವನ, ಹನುಮಂತ ಸೀತೆಯನ್ನು ಭೇಟಿ ಮಾಡಿದ ಸ್ಥಳ ಮುಂತಾದವುಗಳೆಲ್ಲದರ ಬಗ್ಗೆ ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಶ್ರೀಲಂಕಾದ ರಾಮಾಯಣದ ನೈಜ ಸ್ಥಳಗಳ ಬಗ್ಗೆ ಇದರಲ್ಲಿ ತಿಳಿಸಲಾಗಿದೆ. ಈ ಜಾಹೀರಾತು ಪ್ರಸಿದ್ಧವಾದ ಸೀತಾ ಅಮ್ಮನ್ ದೇವಸ್ಥಾನವನ್ನು ಹೈಲೈಟ್ ಮಾಡುತ್ತದೆ. ಇದನ್ನು ಭಾರತೀಯ ತಮಿಳರು ನಿರ್ವಹಿಸುತ್ತಾರೆ ಮತ್ತು ಇದನ್ನು ಮಹತ್ವದ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ. ಈ ಕಥೆಯು ನಂತರ ಲಂಕಾವನ್ನು ತಲುಪಲು ಸಮುದ್ರವನ್ನು ದಾಟಲು ವಾನರ ಸೈನ್ಯದಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾದ ರಾಮಸೇತುವಿಗೆ ಸ್ಥಳಾಂತರಗೊಳ್ಳುತ್ತದೆ.
I was planning a trip to Tokyo with friends next year.
But this advertisement made me to change my plans to Sri Lanka now.
Didn’t know, that Sri Lankans have conserved those historical places till date.
Very well made advertisement.
Thank you.
Jai Shri Ram.
— Anshul Kumar (@AnshulK33288086) November 10, 2024
ಈ ಪೌರಾಣಿಕ ಸೇತುವೆ ಇನ್ನೂ ಅಸ್ತಿತ್ವದಲ್ಲಿದೆಯೇ ಎಂದು ಮಗು ವಿಚಾರಿಸುತ್ತದೆ. ಅದಕ್ಕೆ ಅಜ್ಜಿ ಹೌದು ಎಂದು ಉತ್ತರಿಸುತ್ತಾರೆ. ನೀವು ಅದನ್ನು ಇಂದಿಗೂ ನೋಡಬಹುದು, ಇದು ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾದ ಕರಾವಳಿಯ ನಡುವೆ ಗೋಚರಿಸುತ್ತದೆ. ಹನುಮಂತನು ಲಕ್ಷ್ಮಣನ ಜೀವವನ್ನು ಉಳಿಸಲು ಸಂಜೀವನಿ ಮೂಲಿಕೆಯೊಂದಿಗೆ ಪರ್ವತವನ್ನು ಹೊತ್ತಿರುವ ಬಗ್ಗೆಯೂ ಜಾಹೀರಾತು ತೋರಿಸುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ