Viral: ಅಬ್ಬಬ್ಬಾ… ಮೈಸೂರಿನಲ್ಲಿ ಮರವೇರಿ ಕುಳಿತ ಬೃಹತ್ ಗಾತ್ರದ ಹೆಬ್ಬಾವು
ಸಣ್ಣ ಪುಟ್ಟ ಹಾವುಗಳು ಜನವಸತಿ ಪ್ರದೇಶಗಳ ಬಳಿ ಕಾಣಿಸಿಕೊಳ್ಳುತ್ತಿರುತ್ತದೆ. ಆದ್ರೆ ಇಲ್ಲೊಂದು ದಟ್ಟ ಅರಣ್ಯದಂಚಿನಲ್ಲಿರುವ ಹಾಡಿಯ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ಈ ದೈತ್ಯ ಹಾವು ಮರವನ್ನೇರುವ ದೃಶ್ಯವನ್ನು ಕಂಡು ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಾವುಗಳಿಗೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಅಬ್ಬಬ್ಬಾ ಹಾವುಗಳಿಗೆ ಸಂಬಂಧಿಸಿದ ಈ ದೃಶ್ಯಗಳು ನಿಜಕ್ಕೂ ನಮ್ಮನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಹೀಗೆ ಕೆಲ ದಿನಗಳ ಹಿಂದೆ ಪುತ್ತೂರಿನ ಮಹಿಳೆಯೊಬ್ಬರು ಧೈರ್ಯದಿಂದ ಬೃಹತ್ ಗಾತ್ರದ ಹೆಬ್ಬಾವನ್ನು ಬರಿಗೈಯಲ್ಲಿ ಹಿಡಿದ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಹೆಬ್ಬಾವಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ದಟ್ಟಾರಣ್ಯದ ಸಮೀಪ ಇರುವ ಹಾಡಿಯ ಬಳಿ ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ದೈತ್ಯ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಆ ದೈತ್ಯ ಹಾವು ಮರವನ್ನೇರುತ್ತಾ ಹೋಗಿದೆ. ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಅರಣ್ಯದ ಸಮೀಪದಲ್ಲಿರುವ ಹಾಡಿಯ ಬಳಿ ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋವನ್ನು Nammoor Mysore-ನಮ್ಮೂರ್ ಮೈಸೂರ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹಾಡಿ ಬಳಿಯೇ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಕುತೂಹಲದಿಂದ ನೋಡಿದ ಕಾಡಿದ ಮಕ್ಕಳು…” ಎಂಬ ಶೀರ್ಷಿಕೆನ್ನು ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅರಣ್ಯದ ಸಮೀಪದ ಹಾಡಿಯ ಬಳಿ ದೈತ್ಯ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ದೃಶ್ಯವನ್ನು ಕಾಣಬಹುದು. ಜನರು ನೋಡ ನೋಡುತ್ತಿದ್ದಂತೆ ಈ ಹೆಬ್ಬಾವು ಭಯದಿಂದ ನಿಧಾನವಾಗಿ ಮರವನ್ನು ಏರುತ್ತಾ ಹೋಗಿದೆ. ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳಿ ಮತ್ತು ಜನರು ಜೋರಾಗಿ ಕಿರುಚಾಡಿದ್ದಾರೆ.
ಇದನ್ನೂ ಓದಿ: ಪ್ರೀತಿ ವಿಚಾರ ಗೊತ್ತಾಗಿ ಮಗಳನ್ನು ಅಮೆರಿಕಕ್ಕೆ ಕಳುಹಿಸಿದ ತಂದೆ, ಕೋಪಕ್ಕೆ ಗರ್ಲ್‌ಫ್ರೆಂಡ್ ಅಪ್ಪನಿಗೆ ಗುಂಡು ಹಾರಿಸಿದ ಪ್ರೇಮಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಭಾರತದಲ್ಲಿಯೇ ಅತೀ ದೊಡ್ಡದಾದ ಹೆಬ್ಬಾವು ಅನಿಸುತ್ತದೆ. ಇದನ್ನು ಸಂರಕ್ಷಣೆ ಮಾಡಬೇಕಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಜನಗಳಿಂದ ಹಾವುಗಳಿಗೆ ತೊಂದರೆ ಆಗದಿದ್ದರೆ ಸಾಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೆಬ್ಬಾವುಗಳು ಯಾರಿಗೂ ತೊಂದರೆಯನ್ನು ಕೊಡುವುದಿಲ್ಲʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ