IRCTC Tour Package: ಕಮ್ಮಿ ಬಜೆಟ್‌ನಲ್ಲಿ ದುಬೈ ಟ್ರಿಪ್ ಹೋಗಲು ಬಯಸಿದ್ರೆ ಇಲ್ಲಿದೆ ನಿಮಗೊಂದು ಬಂಪರ್ ಆಫರ್
ನೀವೇನಾದ್ರೂ ದುಬೈಗೆ ಟ್ರಿಪ್ ಹೋಗುವ ಪ್ಲಾನ್ ಹಾಕಿದ್ರೆ ಇಲ್ಲಿದೆ ಒಂದು ಸಿಹಿ ಸುದ್ದಿ. ಭಾರತೀಯ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ (IRCTC) ನಾಲ್ಕು ರಾತ್ರಿಗಳು ಮತ್ತು ಐದು ಹಗಲುಗಳ ಕಡಿಮೆ ಬೆಲೆಯ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಟೂರ್ ಪ್ಯಾಕೇಜ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ದುಬೈ ನಗರ ಅದೆಷ್ಟೋ ಪ್ರವಾಸಿಗರ ಕನಸಿನ ತಾಣ ಅಂತಾನೇ ಹೇಳಬಹುದು. ಇಲ್ಲಿನ ಐಷಾರಾಮಿ ಶಾಪಿಂಗ್ ಮಾಲ್‌ಗಳು, ಸಾಂಪ್ರದಾಯಿಕ ಸ್ಟೈಲೈನ್, ಕಲರ್ ಫುಲ್ ರಾತ್ರಿಗಳನ್ನು ನೋಡಲೆಂದೇ ಹೆಚ್ಚಿನವರು ದುಬೈಗೆ ಪ್ರವಾಸ ಹೋಗೋಕೆ ಇಷ್ಟ ಪಡ್ತಾರೆ. ನೀವು ಕೂಡಾ ಸಧ್ಯದಲ್ಲೇ ದುಬೈಗೆ ಪ್ರವಾಸ ಹೋಗುವ ಯೋಜನೆಯಲ್ಲಿದ್ದರೆ, ಇಲ್ಲಿದೆ ನಿಮಗೊಂದು ಬಂಪರ್ ಆಫರ್. ಅದೇನೆಂದರೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ನಾಲ್ಕು ರಾತ್ರಿಗಳು ಮತ್ತು ಐದು ಹಗಲುಗಳ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ದುಬೈ ಟ್ರಿಪ್ ಹೋಗಬಹುದಾಗಿದೆ.
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತನ್ನ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ದೇಶ ವಿದೇಶಗಳ ಹೊಸ ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ನಿರಂತರವಾಗಿ ಪರಿಚಯಿಸುತ್ತಿದೆ. ಇದೀಗ IRCTC ಕಡಿಮೆ ಬೆಲೆಯಲ್ಲಿ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.
ಐಆರ್‌ಸಿಟಿಸಿ ನಾಲ್ಕು ರಾತ್ರಿಗಳು ಮತ್ತು ಐದು ಹಗಲುಗಳ ದುಬೈ ಪ್ರವಾಸದ ಪ್ಯಾಕೇಜ್ ಅನ್ನು ಘೋಷಿಸಿದ್ದು, ಈ ಪ್ರವಾಸ ಪ್ಯಾಕೇಜ್ ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಚೆನ್ನೈ ಮತ್ತು ಚಂಡೀಗಢ ಸೇರಿದಂತೆ ಹಲವಾರು ನಗರಗಳಿಗೆ ಅನ್ವಯಿಸಲಿದೆ. ಈ ಪ್ಯಾಕೇಜ್ ಮೂಲಕ ಮಿರಾಕಲ್ ಗಾರ್ಡನ್, ಧೌ ಕ್ರೂಸ್, ಬುರ್ಜ್-ಅಲ್-ಖಲೀಫಾ, ಶೇಖ್ ಜಾಯೆದ್ ಮಸೀದಿ, ಬಿಎಪಿಎಸ್ ಹಿಂದೂ ದೇವಾಲಯ ಮತ್ತು ಗ್ಲೋಬಲ್ ವಿಲೇಜ್ ಸೇರಿದಂತೆ ದುಬೈ ಮತ್ತು ಅಬುಧಾಬಿ ನಗರದ ಪ್ರಮುಖ ತಾಣಗಳಿಗೆ ಭೇಟಿ ನೀಡಬಹುದಾಗಿದೆ.
ದುಬೈ ಪ್ರವಾಸದ ದಿನಾಂಕವನ್ನು ಪರಿಶೀಲಿಸಿ:
ಮುಂಬೈನಿಂದ ಡಿಸೆಂಬರ್ 23 ರಿಂದ ಡಿಸೆಂಬರ್ 27 ರವರೆಗೆ ಪ್ರವಾಸ ಇರಲಿದೆ ಮತ್ತು ದೆಹಲಿಯಿಂದ ಬರುವ ಪ್ರಯಾಣಿಕರಿಗೆ ಡಿಸೆಂಬರ್ 24 ರಿಂದ ಡಿಸೆಂಬರ್ 29 ರವರೆಗೆ ಪ್ರವಾಸದ ಪ್ಯಾಕೇಜ್ ಇರಲಿದೆ. ಬೆಂಗಳೂರಿನಿಂದ ಪ್ರವಾಸವನ್ನು ಜನವರಿ 19 ರಿಂದ ಜನವರಿ 23, 2025 ರವರೆಗೆ ನಿಗದಿಪಡಿಸಲಾಗಿದೆ. ಚೆನ್ನೈ ನಗರದಿಂದ ನವೆಂಬರ್ 28 ರಿಂದ ಡಿಸೆಂಬರ್ 5 ರ ವರೆಗೆ ಟೂರ್ ಪ್ಯಾಕೇಜ್ ಲಭ್ಯವಿದ್ದರೆ ಚಂಡೀಗಢದಿಂದ ದುಬೈ ಟ್ರಿಪ್ ಪ್ಯಾಕೇಜ್ ಫೆಬ್ರವರಿ 2025 ರಲ್ಲಿ ಪ್ರಾರಂಭವಾಗಲಿದೆ ಎಂದು IRCTC ಪ್ರಕಟಿಸಿದೆ.
ಇದನ್ನೂ ಓದಿ: ತುಳಸಿ ಪೂಜೆಯ ಶುಭ ಮುಹೂರ್ತ ಮತ್ತು ಪೂಜೆ ವಿಧಾನದ ಬಗ್ಗೆ ತಿಳಿಯಿರಿ
ದುಬೈ ಟ್ರಿಪ್ ಪ್ಯಾಕೇಜ್ ವೆಚ್ಚ:
ಆಸಕ್ತ ಪ್ರವಾಸಿಗರಿಗೆ, ದೆಹಲಿಯಿಂದ ದುಬೈ ಪ್ಯಾಕೇಜ್‌ನ ಬೆಲೆ ಪ್ರತಿ ವ್ಯಕ್ತಿಗೆ ರೂ 1.04 ಲಕ್ಷದಿಂದ 1.09 ಲಕ್ಷದಿಂದ ಪ್ರಾರಂಭವಾಗುತ್ತದೆ. ಮುಂಬೈನಿಂದ 1.02 ಲಕ್ಷದಿಂದ ಪ್ಯಾಕೇಜ್ ಆರಂಭವಾಗಲಿದೆ. ಇನ್ನೂ ಬೆಂಗಳೂರಿನಿಂದ 92 ಸಾವಿರದಿಂದ ಪ್ಯಾಕೇಜ್ ಆರಂಭವಾದರೆ ಚೆನ್ನೈನಿಂದ 91 ಸಾವಿರದಿಂದ ದುಬೈ ಟ್ರಿಪ್ ವೆಚ್ಚ ಆರಂಭವಾಗಲಿದೆ. ಚಂಡೀಘಡದಿಂದ ಪ್ರವಾಸ ವೆಚ್ಚವು 1.2 ಲಕ್ಷದಿಂದ ಆರಂಭವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು www.irctctourism.com ಗೆ ಭೇಟಿ ನೀಡಿ ಅಥವಾ ಈ ಕೆಳಗೆ ನೀಡಿರುವ ಲಿಂಕ್‌ಗೆ ಕ್ಲಿಕ್ ಮಾಡಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ