AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಇರಾನ್ ವಿರುದ್ಧದ ಸಂಘರ್ಷದ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಇರಾನ್ ನಿರಾಕರಿಸಿದೆ. ಅಮೆರಿಕ ಶಾಶ್ವತವಾಗಿ ತೀವ್ರ ಅವಮಾನವನ್ನು ಎದುರಿಸುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಇರಾನ್ ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ ಇಂದು ಇರಾನ್ ಮಿಲಿಟರಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ. "ಶಾಶ್ವತ ಅವಮಾನ, ವಿಷಾದ ಮತ್ತು ಶರಣಾಗತಿ" ಎಂದು ಅಮೆರಿಕ ವಿವರಿಸಿದ್ದನ್ನು ಅಮೆರಿಕವೇ ಅನುಭವಿಸಬೇಕು. ಅಲ್ಲಿಯವರೆಗೆ ಸಂಘರ್ಷ ಮುಂದುವರಿಯುತ್ತದೆ ಎಂದು ಇರಾನ್ ಮಿಲಿಟರಿ ಹೇಳಿದೆ.

ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ
Trump Image Credit source: x
ಸುಷ್ಮಾ ಚಕ್ರೆ
|

Updated on: Apr 02, 2026 | 5:34 PM

Share

ಟೆಹ್ರಾನ್, ಏಪ್ರಿಲ್ 2: ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಹೇಳಿಕೆಗಳಿಗೆ ಇರಾನ್ ಮತ್ತೊಮ್ಮೆ ತಿರುಗೇಟು ನೀಡಿದೆ. ಇರಾನ್​ನ ನಾಯಕತ್ವ ಮತ್ತು ಮಿಲಿಟರಿಯನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ ಎಂದು ಅಮೆರಿಕ ಹೇಳಿತ್ತು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಟೆಹ್ರಾನ್ ಅಮೆರಿಕ ಶಾಶ್ವತ ಅವಮಾನವನ್ನು ಎದುರಿಸುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಶಪಥ ಮಾಡಿದೆ.

ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯು ತೀವ್ರವಾಗಿ ದುರ್ಬಲಗೊಂಡಿದೆ. ಅದರ ನಾಯಕತ್ವ ರಚನೆಯು ದೊಡ್ಡ ನಷ್ಟವನ್ನು ಅನುಭವಿಸಿದೆ ಎಂದು ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ಇರಾನ್‌ನ ಮಿಲಿಟರಿ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳನ್ನು ಹಾನಿಗೊಳಿಸುವ ಬಗ್ಗೆ ಅಮೆರಿಕದ ಹೇಳಿಕೆಗಳನ್ನು ಇರಾನ್ ತಿರಸ್ಕರಿಸಿದೆ. ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ನಂತರ ಇರಾನ್ ಅವರ ಈ ಪ್ರತಿಕ್ರಿಯೆ ಬಂದಿದೆ. ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ದುರ್ಬಲಗೊಂಡಿದೆ ಮತ್ತು ಅದರ ನಾಯಕತ್ವ ರಚನೆಯು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿದೆ ಎಂದು ಟ್ರಂಪ್ ಹೇಳಿದ್ದರು.

ಇದನ್ನೂ ಓದಿ: Donald Trump Speech: ಟ್ರಂಪ್ ಮಹತ್ವದ ಸುದ್ದಿಗೋಷ್ಠಿ, ಇರಾನ್ ಮೇಲಿನ ದಾಳಿ ಮುಂದುವರೆಸುತ್ತಾ ಅಮೆರಿಕ, ಇಲ್ಲಿದೆ ಬಿಗ್ ಅಪ್​ಡೇಟ್ಸ್​

ಟ್ರಂಪ್ ಅವರ ಹೇಳಿಕೆಗಳನ್ನು ತಿರಸ್ಕರಿಸಿದ ಇರಾನ್, ಇಸ್ಲಾಮಿಕ್ ಗಣರಾಜ್ಯದ ವಿಶಾಲವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ವಾಷಿಂಗ್ಟನ್‌ಗೆ ತಿಳುವಳಿಕೆ ಇಲ್ಲ. ನಮ್ಮ ಮಿಲಿಟರಿ ಶಕ್ತಿ ಮತ್ತು ಉಪಕರಣಗಳ ಕುರಿತು ನಿಮ್ಮ ಗುಪ್ತಚರದ ಮಾಹಿತಿ ಸರಿಯಾಗಿಲ್ಲ. ನಮ್ಮ ವಿಶಾಲವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ನೀವು ನಮ್ಮ ಕಾರ್ಯತಂತ್ರದ ಕ್ಷಿಪಣಿ ಉತ್ಪಾದನಾ ತಾಣಗಳು, ದೀರ್ಘ-ಶ್ರೇಣಿಯ ದಾಳಿ ಮತ್ತು ನಿಖರತೆಯ ಡ್ರೋನ್‌ಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧ ಅಥವಾ ವಿಶೇಷ ಉಪಕರಣಗಳನ್ನು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ” ಎಂದು ಇರಾನ್ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us