AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ

Iran's mosquito fleet becomes big threat to US navy in Hormuz strait: ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇರಾನ್ ಮತ್ತು ಅಮೆರಿಕದ ನಡುವೆ ಪೈಪೋಟಿ ನಡೆದಿದೆ. ಜಲಸಂಧಿಯಲ್ಲಿ ಅಮೆರಿಕದ ನೌಕೆಗಳು ದಿಗ್ಬಂಧನ ಹಾಕಿವೆ. ಆದರೆ, ಇರಾನ್​ನ ಸೊಳ್ಳೆ ಪಡೆಗಳು ಅಮೆರಿಕದ ಹಡಗುಗಳಿಗೆ ಮಾರಕವಾಗಿವೆ. ಸಣ್ಣ ಸಣ್ಣ ದೋಣಿಗಳು, ಡ್ರೋನ್, ಮಿಸೈಲ್​ಗಳನ್ನು ಬಳಸಿ ಇರಾನ್ ಅಮೆರಿಕದ ನೌಕೆಗಳ ಮೇಲೆ ದಾಳಿ ಮಾಡುತ್ತಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ
ಹಾರ್ಮುಜ್ ಜಲಸಂಧಿImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 19, 2026 | 5:48 PM

Share

ಟೆಹರಾನ್, ಏಪ್ರಿಲ್ 19: ಜಗತ್ತಿನ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ (hormuz strait) ಅಮೆರಿಕ ಹಾಗೂ ಇರಾನ್ ಮಧ್ಯೆ ತಡೆಗಾಗಿ ಜಂಗೀಕುಸ್ತಿ ನಡೆದಿದೆ. ನೀವು ಪಟ್ಟುಹಾಕಿದರೆ ನಾ ಪಟ್ಟು ಹಾಕುತ್ತೇನೆ ಎಂಬಂತಾಗಿದೆ. ಅಮೆರಿಕದ ನೌಕಾಪಡೆಯು ಈ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಿದ ಬಳಿಕ ತನ್ನ ಮುಷ್ಟಿಯನ್ನು ಸಡಿಲಿಸಿದ್ದ ಇರಾನ್ ಇದೀಗ ಮತ್ತೊಮ್ಮೆ ತಡೆ ಹಾಕಿದೆ. ಜಲಸಂಧಿಯಲ್ಲಿ ಇರುವ ಅಮೆರಿಕನ್ ನೌಕೆಗಳಿಗೆ ಈಗ ಇರಾನ್​ನ ‘ಸೊಳ್ಳೆ ಪಡೆ’ಗಳ (Iran’s mosquito fleet) ಕಾಟ ಶುರುವಾಗಿದೆ. ಈ ಸಣ್ಣ ಸಣ್ಣ ದೋಣಿಗಳ ಉಪಟಳಕ್ಕೆ ಅಮೆರಿಕದವರು ಹೈರಾಣಾಗಿ ಹೋಗುತ್ತಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಮೆರಿಕದ ಪ್ರಯತ್ನ ಪದೇ ಪದೇ ವಿಫಲವಾಗುತ್ತಿದೆ. ಇರಾನ್​ನ ದೊಡ್ಡ ಹಡಗುಗಳನ್ನು ಹೊಡೆದುಹಾಕುವ ಅಮೆರಿಕಕ್ಕೆ ಈ ಸಣ್ಣ ದೋಣಿಗಳು ಬಹಳ ಅಪಾಯಕಾರಿ ಎನಿಸಿವೆ.

ಇದನ್ನೂ ಓದಿ: ‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು

ಇರಾನ್​ನ ಸೊಳ್ಳೆ ಪಡೆ ದೋಣಿಗಳು ಯಾಕೆ ಅಪಾಯಕಾರಿ?

ವಿಹಾರಕ್ಕೆಂದು ಬಳಸಲಾಗುವ ದೋಣಿಗಳನ್ನೇ ಇರಾನ್ ಮಾರ್ಪಡಿಸಿಕೊಂಡು ಸಂಗ್ರಾಮಕ್ಕೆ ಬಳಸುತ್ತಿದೆ. ಈ ದೋಣಿಗಳಿಗೆ ರಾಕೆಟ್ ಚಾಲಿತ ಗ್ರೆನೇಡ್ ಬಾಂಬುಗಳನ್ನು ಉಡಾಯಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇನ್ನೂ ಹಲವು ದೋಣಿಗಳಲ್ಲಿ ಮೆಷೀನ್ ಗನ್​ಗಳಿರುತ್ತವೆ. ಇವು ಬಹಳ ವೇಗವಾಗಿ ಸಾಗಿ ಹೋಗಬಲ್ಲುವು. 100 ನಾಟ್​ವರೆಗಿನ ವೇಗ ಅಥವಾ ಗಂಟೆಗೆ 185 ಕಿಮೀವರೆಗಿನ ವೇಗದಲ್ಲಿ ಇವು ಓಡಬಲ್ಲುವು.

ಇರಾನ್​ನ ಸರ್ವೋಚ್ಚ ನಾಯಕರ ವೈಯಕ್ತಿಕ ಸೈನ್ಯ ಪಡೆಯಾದ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಈ ದೋಣಿ ಪಡೆಗಳನ್ನು ನಿಭಾಯಿಸುತ್ತದೆ. ಈ ಸೇನೆ ಅಸಾಂಪ್ರದಾಯಿಕ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದೆ. ಅದರ ವಿವಿಧ ರಣತಂತ್ರಗಳಲ್ಲಿ ಈ ಸೊಳ್ಳೆ ದೋಣಿ ತಂತ್ರವೂ ಇದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಸಂಚಲನ, ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ ‘ದೋಸ್ತಿ’ ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು

ಹಾಗೆಯೇ, ಇರಾನ್​ನ ಸೊಳ್ಳೆ ಪಡೆಗಳಲ್ಲಿ ಸಣ್ಣ ಸಬ್​ಮರೈನ್​ಗಳು ಹಾಗೂ ಡ್ರೋನ್​ಗಳೂ ಇವೆ. ಇವುಗಳನ್ನು ಟ್ರ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ಸೆಟಿಲೈಟ್​ಗಳ ಕಣ್ಣಿಗೆ ಇವು ಅಷ್ಟು ಸುಲಭಕ್ಕೆ ಬೀಳುವುದಿಲ್ಲ. ಇರಾನ್​ನ ಸೊಳ್ಳಿ ಪಡೆಯಲ್ಲಿ ಈ ಸಣ್ಣ ಸಣ್ಣ ದೋಣಿಗಳು, ಪುಟ್ಟ ಸಬ್​ಮರೈನ್​ಗಳು, ಡ್ರೋನ್​ಗಳು, ಮಿಸೈಲ್​ಗಳು ಮೊದಲಾದವು ಇವೆ. ಬಹಳ ಕ್ಷಿಪ್ರವಾಗಿ ಸಾಗಿ ಹಡಗುಗಳ ಮೇಲೆ ಆಕ್ರಮಣ ಮಾಡಿ, ಅಷ್ಟೇ ಬೇಗವಾಗಿ ಇವು ವಾಪಸ್ ಹೋಗಬಲ್ಲುವು. ಹೀಗಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಗೆ ಇರಾನ್​ನ ಸೊಳ್ಳೆ ಪಡೆ ಮಗ್ಗುಲಮುಳ್ಳಾಗಿ ಪರಿಣಮಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ