ಇಸ್ರೇಲ್ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ. ವಿಚಿತ್ರ ಎಂದರೆ, 12,400 ಜನರ ಪೈಕಿ 69 ಮಂದಿ ಎರಡನೇ ಬಾರಿಗೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು.
ಇಸ್ರೇಲ್ ಆರೋಗ್ಯ ಸಚಿವಾಲಯ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದೆ. ಇಸ್ರೇಲ್ನಲ್ಲಿ ಈವರೆಗೆ ಒಟ್ಟು 1,89,000 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಲ್ಲಿ ಶೇ 6.6 ಜನರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು.
ಕೊರೊನಾ ಲಸಿಕೆ ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಡಿಸೆಂಬರ್ 19ರಿಂದ ಇಸ್ರೇಲ್ ಕೊರೊನಾ ಲಸಿಕೆ ನೀಡಲು ಆರಂಭಿಸಿತ್ತು. ವಯಸ್ಸಾದವರಿಗೆ ಮೊದಲ ಆದ್ಯತೆ ನೀಡುವ ಗುರಿ ಸರ್ಕಾರದ್ದಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 25ರಷ್ಟು ಅಂದರೆ ಕಾಲು ಭಾಗದಷ್ಟು ಜನರಿಗೆ ಔಷಧ ನೀಡಲಾಗಿದೆ. ಈ ಪೈಕಿ ಶೇ 3.5 ಜನರಿಗೆ ಎರಡನೇ ಬಾರಿ ಕೊರೊನಾ ಔಷಧ ನೀಡಲಾಗಿದೆ.
ದೇಶದಲ್ಲಿ ಮೂರನೇ ಬಾರಿಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆದಾಗ್ಯೂ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಲೇ ಇದೆ. ಈವರೆಗೆ ಕೊರೊನಾದಿಂದ 4,005 ಜನರು ಮೃತಪಟ್ಟಿದ್ದಾರೆ.
ಕೊರೊನಾ ಕಾಟ ನಿಯಂತ್ರಣಕ್ಕೆ ಬಂತಾ? ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15,223 ಹೊಸ ಪ್ರಕರಣ, 151 ಮಂದಿ ಸಾವು