ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ದಾಳಿಯ ಹಿಂದೆ ಇರಾನ್ ಕೈವಾಡವಿದೆ, ಹಮಾಸ್ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದ ಇಸ್ರೇಲ್

|

Updated on: Oct 08, 2023 | 8:56 AM

ಇಸ್ರೇಲ್​ ಮೇಲೆ ಉಗ್ರಗಾಮಿ ಸಂಘಟನೆ ಹಮಾಸ್ ನಡೆಸಿದ ದಾಳಿ ಹಿಂದೆ ಇರಾನ್ ಕೈವಾಡವಿದೆ, ಅವರು ಮಕ್ಕಳು ಹಾಗೂ ವೃದ್ಧರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದಿ ಇಸ್ರೇಲ್ ಹೇಳಿದೆ. ಹಮಾಸ್ ಶನಿವಾರ (7 ಅಕ್ಟೋಬರ್) ಇಸ್ರೇಲ್ ಮೇಲೆ ದಾಳಿ ಮಾಡಿದೆ. ನಂತರ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸ್ಥಾನಗಳ ಮೇಲೆ ದಾಳಿ ಮಾಡುತ್ತಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಒಳಗೊಂಡ ಗಾಜಾ ಪಟ್ಟಿಯಿಂದ ಹಮಾಸ್ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಅಷ್ಟೇ ಅಲ್ಲ, ಗಾಜಾ ಪಟ್ಟಿಯ ಸಮೀಪದ ಹಳ್ಳಿಗಳನ್ನೂ ಹಮಾಸ್ ವಶಪಡಿಸಿಕೊಂಡಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ದಾಳಿಯ ಹಿಂದೆ ಇರಾನ್ ಕೈವಾಡವಿದೆ, ಹಮಾಸ್ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದ ಇಸ್ರೇಲ್
ಇಸ್ರೇಲ್
Image Credit source: Hindustan Times
Follow us on

ಇಸ್ರೇಲ್(Israel)​ ಮೇಲೆ ಉಗ್ರಗಾಮಿ ಸಂಘಟನೆ ಹಮಾಸ್(Hamas) ನಡೆಸಿದ ದಾಳಿ ಹಿಂದೆ ಇರಾನ್ ಕೈವಾಡವಿದೆ, ಅವರು ಮಕ್ಕಳು ಹಾಗೂ ವೃದ್ಧರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದಿ ಇಸ್ರೇಲ್ ಹೇಳಿದೆ. ಹಮಾಸ್ ಶನಿವಾರ (7 ಅಕ್ಟೋಬರ್) ಇಸ್ರೇಲ್ ಮೇಲೆ ದಾಳಿ ಮಾಡಿದೆ. ನಂತರ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸ್ಥಾನಗಳ ಮೇಲೆ ದಾಳಿ ಮಾಡುತ್ತಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಒಳಗೊಂಡ ಗಾಜಾ ಪಟ್ಟಿಯಿಂದ ಹಮಾಸ್ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಅಷ್ಟೇ ಅಲ್ಲ, ಗಾಜಾ ಪಟ್ಟಿಯ ಸಮೀಪದ ಹಳ್ಳಿಗಳನ್ನೂ ಹಮಾಸ್ ವಶಪಡಿಸಿಕೊಂಡಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದೇನು?
ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಹಮಾಸ್ ಭಾರಿ ನಷ್ಟ ಅನುಭವಿಸಲಿದೆ ಎಂದು ಎಚ್ಚರಿಸಿದರು. ತಲ್ ನಯೀಮ್ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು ಮತ್ತು ಬೆಂಬಲ ಘೋಷಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು” ಎಂದು ಹೇಳಿದರು. ಭಾರತವು ಇಸ್ರೇಲ್‌ನ ನಿಕಟ ಸ್ನೇಹಿತರಲ್ಲೊಂದು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಈ ಪ್ರಮುಖ ಭಯೋತ್ಪಾದಕ ದಾಳಿಯ ವಿರುದ್ಧ ಬಲವಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಇಸ್ರೇಲ್ ಕಾಲಮಾನದ ಪ್ರಕಾರ ಬೆಳಗ್ಗೆ 6.30ಕ್ಕೆ ಹಮಾಸ್ ದಾಳಿ ಆರಂಭಿಸಿದೆ. ಇರಾನ್ ಈ ದಾಳಿಯನ್ನು ಸಂಭ್ರಮಿಸುತ್ತಿದೆ, ಅದಕ್ಕಾಗಿಯೇ ಅಲ್ಲಿನ ಸಾವಿರಾರು ಜನರು ಬೀದಿಗಿಳಿದು ಕುಣಿದಾಡುತ್ತಿದ್ದಾರೆ.

ಹಮಾಸ್ ದಾಳಿಗೆ ಇಸ್ರೇಲ್ ನಲ್ಲಿ ಇಲ್ಲಿಯವರೆಗೆ 300 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡವರ ಸಂಖ್ಯೆ 1500 ದಾಟಿದೆ. ಗಾಜಾದಲ್ಲಿ ಇಸ್ರೇಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ಯಾಲೆಸ್ತೀನಿಯರ ಸಂಖ್ಯೆ 232. ಇಲ್ಲಿ 1700 ಜನರು ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಜನರನ್ನು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್ ಕೇಳಿಕೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ