Earthquake: ಅಂಡಮಾನ್ ಸಮುದ್ರದಲ್ಲಿ 4.3 ತೀವ್ರತೆಯ ಭೂಕಂಪ!
ಅಂಡಮಾನ್ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 10 ಕಿಮೀ ಆಳದಲ್ಲಿ ಅಕ್ಟೋಬರ್ 8 ರಂದು ಮುಂಜಾನೆ 03:20 ಕ್ಕೆ ಕಂಪನ ಸಂಭವಿಸಿದೆ.

ಅಕ್ಟೋಬರ್ 8 ರಂದು ಮುಂಜಾನೆ ಅಂಡಮಾನ್ ಸಮುದ್ರದಲ್ಲಿ (Andaman Sea) ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. NCS ಪ್ರಕಾರ, ಅಕ್ಟೋಬರ್ 8 ರಂದು ಮುಂಜಾನೆ 03:20 ಕ್ಕೆ ಕಂಪನಗಳು ಸಂಭವಿಸಿದ್ದು ಭೂಕಂಪವು 10 ಕಿಮೀ ಆಳದಲ್ಲಿ ದಾಖಲಾಗಿದೆ.
ಈ ಬಗ್ಗೆ ಎಕ್ಸ್ (ಟ್ವಿಟರ್)ನಲ್ಲಿ, ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಪೋಸ್ಟ್ ಹಾಕಿದೆ. “4.3 ತೀವ್ರತೆ ಭೂಕಂಪನ ಉಂಟಾಗಿದ್ದು, 08-10-2023 ರಂದು ಸಂಭವಿಸಿದೆ. 03:20:02 IST, ಲ್ಯಾಟ್: 10.83 ಮತ್ತು ಉದ್ದ: 93.23, ಆಳ: 10 ಕಿಮೀ, ಸ್ಥಳ: ಅಂಡಮಾನ್ ಸಮುದ್ರ, ಭಾರತ ಎಂದು ಎನ್ಸಿಎಸ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
Earthquake of Magnitude:4.3, Occurred on 08-10-2023, 03:20:02 IST, Lat: 10.83 & Long: 93.23, Depth:10 Km ,Location: Andaman Sea, India for more information Download the BhooKamp App https://t.co/0HuHYhUyq6 @Indiametdept @ndmaindia @Dr_Mishra1966 @KirenRijiju @Ravi_MoES @PMOIndia pic.twitter.com/nWqyYsCllT
— National Center for Seismology (@NCS_Earthquake) October 7, 2023
ಎನ್ಸಿಎಸ್ ಸಂಸ್ಥೆಯು ದೇಶದಲ್ಲಿ ಸಂಭವಿಸುವ ಭೂಕಂಪ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ,(ಏಜೆನ್ಸೀಸ್).
ಇದನ್ನೂ ಓದಿ: ಅಗ್ನಿ ದುರಂತದಲ್ಲಿ 13 ಜನ ಸಜೀವದಹನ: ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ, ಪರಿಹಾರ ನೀಡುವಂತೆ ಬೊಮ್ಮಾಯಿ ಆಗ್ರಹ
ಸೆಪ್ಟೆಂಬರ್‌ನಲ್ಲಿ ಅಂಡಮಾನ್ ಸಮುದ್ರದಲ್ಲಿ 4.4 ಮತ್ತು 4.3 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದವು ಎಂದು ಎನ್‌ಎಸ್‌ಸಿ ತಿಳಿಸಿದೆ. NCS ಪ್ರಕಾರ, 4.4 ಭೂಕಂಪವು 93 ಕಿಮೀ ಆಳದಲ್ಲಿ ಸಂಭವಿಸಿದೆ. “4.4 ರ ತೀವ್ರತೆಯ ಭೂಕಂಪ, 12-09-2023 ರಂದು ಸಂಭವಿಸಿದೆ, 03:39:30 IST, ಲ್ಯಾಟ್: 6.19 ಮತ್ತು ಉದ್ದ: 95.31, ಆಳ: 93 ಕಿಮೀ, ಪ್ರದೇಶ: ಅಂಡಮಾನ್ ಸಮುದ್ರ ಎಂದು NCS ಪೋಸ್ಟ್ ಮೂಲಕ ತಿಳಿಸಿತ್ತು.
ಸರಣಿ ಭೂಕಂಪಗಳಿಗೆ ಪಶ್ಚಿಮ ಅಫ್ಘಾನಿಸ್ತಾನದಲ್ಲಿ 320 ಮಂದಿ ಸಾವು
ಇನ್ನು ಮತ್ತೊಂದೆಡೆ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸುಮಾರು 11 ಗಂಟೆ ವೇಳೆಗೆ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 320 ಜನರು ಸಾವನ್ನಪ್ಪಿದ್ದಾರೆ. ಮತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳುವಂತೆ, ಭೂಕುಸಿತಗಳು ಮತ್ತು ಕಟ್ಟಡ ಕುಸಿತದ ವರದಿಗಳ ಮಧ್ಯೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದಿದೆ.
ವಿದೇಶಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ