ಇಸ್ರೇಲ್, ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯ, ಗಾಜಾದಲ್ಲಿ ಘರ್ಷಣೆ ಆರಂಭ

ಇಸ್ರೇಲ್​(Israel) ಹಾಗೂ ಹಮಾಸ್(Hamas)​ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದ್ದು, ಗಾಜಾದಲ್ಲಿ ಮತ್ತೆ ಘರ್ಷಣೆ ಪ್ರಾರಂಭವಾಗಿದೆ. ನವೆಂಬರ್ 24 ರಂದು ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು, ಅದಾದ ಬಳಿಕ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಒಂದು ವಾರದ ಬಳಿಕ ಒಪ್ಪಂದ ಅಂತ್ಯಗೊಂಡಿದೆ.

ಇಸ್ರೇಲ್, ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯ, ಗಾಜಾದಲ್ಲಿ ಘರ್ಷಣೆ ಆರಂಭ
ಗಾಜಾ

Updated on: Dec 01, 2023 | 11:42 AM

ಇಸ್ರೇಲ್​(Israel) ಹಾಗೂ ಹಮಾಸ್(Hamas)​ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದ್ದು, ಗಾಜಾದಲ್ಲಿ ಮತ್ತೆ ಘರ್ಷಣೆ ಪ್ರಾರಂಭವಾಗಿದೆ. ನವೆಂಬರ್ 24 ರಂದು ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು, ಅದಾದ ಬಳಿಕ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಒಂದು ವಾರದ ಬಳಿಕ ಒಪ್ಪಂದ ಅಂತ್ಯಗೊಂಡಿದೆ.

ಇಂದು ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಬೆಳಗ್ಗೆ 7 ಗಂಟೆಯೊಳಗೆ ಹಮಾಸ್ ಇಸ್ರೇಲ್ಗೆ ನೀಡಿಲ್ಲ ಎಂದು ಇಸ್ರೇಲಿ ಮಾಧ್ಯಮ ಹೇಳಿದೆ. ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಮತ್ತು ಹೆಚ್ಚುವರಿಯಾಗಿ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ಎಂಟು ಇಸ್ರೇಲಿ ಒತ್ತೆಯಾಳುಗಳನ್ನು ಏಳು ದಿನಗಳ ಕಾಲ ನಡೆದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸೆರೆಯಿಂದ ಬಿಡುಗಡೆ ಮಾಡಲಾಯಿತು. ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ನರ ನಡುವಿನ ದಶಕಗಳಲ್ಲಿ ಮಾರಣಾಂತಿಕ ಹೋರಾಟವನ್ನು ವಿರಾಮಗೊಳಿಸಿರುವ ಒಪ್ಪಂದದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಶುಕ್ರವಾರ ಮುಂಜಾನೆ 30 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಮತ್ತಷ್ಟು ಓದಿ: ಇಸ್ರೇಲ್​-ಹಮಾಸ್ ನಡುವೆ 4 ದಿನಗಳ ಕದನ ವಿರಾಮ, ಇಂದು 13 ಒತ್ತೆಯಾಳುಗಳ ಬಿಡುಗಡೆ

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್​ಗಳಿಂದ ದಾಳಿ ನಡೆಸಿ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಇಸ್ರೇಲ್ ನಡೆಸಿದ ಪ್ರತಿದಾಳೀಯಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಅಷ್ಟೇ ಅಲ್ಲದೆ ಯುದ್ಧವನ್ನು ಆರಂಭಿಸಿದವರು ನಾವಲ್ಲ ಆದರೆ ನಮ್ಮಿಂದಲೇ ಅಂತ್ಯವಾಗುತ್ತದೆ ಎಂದು ಕೂಡ ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us