ಕದನ ವಿರಾಮ: 12 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್​ನಿಂದ 30 ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆ

ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್(Israel) ಹಾಗೂ ಹಮಾಸ್(Hamas) ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. 12 ಇಸ್ರೇಲಿಯನ್ನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಹೋರಾಟಗಾರರು ಸುಮಾರು 240 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.

ಕದನ ವಿರಾಮ: 12 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್​ನಿಂದ 30 ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆ
ಒತ್ತೆಯಾಳುಗಳುImage Credit source: NDTV
Follow us
|

Updated on: Nov 29, 2023 | 9:53 AM

ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್(Israel) ಹಾಗೂ ಹಮಾಸ್(Hamas) ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. 12 ಇಸ್ರೇಲಿಯನ್ನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಹೋರಾಟಗಾರರು ಸುಮಾರು 240 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.

ಈ ದಾಳಿಯಲ್ಲಿ 1,200 ಮಂದಿ ಸಾವನ್ನಪ್ಪಿದ್ದರು, ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿಯಲ್ಲಿ 15,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕತಾರ್ ಮಧ್ಯಸ್ಥಿಕೆಯೊಂದಿಗೆ ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು, ಅದು ಸೋಮವಾರ ರಾತ್ರಿ ಕೊನೆಗೊಂಡಿತ್ತು, ಬಳಿಕ ಮತ್ತೂ ಎರಡು ದಿನಗಳಿಗೆ ವಿಸ್ತರಿಸಲಾಯಿತು.

ಹಮಾಸ್ ಮೊದಲ ಬ್ಯಾಚ್​ನಲ್ಲಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 13 ಮಂದಿ ಇಸ್ರೇಲಿ ನಾಗರಿಕರು, 12 ಮಂದಿ ಥೈಲೆಂಡ್ ನಾಗರಿಕರಿದ್ದರು. ಇಸ್ರೇಲ್​ ಪ್ರಜೆಗಳನ್ನು ಮಾತ್ರ ಒತ್ತೆಯಾಳುಗಳನ್ನಾಗಿರಿಸಿಕೊಂಡಿಲ್ಲ, ಅದರಲ್ಲಿ ಅನೇಕ ದೇಶಗಳ ನಾಗರಿಕರೂ ಸೇರಿದ್ದಾರೆ. ಒತ್ತೆಯಾಳುಗಳಲ್ಲಿ ಹೆಚ್ಚಿನವರು ಅಕ್ಟೋಬರ್ 7 ರಂದು ಸಂಗೀತೋತ್ಸವದಲ್ಲಿ ಭಾಗವಹಿಸಿದವರಾಗಿದ್ದರು.

ಮತ್ತಷ್ಟು ಓದಿ: ಇಸ್ರೇಲ್​ನ ಯುದ್ಧಪೀಡಿದ ಪ್ರದೇಶಕ್ಕೆ ಎಲಾನ್​ಮಸ್ಕ್​ ಭೇಟಿ, ಹಮಾಸ್​ ದಾಳಿಯ ಭೀಕರತೆ ತೆರೆದಿಟ್ಟ ಪ್ರಧಾನಿ ನೇತನ್ಯಾಹು

ಇಸ್ರೇಲ್​ನ ಹೊರತಾಗಿ ಹಮಾಸ್​ನಿಂದ ಒತ್ತೆಯಾಳಾಗಿರುವ ದೇಶಗಳ ನಾಗರಿಕರು ಅಮೆರಿಕ, ಥೈಲೆಂಡ್, ಜರ್ಮನಿ, ಅರ್ಜೆಂಟೀನಾ, ಬ್ರಿಟನ್, ಫ್ರಾನ್ಸ್​, ನೆದರ್​ಲೆಂಡ್​ ಮತ್ತು ಪೋರ್ಚುಗಲ್​ನ ನಾಗರಿಕರು ಸೇರಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್​ ಮೇಲೆ 5 ಸಾವಿರ ರಾಕೆಟ್​ಗಳಿಂದ ದಾಳಿ ನಡೆಸಿತ್ತು, ಇದಾದ ಕೆಲವೇ ದಿನಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್ ವಿರುದ್ಧ ಯುದ್ಧ ಘೋಷಿಸಿದರು. ಈ ಯುದ್ಧದಲ್ಲಿ ಗಾಜಾ ಪಟ್ಟಿ ಸಂಪೂರ್ಣವಾಗಿ ನಾಶವಾಗಿದೆ.

ಗಾಜಾದಲ್ಲಿ 2.3 ಮಿಲಿಯನ್ ನಾಗರಿಕರಲ್ಲಿ ಅರ್ಧದಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಹಮಾಸ್ ಹೋರಾಟಗಾರರು 200ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

ಈ ಹಿಂದೆ ಬೆಂಜಮಿನ್ ನೇತನ್ಯಾಹು, ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ, ಎಲ್ಲಾ ಒತ್ತೆಯಾಳುಗಳನ್ನು ಅವರ ಕುಟುಂಬದವರ ಬಳಿ ಸೇರಿಸಿಯೇ ಸೇರಿಸುತ್ತೇವೆ. ಯುದ್ಧ ಪ್ರಾರಂಭ ಮಾಡಿದವರು ನಾವಲ್ಲ ಆದರೆ ಅಂತ್ಯವನ್ನು ನಾವೇ ಮಾಡುತ್ತೇವೆ ಎಂದು ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ