ಇಸ್ರೇಲ್ ಮತ್ತು ಹಮಾಸ್ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ಎಡೆ ಎತ್ತಿದ ಹಾವಿನಂತಾಗಿದೆ. ಹಮಾಸ್ ಹಲ್ಲುಕಿತ್ತ ಹಾವಿನಂತಾಗಿದೆ. ಇದೀಗ ಹಮಾಸ್ಗೆ ಇಸ್ರೇಲ್ನ ದಾಳಿಯನ್ನು ಸಹಿಕೊಳ್ಳುವ ಶಕ್ತಿ ಇಲ್ಲ. ತನ್ನಲ್ಲಿದ್ದ ಎಲ್ಲ ಅಸ್ತ್ರವನ್ನು ಹಮಾಸ್ ಇಸ್ರೇಲ್ ಮೇಲೆ ಉಪಯೋಗಿಸಿದೆ. ಆದರೆ ಇಸ್ರೇಲ್ ಯಾವುದಕ್ಕೂ ಭಯಪಡದೆ, ಹಮಾಸ್ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದೆ. ಹಮಾಸ್ ಮಾಡಿದ ತಪ್ಪಿಗೆ ತಾನೇ ಅನುಭವಿಸುತ್ತಿದೆ. ಕರ್ಮ ರಿಟನ್ ಹೇಳುವುದು ಇದಕ್ಕೆ. ಹಮಾಸ್ ಈಗಾಗಲೇ ಇಸ್ರೇಲ್ ಸೇರಿದಂತೆ ಗಾಜಾದಲ್ಲಿದ್ದ ಬೇರೆ ಬೇರೆ ದೇಶದ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಇದೀಗ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಜಾಗವನ್ನು ಇಸ್ರೇಲ್ ಸೇನೆ ಪತ್ತೆ ಮಾಡಿದೆ. ಇದರ ಜತೆಗೆ ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಗಾಜಾದಲ್ಲಿನ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯ ಮೇಲೆ ಇಸ್ರೇಲ್ ಪತ್ತೆ ಮಾಡಿದೆ ಎಂದು ವಿಡಿಯೋವೊಂದನ್ನು ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿದೆ.
1. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರರು ಸಂಗ್ರಹಿಸಿದ ಗ್ರೆನೇಡ್‌ಗಳು, ಆತ್ಮಾಹುತಿ ಬಾಂಬ್ ಮತ್ತು ಇತರ ಸ್ಫೋಟಕಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಕಮಾಂಡ್ ಸೆಂಟರ್ನ್ನು ಇಸ್ರೇಲ್ ಪಡೆಗಳು ಪತ್ತೆ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಇದರ ಜತೆಗೆ ಈ ಪ್ರದೇಶದಲ್ಲಿ ಒತ್ತೆಯಾಳುಗಳನ್ನು ಕೂಡ ಪತ್ತೆ ಮಾಡಲಾಗಿದೆ.
2. ಇಸ್ರೇಲ್ ಪಡೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ರಾಂಟಿಸ್ಸಿ ಆಸ್ಪತ್ರೆಯ ಅಡುಗೆ ಮನೆಯಲ್ಲಿ ಹಮಾಸ್ ವಾಸಸ್ಥಳವನ್ನು ತೋರಿಸಲಾಗಿದೆ. ಇದರ ಪಕ್ಕದಲ್ಲೇ ಒಂದು ಸುರಂಗ ಇದೆ ಅಲ್ಲಿಂದ ಹಮಾಸ್ ಕಮಾಂಡರ್ನ ಮನೆ ಕಾಣಿಸುತ್ತದೆ. ಇನ್ನು ಅಕ್ಟೋಬರ್ ಏಳರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿ, 1,200 ಜನರನ್ನು ಕೊಂದು ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲು. ಹಮಾಸ್ ಗುಂಡಿನ ಗುರುತುಗಳೊಂದಿಗೆ ಮೋಟಾರ್ಸೈಕಲ್ನ್ನು ಬಳಸಿತ್ತು ಎಂದು ಇಸ್ರೇಲ್ ಪಡೆ ಹೇಳಿದೆ.
3. ಈ ಹಿಂದೆ ಯುವತಿಯೊಬ್ಬನ್ನು ಒತ್ತೆಯಾಳುಯಾಗಿ ಇಟ್ಟುಕೊಂಡಿದ್ದ ಹಮಾಸ್ ಒಂದು ವಿಡಿಯೋವನ್ನು ವೈರಲ್ ಮಾಡಿತ್ತು. ಆಕೆ ಮನೆಯವರು ಈ ಬಗ್ಗೆ ಕಳವಳವನ್ನು ಕೂಡ ವ್ಯಕ್ತಪಡಿಸಿದರು. ಇದೀಗ ಆಕೆ ಇರುವ ಪ್ರದೇಶದ ಮೇಲೆ ಇಸ್ರೇಲ್ ತನ್ನ ಕಾರ್ಯಚರಣೆಯನ್ನು ಮುಮದುವರಿಸಿದೆ.
4. ಇನ್ನು ಸೋಮವಾರ ರಾತ್ರಿ, ಹಮಾಸ್‌ನ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ ಸೈನಿಕ ಹೀಬ್ರೂ ಭಾಷೆಯಲ್ಲಿ ಸಂದೇಶವೊಂದನ್ನು ಓದುತ್ತಿರುವ ವೀಡಿಯೊವನ್ನು ಬಿಡುಗಡೆಯಾಗಿದೆ. ಒತ್ತೆಯಾಳುಯೊಬ್ಬ ಬಗ್ಗೆ ಅಂದರೆ ಅವಳ ಐಡಿ ಕಾರ್ಡ್ ಹಾಗೂ ಹಲವು ದಾಖಲೆಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಹೀಗೆ ಹಮಾಸ್ ಒಂದಲ್ಲ ಒಂದು ವಿಡಿಯೋವನ್ನು ಒತ್ತೆಯಾಳುಗಳು ಕುಟುಂಬಕ್ಕೆ ಕಳುಹಿಸುತ್ತಿದೆ.
5. ಈಗಾಗಲೇ ಇಸ್ರೇಲ್ ಟ್ಯಾಂಕರ್ಗಳು ಹಮಾಸ್ ನೆಲೆಸಿರರುವ ಗಾಜಾ ನಗರದ ಮುಖ್ಯ ವೈದ್ಯಕೀಯ ಕೇಂದ್ರವಾದ ಅಲ್ ಶಿಫಾ ಆಸ್ಪತ್ರೆಯ ಹೊರಗೆ ನಿಂತಿದೆ. ಹಮಾಸ್ ಉಗ್ರರ ಪ್ರಧಾನ ಕಚೇರಿ ಮುಂದೆ ಇಸ್ರೇಲ್ ಸುತ್ತಾಡುತ್ತಿದೆ.
ಇದನ್ನೂ ಓದಿ: ನವೆಂಬರ್ 30ರವರೆಗೆ ಟೆಲ್ ಅವೀವ್ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ ಏರ್ ಇಂಡಿಯಾ
6. ಈಗಾಗಲೇ ಯುದ್ಧ ವಿರಾಮ ಘೋಷಣೆ ಮಾಡುವ ಬದಲು ಹಮಾಸ್ 70 ಮಹಿಳೆಯರನ್ನು ಮುಕ್ತಗೊಳಿಸುವಂತೆ ತಿಳಿಸಿದೆ. ಅಲ್ ಶಿಫಾವನ್ನು ವಶಪಡಿಸಿಕೊಂಡಿದ್ದು,ಇದರಲ್ಲಿ ಗಾಜಾದ ವೈದ್ಯಕೀಯ ಅಧಿಕಾರಿಗಳು 11,000 ಕ್ಕೂ ಹೆಚ್ಚು ಜನರು ಕೊಂದಿದೆ. ಮೂರು ನವಜಾತ ಶಿಶುಗಳು ಸೇರಿದಂತೆ ಹಿಂದಿನ ಮೂರು ದಿನಗಳಲ್ಲಿ 32 ರೋಗಿಗಳು ಸಾವನ್ನಪ್ಪಿದ್ದಾರೆ.
EXCLUSIVE RAW FOOTAGE: Watch IDF Spokesperson RAdm. Daniel Hagari walk through one of Hamas’ subterranean terrorist tunnels—only to exit in Gaza’s Rantisi hospital on the other side.
Inside these tunnels, Hamas terrorists hide, operate and hold Israeli hostages against their… pic.twitter.com/Nx4lVrvSXH
— Israel Defense Forces (@IDF) November 13, 2023
7., ಉತ್ತರ ಗಾಜಾದಲ್ಲಿ ಆಸ್ಪತ್ರೆಯ ಮುತ್ತಿಗೆ ಹಾಕಿದ ಹಮಾಸ್ ಕರೆಂಟ್ ಕೊರತೆಯಿಂದ ಅನೇಕರು ಸಾವನ್ನಪ್ಪಿದ್ದಾರೆ. ಶಿಫಾ ಗಾಜಾದ ಅತಿದೊಡ್ಡ ಮತ್ತು ಉತ್ತಮ-ಸಜ್ಜಿತ ಆಸ್ಪತ್ರೆಯಾಗಿದೆ. ಆದರೆ ಈ ಸೌಲಭ್ಯವನ್ನು ಹಮಾಸ್ ಮಿಲಿಟರಿ ಸರಿಯಾಗಿ ಉಪಯೀಗಿಸುತ್ತಿಲ್ಲ ಎಂದು ಇಸ್ರೇಲ್ ಹೇಳಿದೆ.
8. ಹಮಾಸ್ 16 ವರ್ಷಗಳ ಕಾಲ ಆಳಿದ ಗಾಜಾ ಪಟ್ಟಿಯ ಮೇಲೆ “ನಿಯಂತ್ರಣ ಕಳೆದುಕೊಂಡಿದೆ” ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಹೇಳಿದ್ದಾರೆ. ಭಯೋತ್ಪಾದಕರು ದಕ್ಷಿಣದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Tue, 14 November 23