Israel-Hamas War: ಗಾಜಾಪಟ್ಟಿ ಮೇಲೆ ಮತ್ತೆ ಇಸ್ರೇಲ್ ದಾಳಿ, 175ಕ್ಕೂ ಹೆಚ್ಚು ಜನರ ಸಾವು

| Updated By: Rakesh Nayak Manchi

Updated on: Dec 02, 2023 | 6:38 AM

ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡ ನಂತರ ಇಸ್ರೇಲ್ ಮತ್ತೆ ಹಮಾಸ್ ಉಗ್ರರರನ್ನು ಗುರಿಯಾಗಿಸಿಕೊಂಡು ಗಾಜಾಪಟ್ಟಿ ಮೇಲೆ ದಾಳಿ ನಡೆಸಿದೆ. ಶುಕ್ರವಾರದ ದಾಳಿಯಲ್ಲಿ 175ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಬೆಳಗ್ಗೆ 7 ಗಂಟೆಯೊಳಗೆ ಹಮಾಸ್ ಇಸ್ರೇಸ್​ಗೆ ನೀಡಿಲ್ಲ. ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿತ್ತು.

Israel-Hamas War: ಗಾಜಾಪಟ್ಟಿ ಮೇಲೆ ಮತ್ತೆ ಇಸ್ರೇಲ್ ದಾಳಿ, 175ಕ್ಕೂ ಹೆಚ್ಚು ಜನರ ಸಾವು
ಹಮಾಸ್ ಉಗ್ರರನ್ನು ಗುರಿಯಾಗಿಸಿ ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ
Follow us on

ಇಸ್ರೇಲ್ ​(Israel) ಹಾಗೂ ಹಮಾಸ್ (Hamas)​ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದ್ದು, ಗಾಜಾದಲ್ಲಿ ಮತ್ತೆ ಘರ್ಷಣೆ ಪ್ರಾರಂಭವಾಗಿದೆ. ಅದರಂತೆ ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳಾಗಿವೆ.

ದಿನದ ಹಿಂದೆ, ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ದಾಳಿಯನ್ನು ಪುನರಾರಂಭಿಸಿದೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಬೆಳಗ್ಗೆ 7 ಗಂಟೆಯೊಳಗೆ ಹಮಾಸ್ ಇಸ್ರೇಲ್ಗೆ ನೀಡಿಲ್ಲ. ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಮತ್ತು ಹೆಚ್ಚುವರಿಯಾಗಿ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದ್ದವು.

ಇದನ್ನೂ ಓದಿ: ಇಸ್ರೇಲ್, ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯ, ಗಾಜಾದಲ್ಲಿ ಘರ್ಷಣೆ ಆರಂಭ

ಎಂಟು ಇಸ್ರೇಲಿ ಒತ್ತೆಯಾಳುಗಳನ್ನು ಏಳು ದಿನಗಳ ಕಾಲ ನಡೆದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸೆರೆಯಿಂದ ಬಿಡುಗಡೆ ಮಾಡಲಾಗಿತ್ತು. ಒಪ್ಪಂದದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಶುಕ್ರವಾರ ಮುಂಜಾನೆ 30 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿತ್ತು.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್​ಗಳಿಂದ ದಾಳಿ ನಡೆಸಿ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಇಸ್ರೇಲ್ ನಡೆಸಿದ ಪ್ರತಿದಾಳೀಯಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಈ ಹಿಂದೆ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, ಯುದ್ಧವನ್ನು ಆರಂಭಿಸಿದವರು ನಾವಲ್ಲ ಆದರೆ ನಮ್ಮಿಂದಲೇ ಅಂತ್ಯವಾಗುತ್ತದೆ ಎಂದು ಕೂಡ ಹೇಳಿದ್ದರು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ