ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ, 80ಕ್ಕೂ ಅಧಿಕ ಮಂದಿ ಸಾವು: ಹಮಾಸ್
ಇಸ್ರೇಲ್(Israel) ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ನಬ್ಲುಸ್ ನಗರದಲ್ಲಿರುವ ಬಲಾಟ ಶಿಬಿರದ ಮೇಲೆ ನಡೆದಿರುವ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 1967ರ ಮಧ್ಯಪ್ರಾಚ್ಯ ಯುದ್ಧ ಸಂದರ್ಭ ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಂಡಿದೆ. ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ನಲ್ಲಿ ಅಕ್ಟೋಬರ್ 7 ರಂದು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ.

ವಿಶ್ವಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಸಂಘರ್ಷ ಆರಂಭವಾದಾಗಿನಿಂದ ವೆಸ್ಟ್ ಬ್ಯಾಂಕ್ನಲ್ಲಿ 51 ಮಕ್ಕಳು ಸೇರಿದಂತೆ ಕನಿಷ್ಠ 186 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಹಮಾಸ್ ಬಂಡುಕೋರರನ್ನು ಹತ್ತಿಕ್ಕುವವರೆಗೆ ಯುದ್ಧ ನಿಲ್ಲಿಸುವ ಮಾತಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ, ಯುದ್ಧವನ್ನು ಪ್ರಾರಂಭಿಸಿದವರು ನಾವಲ್ಲ, ಆದರೆ ಅಂತ್ಯವು ನಮ್ಮಿಂದಲೇ ಆಗಲಿದೆ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ಅಮೆರಿಕ ಸಹಾಯ ಮಾಡುವುದನ್ನು ಹಿಜ್ಬುಲ್ಲಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಜ್ಬುಲ್ಲಾ ಅಮೆರಿಕದ ನೌಕಾಪಡೆಯನ್ನು ಸ್ಫೋಟಿಸುವ ಬೆದರಿಕೆ ಹಾಕಿದೆ. ಹಿಜ್ಬುಲ್ಲಾದ ಈ ಬೆದರಿಕೆಯ ಬಗ್ಗೆ ಅಮೆರಿಕವು ಎಚ್ಚರವಾಗಿದೆ. ಮಾಹಿತಿಯ ಪ್ರಕಾರ, ಹಿಜ್ಬುಲ್ಲಾ ರಷ್ಯಾದ P-800 ಓನಿಕ್ಸ್ ಕ್ಷಿಪಣಿಗಳನ್ನು ಹೊಂದಿದ್ದು, ಅದು ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಬಹುದು.
ಮತ್ತಷ್ಟು ಓದಿ: ಗಾಜಾ ಶಾಲೆಯಲ್ಲಿ ರಾಕೆಟ್ ಲಾಂಚರ್, ಮಾರ್ಟರ್ ಶೆಲ್ ಪತ್ತೆ ಮಾಡಿದ ಇಸ್ರೇಲ್ ಪಡೆ
ಕಳೆದ 42 ದಿನಗಳಿಂದ ಇಸ್ರೇಲ್ ಹಮಾಸ್ ಅನ್ನು ತೊಡೆದುಹಾಕಲು ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೀನಿಯರ ಸಂಖ್ಯೆ 11 ಸಾವಿರ 500 ಕ್ಕೆ ಏರಿದೆ. ಇವರಲ್ಲಿ ಸುಮಾರು 4,710 ಮಕ್ಕಳು ಮತ್ತು 3160 ಮಹಿಳೆಯರು ಸೇರಿದ್ದಾರೆ. ಇಸ್ರೇಲ್‌ನ ಕ್ರಮಕ್ಕೆ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕದನ ವಿರಾಮಕ್ಕೆ ಆಗ್ರಹಿಸಿವೆ.
4 ದಿನಕ್ಕೂ ಮೊದಲು ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಡಜನ್‌ಗಟ್ಟಲೆ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ