ಗಾಜಾ ಶಾಲೆಯಲ್ಲಿ ರಾಕೆಟ್ ಲಾಂಚರ್, ಮಾರ್ಟರ್ ಶೆಲ್ ಪತ್ತೆ ಮಾಡಿದ ಇಸ್ರೇಲ್ ಪಡೆ
ಇಸ್ರೇಲ್ನ್ನು ಕೆಣಕಿದ ಹಮಾಸ್ ಉಗ್ರರನ್ನು ಸರ್ವನಾಶ ಮಾಡುವ ಪಣತೊಟ್ಟ ಇಸ್ರೇಲ್. ಇದೀಗ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಕಾರ್ಯಚರಣೆ ಮಾಡುತ್ತಿದ್ದು, ಇಸ್ರೇಲ್ ಸೇನೆ ಇದೀಗ ಗಾಜಾದಲ್ಲಿರುವ ಶಾಲೆಯ ಮೇಲೆ ಕಣ್ಣಿಟ್ಟಿದೆ. ಈ ಶಾಲೆಗಳನ್ನು ಹಮಾಸ್ ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದೆ ಎಂದು ಒಂದು ವಿಡಿಯೋ ಸಮೇತ ಸಾಕ್ಷ್ಯವನ್ನು ಇಸ್ರೇಲ್ ಇಟ್ಟಿದೆ.
ಇಸ್ರೇಲ್ ಮತ್ತು ಹಮಾಸ್ (Israel-Hamas) ನಡುವಿನ ಸಮರ ದಿನದಿಂದ ದಿನಕ್ಕೆ ಒಂದೊಂದು ದಿಕ್ಕು ಪಡೆಯುತ್ತಿದೆ. ಇಸ್ರೇಲ್ ಗಾಜಾದಲ್ಲಿ(Gaza) ನಿರಂತರ ಒಂದಲ್ಲ ಒಂದು ಕಾರ್ಯಚರಣೆ ಮಾಡುತ್ತಿದೆ. ಇಸ್ರೇಲ್ನ್ನು ಕೆಣಕಿದ ಹಮಾಸ್ ಉಗ್ರರನ್ನು ಸರ್ವನಾಶ ಮಾಡುವ ಪಣತೊಟ್ಟ ಇಸ್ರೇಲ್. ಇದೀಗ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಕಾರ್ಯಚರಣೆ ಮಾಡುತ್ತಿದ್ದು, ಇಸ್ರೇಲ್ ಸೇನೆ ಇದೀಗ ಗಾಜಾದಲ್ಲಿರುವ ಶಾಲೆಯ ಮೇಲೆ ಕಣ್ಣಿಟ್ಟಿದೆ. ಈ ಶಾಲೆಗಳನ್ನು ಹಮಾಸ್ ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದೆ ಎಂದು ಒಂದು ವಿಡಿಯೋ ಸಮೇತ ಸಾಕ್ಷ್ಯವನ್ನು ಇಸ್ರೇಲ್ ಇಟ್ಟಿದೆ. ಇಸ್ರೇಲಿ ಪಡೆಗಳು ಇಂದು ಬೆಳಿಗ್ಗೆ ಗಾಜಾದಲ್ಲಿರುವ ಶಾಲೆಯಲ್ಲಿ ರಾಕೆಟ್ ಲಾಂಚರ್‌ಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಪತ್ತೆ ಮಾಡಿದೆ. ಈ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್ನಲ್ಲಿ ಇಸ್ರೇಲ್ ಹಂಚಿಕೊಂಡಿದೆ. ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರ ಸಂಗ್ರಹಕ್ಕಾಗಿ ಶಾಲೆ ಮತ್ತು ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿದೆ.
ಆರ್‌ಪಿಜಿಗಳು, ಮಾರ್ಟರ್ ಶೆಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಐಡಿಎಫ್ ಪಡೆ ಉತ್ತರ ಗಾಜಾದ ಶಿಶು ವಿಹಾರ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪತ್ತೆ ಮಾಡಿದೆ. ಶಿಶುವಿಹಾರಗಳಲ್ಲಿ ಆಟಿಗಳನ್ನು ಸಂಗ್ರಹಿಸಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ ಎಂದು ಇಸ್ರೇಲ್ ಹೇಳಿದೆ. ಈ ವಿಡಿಯೋದಲ್ಲಿ ಕಟ್ಟಡದ ಕಿರಿದಾದ ಮೂಲೆಯಲ್ಲಿ ಮಾರ್ಟರ್ ಶೆಲ್‌ಗಳನ್ನು ಒಂದರ ಮೇಲೊಂದು ಜೋಡಿಸಿದ್ದಾರೆ. ಇಸ್ರೇಲ್ ಎಕ್ಸ್ನಲ್ಲಿ ಹಂಚಿಕೊಂಡ ಮತ್ತೊಂದು ಪೋಸ್ಟ್ನಲ್ಲಿ ಶಾಲೆಯಿಂದ ವಶಪಡಿಸಿಕೊಂಡ ರಾಕೆಟ್ ಲಾಂಚರ್‌ಗಳು ಮತ್ತು ಮದ್ದುಗುಂಡುಗಳ ಫೋಟೋಗಳನ್ನು ಕಾಣಬಹುದು.
ಎಕ್ಸ್ನಲ್ಲಿ ಇಸ್ರೇಲ್ ಹಂಚಿಕೊಂಡ ವಿಡಿಯೋ
RPGs, mortar shells, and other weapons were found by IDF troops inside a kindergarten and an elementary school in northern Gaza.
Kindergartens should store toys, not deadly weapons. pic.twitter.com/OuPfJmfGYZ
— Israel Defense Forces (@IDF) November 18, 2023
ಇನ್ನು ಆಸ್ಪತ್ರೆಗಳನ್ನು ಕೂಡ ಹಮಾಸ್ ಶಸ್ತ್ರಾಸ್ತ್ರ ಸಂಗ್ರಹ ತಾಣವಾಗಿ ಮಾಡಿಕೊಂಡಿದೆ. ಆದರೆ ಇದರ ಮೇಲೆ ಇಸ್ರೇಲ್ ದಾಳಿ ಮಾಡುವಂತಿಲ್ಲ ಏಕೆಂದರೆ ಈ ಆಸ್ಪತ್ರೆಗಳಲ್ಲಿ ಸಾವಿರಾರೂ ರೋಗಿಗಳು ಹಾಗೂ ಅನೇಕರು ಆಶ್ರಯ ಪಡೆದಿದ್ದಾರೆ. ಇದರ ಜತೆಗೆ ಯುಎಸ್ ಈ ಆಸ್ಪತ್ರೆಯ ಮೇಲೆ ದಾಳಿ ಮಾಡದಂತೆ ಆದೇಶವನ್ನು ನೀಡಿದೆ.
ಇದನ್ನೂ ಓದಿ:ಹಮಾಸ್ ಉಗ್ರರ ಅಡಗುತಾಣ ಪತ್ತೆ ಮಾಡಿದ ಇಸ್ರೇಲ್ ಸೈನಿಕರು, ಸುರಂಗದಲ್ಲಿ ದೀರ್ಘಕಾಲ ಉಳಿಯುವ ಪ್ಯ್ಲಾನ್ ಅವರದ್ದಾಗಿತ್ತು
ಈ ಹಿಂದೆ ಇಸ್ರೇಲ್ ಈ ಆಸ್ಪತ್ರೆಗಳ ನೆಲಮಾಳಿಗೆಯಲ್ಲಿ ಸ್ಫೋಟಕ ಬಾಡಿ ವೆಸ್ಟ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ಪತ್ತೆ ಮಾಡಿತು. ಇದರ ಜತೆಗೆ ಇಸ್ರೇಲ್ನ ನಾಗರಿಕರನ್ನು ಒತ್ತೆಯಾಳುಗಳಾಗಿ ಇಲ್ಲಿ ಇಡಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್ನ ಈ ಎಲ್ಲ ಕಾರ್ಯಚರಣೆಗೆ ಹಮಾಸ್ ನಲುಗಿ ಹೋಗಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ 1,200 ಜನರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಕೂಡ ದಾಳಿ ಮಾಡಿ ನಾಲ್ಕು ಸಾವಿರ ಹಮಾಸ್ ಉಗ್ರರನ್ನು ಹತ್ಯೆ ಮಾಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ