Watch Video: ಗುಂಡಿಗೆ ಗಟ್ಟಿ ಮಾಡಿಕೊಂಡು ವಿಡಿಯೋ ನೋಡಿ! ನೀವೇನೂ ಇಂತಹ ಸ್ಟಂಟ್​​ ಮಾಡಲು ಹೋಗಬೇಡಿ ಹುಷಾರು

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪಾಲಿಯಾನ್ಸ್ಕಿ (polianskii) ಎಂಬ Video creator ಸ್ವತಃ ಹಂಚಿಕೊಂಡಿದ್ದಾನೆ. ಇಂತಹ ಇನ್ನೂ ಅನೇಕ ಸಾಹಸಮಯ ಸ್ಟಂಟ್​ ಗಳನ್ನು ಮಾಡಿ, ಅದನ್ನು ತನ್ನ ಇನ್ಸ್​​​ಟಾಗ್ರಾಮ್​​ನಲ್ಲಿ ಷೇರ್​​ ಮಾಡಿಕೊಳ್ಳುವುದು ಈತನ ಚಾಳಿಯಾಗಿದೆ.

Watch Video: ಗುಂಡಿಗೆ ಗಟ್ಟಿ ಮಾಡಿಕೊಂಡು ವಿಡಿಯೋ ನೋಡಿ! ನೀವೇನೂ ಇಂತಹ ಸ್ಟಂಟ್​​ ಮಾಡಲು ಹೋಗಬೇಡಿ ಹುಷಾರು
ನೀವೇನೂ ಇಂತಹ ಸ್ಟಂಟ್​​ ಮಾಡಲು ಹೋಗಬೇಡಿ ಹುಷಾರು
Follow us
ಸಾಧು ಶ್ರೀನಾಥ್​
|

Updated on: Nov 18, 2023 | 3:29 PM

ಸ್ಟಂಟ್​​ ಮಾಡಲು ಇಷ್ಟಪಡುವವರು ಯಾವಾಗಲೂ ಸಣ್ಣಪುಟ್ಟ ಆಟಗಳನ್ನು ಆಡುವುದಿಲ್ಲ. ಸ್ವಲ್ಪ ದೊಡ್ಡಮಟ್ಟದ ಸ್ಟಂಟ್​​​ಗೇ ಕೈಹಾಕ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವ ಅವಕಾಶ ಬಂದಮೇಲಂತೂ, ತಮ್ಮ ವಿಡಿಯೋಗಳು ವೈರಲ್ ಆಗುತ್ತವೆ ಎಂದು ಅಪಾಯಕಾರಿ ಸಾಹಸಗಳಿಗೆ ಮುಂದಾಗುವುದು ಉಂಟು. ಹಾಗಾಗಿ ಅನೇಕ ಬಾರಿ ಆಘಾತಕಾರಿ ಸ್ಟಂಟ್ ವಿಡಿಯೋಗಳನ್ನು ನೀವು ನೋಡಿರಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ವಿಡಿಯೋಗಳು ಅಂತರ್ಜಾಲದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದರೆ ನೀವು ನಿಮ್ಮ ಕಣ್ಣುಗಳನ್ನು ನಂಬುವುದಿಲ್ಲ. ಈ ಸ್ಟಂಟ್ ವಿಡಿಯೋ ತುಂಬಾ ಅಪಾಯಕಾರಿ. ಆದರೆ, ಸ್ಟಂಟ್‌ಮ್ಯಾನ್ ಮಾಡಿರುವುದು ಚೆನ್ನಾಗಿದೆ ಅನ್ನಬಹುದು, ವೈರಲ್ ವೀಡಿಯೊವನ್ನು ನೋಡಿದ ಜನ ಅರೆಕ್ಷಣ ತಮ್ಮ ಪ್ರಜ್ಞೆ ಕಳೆದುಕೊಳ್ಳುವುದುಂಟು ಎಚ್ಚರಾ.

ಈ ವೈರಲ್ ವಿಡಿಯೋದಲ್ಲಿ ಬಹುಮಹಡಿ ಕಟ್ಟಡದ ಮೇಲ್ಛಾವಣಿಯ ತುತ್ತತುದಿಯ ಮೇಲೆ ಯುವಕನೊಬ್ಬ ಲೀಲಾಜಾಲವಾಗಿ ನಡೆದಾಡುತ್ತಾನೆ. ಅವನು ಛಾವಣಿಯ ತೆಳುವಾದ ರೇಲಿಂಗ್ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದಾಡುತ್ತಾನೆ. ನೀವು ಛಾವಣಿಯಿಂದ ಕೆಳಗೆ ನೋಡಿದರೆ, ಕೆಳಗೆ ಕಾಣುವ ರಸ್ತೆ ದೃಶ್ಯವು ಒಂದು ಕ್ಷಣ ಎದೆ ಝಲ್ಲೆನ್ನುವಂತೆ ಮಾಡುತ್ತದೆ. ಎಷ್ಟೋ ಜನರು ಅಷ್ಟು ಎತ್ತರದಿಂದ ಕೆಳಗೆ ನೋಡುವುದಕ್ಕೂ ಹಿಂಜರಿಯುತ್ತಾರೆ.

ಇದನ್ನೂ ಓದಿ : Viral: ಬಾಹ್ಯಾಕಾಶದಲ್ಲಿ ಫ್ರೆಂಚ್​ ಫ್ರೈಸ್​ ತಯಾರಿಸಿದ ವಿಜ್ಞಾನಿಗಳು, ನೆಟ್ಟಿಗರ ಅಚ್ಚರಿ

ಆದರೆ, ಈ ಯುವಕನನ್ನು ನೋಡಿ. ಅವನು ತುಂಬಾ ನಿರ್ಭಯವಾಗಿ ರೇಲಿಂಗ್ ಮೇಲೆ ನಿಂತಿದ್ದಾನೆ. ಯಾವುದೇ ಆಧಾರವಿಲ್ಲದೆ ಕಂಬಿಯ ಮೇಲೆ ನಿಂತಿರುವ ಆತ ಸರಾಗವಾಗಿ ಫುಲ್​​ ಕಂಟ್ರೋಲ್ ಮಾಡುತ್ತಾ, ಜಂಪಿಂಗ್​ ಜಂಪಿಂಗ್​- ವಾಕಿಂಗ್​ ವಾಕಿಂಗ್​ ಮಾಡ್ತಾನೆ. ನೀವು ಊಹಿಸಲೂ ಸಾಧ್ಯವಾಗದ್ದನ್ನುಆತ ಧೈರ್ಯದಿಂದ ಮಾಡಿದ್ದಾನೆ … ಸೈಕಲ್​​ ಗ್ಯಾಪ್​​ನಲ್ಲಿ ಎಂಬಂತೆ ಒಂದು ಕಟ್ಟಡದಿಂದ ಇನ್ನೊಂದಕ್ಕೆ ಹಾರಿಬಿಡುತ್ತಾನೆ. ಹೀಗೆ ಮಾಡುವಾಗ ಆತನ ಮುಖದಲ್ಲಿ ಲವಲೇಶವೂ ಭಯ ಕಾಣುವುದಿಲ್ಲ.

View this post on Instagram

A post shared by Mr.Polianskii (@polianskii)

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪಾಲಿಯಾನ್ಸ್ಕಿ (polianskii) ಎಂಬ Video creator, Movement artist ಸ್ವತಃ ಹಂಚಿಕೊಂಡಿದ್ದಾನೆ. ಇಂತಹ ಇನ್ನೂ ಅನೇಕ ಸಾಹಸಮಯ ಸ್ಟಂಟ್​ ಗಳನ್ನು ಮಾಡಿ, ಅದನ್ನು ತನ್ನ ಇನ್ಸ್​​​ಟಾಗ್ರಾಮ್​​ನಲ್ಲಿ ಷೇರ್​​ ಮಾಡಿಕೊಳ್ಳುವುದು ಈತನ ಚಾಳಿಯಾಗಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ  

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್