ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಜಾ ಆಗಿದ್ದು ಯಾಕೆ? ಸಾಲುಸಾಲು ರಾಜೀನಾಮೆ ಭೀತಿ; ಸಂಸ್ಥೆಯ ಮಂಡಳಿಯ ಮೇಲೆ ಹೂಡಿಕೆದಾರರ ಒತ್ತಡ

OpenAI vs Sam Altman: ಓಪನ್ ಎಐ ಸಂಸ್ಥೆ ಮೊನ್ನೆ ದಿಢೀರನೇ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಸಿಇಒ ಮತ್ತು ನಿರ್ದೇಶಕ ಎರಡೂ ಸ್ಥಾನಗಳಿಂದಲೂ ತೆಗೆದುಹಾಕಲಾಗಿದೆ. ಈಗ ಹೊಸ ಅಚ್ಚರಿಯ ಬೆಳವಣಿಗೆಯಲ್ಲಿ, ಓಪನ್​ಎಐ ಮಂಡಳಿ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಮರಳಿ ಗದ್ದುಗೆಗೆ ಕೂರಿಸುವ ಆಲೋಚನೆಯಲ್ಲಿದೆಯಂತೆ.

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಜಾ ಆಗಿದ್ದು ಯಾಕೆ? ಸಾಲುಸಾಲು ರಾಜೀನಾಮೆ ಭೀತಿ; ಸಂಸ್ಥೆಯ ಮಂಡಳಿಯ ಮೇಲೆ ಹೂಡಿಕೆದಾರರ ಒತ್ತಡ
ಸ್ಯಾಮ್ ಆಲ್ಟ್​ಮ್ಯಾನ್
Follow us
|

Updated on: Nov 19, 2023 | 9:33 AM

ಸ್ಯಾನ್​ಫ್ರಾನ್ಸಿಸ್ಕೋ, ನವೆಂಬರ್ 19: ಚ್ಯಾಟ್​ಜಿಪಿಟಿ ಎಂಬ ಎಐ ಆಧಾರಿತ ಸರ್ವಿಸ್ ಕೊಡುವ ಒಂದು ಆ್ಯಪ್ ಬಿಡುಗಡೆಗೊಳಿಸಿ ವಿಶ್ವಾದ್ಯಂತ ಅಚ್ಚರಿ ಮೂಡಿಸಿದ್ದ ಓಪನ್ ಎಐ ಸಂಸ್ಥೆ (OpenAI) ಮೊನ್ನೆ ದಿಢೀರನೇ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು (Sam Altman) ಸಿಇಒ ಮತ್ತು ನಿರ್ದೇಶಕ ಎರಡೂ ಸ್ಥಾನಗಳಿಂದಲೂ ತೆಗೆದುಹಾಕಲಾಗಿದೆ. ಈಗ ಹೊಸ ಅಚ್ಚರಿಯ ಬೆಳವಣಿಗೆಯಲ್ಲಿ, ಓಪನ್​ಎಐ ಮಂಡಳಿ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಮರಳಿ ಗದ್ದುಗೆಗೆ ಕೂರಿಸುವ ಆಲೋಚನೆಯಲ್ಲಿದೆಯಂತೆ.

ಮೈಕ್ರೋಸಾಫ್ಟ್ ಮೊದಲಾದ ದಿಗ್ಗಜ ಸಂಸ್ಥೆಗಳು ಓಪನ್​ಎಐನಲ್ಲಿ ಪಾಲು ಹೊಂದಿವೆ. ಥ್ರೈವ್ ಗ್ಲೋಬಲ್ (Thrive Global) ಮೊದಲಾದ ಹಣಕಾಸು ಸಂಸ್ಥೆಗಳು ಅದರಲ್ಲಿ ಹೂಡಿಕೆ ಮಾಡಿವೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದು ಸ್ವತಃ ಸಿಇಒ ಮಾತ್ರವಲ್ಲ ಎಲ್ಲಾ ಸಾಂಸ್ಥಿಕ ಹೂಡಿಕೆದಾರರಿಗೂ ಅನಿರೀಕ್ಷಿತ ಆಘಾತ ಉಂಟುಮಾಡಿದೆ. ಹೂಡಿಕೆದಾರರು ಇದೀಗ ಸ್ಯಾಮ್ ಪರವಾಗಿ ನಿಂತಿದ್ದು, ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ಕೂರಿಸಬೇಕೆಂದು ಬೋರ್ಡ್ ಮೇಲೆ ಒತ್ತಡ ತರುತ್ತಿರುವುದು ತಿಳಿದುಬಂದಿದೆ. ಅದಕ್ಕಾಗಿ ಮೈಕ್ರೋಸಾಫ್ಟ್ ಜೊತೆ ಥ್ರೈವ್ ಗ್ಲೋಬಲ್ ಮೊದಲಾದ ಸಂಸ್ಥೆಗಳು ಮಾತನಾಡುತ್ತಿವೆ ಎಂದು ಬ್ಲೂಮ್​ಬರ್ಗ್ ನ್ಯೂಸ್ ವರದಿ ಹೇಳುತ್ತಿದೆ.

ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ವೈಯಕ್ತಿಕವಾಗಿ ಸ್ಯಾಮ್ ಆಲ್ಟ್​ಮ್ಯಾನ್ ನಿರ್ಗಮನಕ್ಕೆ ಶಾಕ್ ವ್ಯಕ್ತಪಡಿಸಿದ್ದಾರೆ. ಸ್ಯಾಮ್ ಅವರ ಎಲ್ಲಾ ಭವಿಷ್ಯ ಹೆಜ್ಜೆಗಳಿಗೂ ಬೆಂಬಲ ಕೊಡುತ್ತೇವೆಂದು ಸತ್ಯ ಹೇಳಿದ್ದಾರೆ.

ಇದನ್ನೂ ಓದಿ: ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾ; OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ

ಇನ್ನು, ಓಪನ್​ಎಐನಿಂದ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿರುವುದು ಅಲ್ಲಿಯ ಉನ್ನತ ಸ್ತರದ ಇತರ ಅಧಿಕಾರಿಗಳಿಗೂ ಘಾಸಿಯಾದಂತಿದೆ. ಓಪನ್​ಎಐ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್​ಮ್ಯಾನ್ ಅವರೂ ಕೂಡ ತಾನು ನಿರ್ಗಮಿಸುತ್ತಿರುವುದಾಗಿ ಎಕ್ಸ್ ಪೋಸ್ಟ್​ನಲ್ಲಿ ಪ್ರಕಟಿಸಿದ್ದಾರೆ. ವರದಿಗಳ ಪ್ರಕಾರ ಇನ್ನೂ ಕೆಲ ಉನ್ನತ ಅಧಿಕಾರಿಗಳು ಓಪನ್​ಎಐಗೆ ಗುಡ್​ಬೈ ಹೇಳುವ ಸಾಧ್ಯತೆ ಇದೆ.

ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಯಾಕೆ?

ಓಪನ್​ಎಐ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಸ್ಯಾಮ್ ಆಲ್ಟ್​ಮ್ಯಾನ್ ಅವರು ಸಂಸ್ಥೆಯನ್ನು ಮುನ್ನಡೆಸಬಲ್ಲರು ಎಂಬ ವಿಶ್ವಾಸ ಮಂಡಳಿಗೆ ಇಲ್ಲ. ಸ್ಯಾಮ್ ಆಲ್ಟ್​ಮ್ಯಾನ್ ಅವರು ತಮ್ಮ ನಿರ್ಧಾರ, ವ್ಯವಹಾರ ಮತ್ತು ಸಂವಹನ ವಿಚಾರದಲ್ಲಿ ಕಂಪನಿ ಬೋರ್ಡ್ ಸದಸ್ಯರ ಜೊತೆ ಪಾರದರ್ಶಕತೆ ಹೊಂದಿರಲಿಲ್ಲ. ಇದು ಅವರನ್ನು ವಜಾಗೊಳಿಸಲು ಕಾರಣ ಎನ್ನಲಾಗಿದೆ.

ಒಂದು ವೇಳೆ, ಮೈಕ್ರೋಸಾಫ್ಟ್ ಮತ್ತು ಹೂಡಿಕೆದಾರರ ಒತ್ತಡದ ನೆರವಿನಿಂದ ಸ್ಯಾಮ್ ಆಲ್ಟ್​ಮ್ಯಾನ್ ಅವರು ಮರಳಿ ಸಿಇಒ ಸ್ಥಾನಕ್ಕೆ ಬಂದರೆ ಈಗಿರುವ ಬೋರ್ಡ್ ಸದಸ್ಯರು ನಿರ್ಗಮಿಸಬಹುದು.

ಇದನ್ನೂ ಓದಿ: Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?

ಒಂದು ವೇಳೆ, ಸ್ಯಾಮ್ ಅವರು ಮರಳಿ ಬಾರದೇ ಹೋದರೆ, ಅವರು ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಸ್ಥಾಪಿಸಬಹುದು. ಓಪನ್​ಎಐನ ಈಗಿನ ಕೆಲ ಉದ್ಯೋಗಿಗಳು ಸ್ಯಾಮ್ ಹಿಂದೆ ಹೋಗಬಹುದು. ಮೈಕ್ರೋಸಾಫ್ಟ್ ಕೂಡ ಸ್ಯಾಮ್ ಅವರ ಹೊಸ ಕಂಪನಿಗೆ ನೆರವು ನೀಡಬಹುದು ಎನ್ನಲಾಗಿದೆ.

ಅತ್ತ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ ಬಳಿಕ ಮೀರಾ ಮುರಾತಿ (Mira Murati) ಎಂಬಾಕೆ ಹಂಗಾಮಿ ಸಿಇಒ ಆಗಿ ನೇಮಕವಾಗಿದ್ದಾರೆ. ಅವರು ಚ್ಯಾಟ್​ಜಿಪಿಟಿ ರೂವಾರಿಗಳಲ್ಲಿ ಒಬ್ಬರೆನ್ನಲಾಗಿದ್ದು, ಸಿಟಿಒ ಆಗಿ ಕೆಲಸ ಮಾಡಿದ್ದಾರೆ. ಹೊಸ ಸಿಇಒ ಬರುವವರೆಗೂ ಅವರು ಆ ಸ್ಥಾನವನ್ನು ತಾತ್ಕಾಲಿಕವಾಗಿ ನಿಭಾಯಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
ವಿರೋಧ ಪಕ್ಷದ ನಾಯಕರ ದಾಳಿಯಿಂದ ಸಿದ್ದರಾಮಯ್ಯ ವಿಚಲಿತರಾಗಿರುವುದು ಸ್ಪಷ್ಟ!
ವಿರೋಧ ಪಕ್ಷದ ನಾಯಕರ ದಾಳಿಯಿಂದ ಸಿದ್ದರಾಮಯ್ಯ ವಿಚಲಿತರಾಗಿರುವುದು ಸ್ಪಷ್ಟ!
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ