ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?

Origin country of Mira Murati: ಮೀರಾ ಮುರಾತಿ ಅವರು ಆಲ್ಬೇನಿಯಾ ಮೂಲದವರು ಎಂಬುದು ಬಹಳ ಸ್ಪಷ್ಟವಾಗಿರುವ ಸಂಗತಿ. ಆದರೆ, ಅವರು ಅರ್ಧ ಭಾರತೀಯೆ. ಅವರ ಪೋಷಕರಲ್ಲಿ ಒಬ್ಬರು ಭಾರತೀಯ ಮೂಲದವರು ಎಂದೂ ಸೋಷಿಯಲ್ ಮೀಡಿಯಾದಲ್ಲಿ ವಾದಿಸುವವರಿದ್ದಾರೆ. ಓಪನ್ ಎಐನಲ್ಲಿ ಸಿಟಿಒ ಆಗಿದ್ದ ಮೀರಾ ಮುರಾತಿ ಅವರ ಹೆಸರಿನಲ್ಲಿರುವ ಮೀರಾ ಪದ ಭಾರತೀಯದ್ದೆಂಬ ಭಾವನೆ ತರುತ್ತದೆ. ಇನ್ನು, ಮುರಾತಿ ಎಂಬುದನ್ನು ಕೆಲವರು ಮೂರ್ತಿ ಎಂದು ಭಾವಿಸಿರುವುದುಂಟು.

ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?
ಮೀರಾ ಮುರಾತಿ
Follow us
|

Updated on:Nov 19, 2023 | 12:27 PM

ಬೆಂಗಳೂರು, ನವೆಂಬರ್ 19: ಮೊನ್ನೆ ನವೆಂಬರ್ 19ರಂದು ಅಮೆರಿಕದ ಸ್ಯಾನ್​ಫ್ರಿನ್ಸಿಸ್ಕೋ ಮೂಲದ ಓಪನ್ ಎಐ ಸಂಸ್ಥೆ (OpenAI) ತನ್ನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಸಂಸ್ಥೆಯನ್ನು ಮುನ್ನಡೆಸಲು ಅವರು ಸಮರ್ಪಕರಲ್ಲ ಎಂಬುದು ಮೇಲ್ನೋಟಕ್ಕೆ ಕೊಟ್ಟಿರುವ ಕಾರಣವಾಗಿದೆ. ಅವರ ಸ್ಥಾನಕ್ಕೆ ಮೀರಾ ಮುರಾತಿ (Mira Murati) ಅವರನ್ನು ನಿಯೋಜಿಸಲಾಗಿದೆ. ಮೀರಾ ಅವರು ಹಂಗಾಮಿ ಸಿಇಒ ಆಗಿ ತಾತ್ಕಾಲಿಕ ಅವಧಿಯವರೆಗೆ ಓಪನ್ ಎಐ ಅನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ, ಮೀರಾ ಮುರಾತಿ ಅವರು ಭಾರತೀಯ ಮೂಲದವರು ಎನ್ನುವಂತಹ ಸುದ್ದಿ ಕೆಲವೆಡೆ ದಟ್ಟವಾಗಿ ಹಬ್ಬಿದೆ. ಮೀರಾ ನಿಜಕ್ಕೂ ಭಾರತೀಯ ಮೂಲದವರಾ?

ಮೀರಾ ಮುರಾತಿ ಅವರು ಆಲ್ಬೇನಿಯಾ ಮೂಲದವರು ಎಂಬುದು ಬಹಳ ಸ್ಪಷ್ಟವಾಗಿರುವ ಸಂಗತಿ. ಆದರೆ, ಅವರು ಅರ್ಧ ಭಾರತೀಯೆ. ಅವರ ಪೋಷಕರಲ್ಲಿ ಒಬ್ಬರು ಭಾರತೀಯ ಮೂಲದವರು (Indian origin) ಎಂದೂ ಸೋಷಿಯಲ್ ಮೀಡಿಯಾದಲ್ಲಿ ವಾದಿಸುವವರಿದ್ದಾರೆ. ಓಪನ್ ಎಐನಲ್ಲಿ ಸಿಟಿಒ ಆಗಿದ್ದ ಮೀರಾ ಮುರಾತಿ ಅವರ ಹೆಸರಿನಲ್ಲಿರುವ ಮೀರಾ ಪದ ಭಾರತೀಯದ್ದೆಂಬ ಭಾವನೆ ತರುತ್ತದೆ. ಇನ್ನು, ಮುರಾತಿ ಎಂಬುದನ್ನು ಕೆಲವರು ಮೂರ್ತಿ ಎಂದು ಭಾವಿಸಿರುವುದುಂಟು. ಮೀರಾ ಮೂರ್ತಿ ಎಂದೇ ಕೆಲವರು ಸಂಬೋಧಿಸಿದ್ದಾರೆ. ಇದು ತಪ್ಪು. ಇದು ಕಾಲ್ಪನಿಕ ಭಾವನೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ.

ಇದನ್ನೂ ಓದಿ: ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಜಾ ಆಗಿದ್ದು ಯಾಕೆ? ಸಾಲುಸಾಲು ರಾಜೀನಾಮೆ ಭೀತಿ; ಸಂಸ್ಥೆಯ ಮಂಡಳಿಯ ಮೇಲೆ ಹೂಡಿಕೆದಾರರ ಒತ್ತಡ

ಮುರಾಟಿ ಎಂಬುದು ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ನಾಮಪದ. ಮೀರಾ ಕೂಡ ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿರುವ ಹೆಸರುಪದ. Mira ಪದವನ್ನು ಮೀರಾ ಎನ್ನಬೇಕಾ, ಮಿರಾ ಎನ್ನಬೇಕಾ ಗೊತ್ತಿಲ್ಲ. ಆದರೆ, 34 ವರ್ಷದ ಮೀರಾ ಮುರಾಟಿ ಅವರು ಭಾರತೀಯ ಮೂಲದವರು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಸ್ವತಃ ಅವರೇ ಯಾವತ್ತೂ ಕೂಡ ಭಾರತೀಯ ಮೂಲದ ಬಗ್ಗೆ ಹೇಳಿಲ್ಲ. ತಮ್ಮನ್ನು ಆಲ್ಬೇನಿಯಾ ಮೂಲದವರು ಎಂದೇ ಹೇಳಿಕೊಂಡಿರುವುದುಂಟು. ಅವರ ತಂದೆ ತಾಯಿ ಆಲ್ಬೇನಿಯಾ ಮೂಲದವರು. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1988ರಲ್ಲಿ ಜನಿಸಿದ ಅವರು ಕೆನಡಾದಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ನಂತರ ಅವರು ಅಮೆರಿಕದ ನ್ಯೂ ಹ್ಯಾಂಪ್​ಶೈರ್ ರಾಜ್ಯದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದೀಗ ಸ್ಯಾನ್ ಫ್ರಾನ್ಸಿಸ್ಕೋಗೆ ವಾಪಸ್ ಬಂದು ನೆಲಸಿದ್ದಾರೆ. ಓಪನ್ ಎಐನ ಪ್ರಧಾನ ಕಚೇರಿ ಕೂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲೇ ಇರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Sun, 19 November 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ