ಹೊಸ ಮೈಲಿಗಲ್ಲು; 4 ಟ್ರಿಲಿಯನ್ ಗಡಿ ದಾಟಿದ ಜಿಡಿಪಿ; ಭಾರತ ಈಗ ವಿಶ್ವದ ನಂಬರ್ 4

Indian Economy: ಅಮೆರಿಕ ಸದ್ಯ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಸಮೀಪದಲ್ಲಿರುವ ಚೀನಾ ನಂತರದ ಸ್ಥಾನದಲ್ಲಿದೆ. ಜರ್ಮನಿ ಮತ್ತು ಜಪಾನ್ ದೇಶಗಳ ನಂತರದ ಸ್ಥಾನದಲ್ಲಿ ಭಾರತ ಇತ್ತು. ಇದೀಗ ಜರ್ಮನಿ ಮತ್ತು ಜಪಾನ್​ನ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಭಾರತವು ಜಪಾನ್​ನ ಜಿಡಿಪಿಯನ್ನು ಹಿಂದಿಕ್ಕಿದೆ ಎನ್ನಲಾಗುತ್ತಿದೆ.

ಹೊಸ ಮೈಲಿಗಲ್ಲು; 4 ಟ್ರಿಲಿಯನ್ ಗಡಿ ದಾಟಿದ ಜಿಡಿಪಿ; ಭಾರತ ಈಗ ವಿಶ್ವದ ನಂಬರ್ 4
ಭಾರತದ ಆರ್ಥಿಕತೆ
Follow us
|

Updated on: Nov 19, 2023 | 3:10 PM

ನವದೆಹಲಿ, ನವೆಂಬರ್ 19: ಭಾರತದ ಆರ್ಥಿಕತೆ (Indian economy) ನಾಗಾಲೋಟದಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ ಅತಿವೇಗದ ಬೆಳವಣಿಗೆ ಹೊಂದುತ್ತಿದೆ. ಮುಂದಿನ ಎರಡು ವರ್ಷ ಅವಧಿಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ ಎಂದು ಹೇಳಲಾಗುತ್ತಿದೆ. ಆರ್​ಬಿಐ ಮಾತ್ರವಲ್ಲ, ವಿಶ್ವದ ಪ್ರಮುಖ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಇದೇ ರೀತಿಯ ಅಂದಾಜು ಮಾಡಿವೆ. 2027ರಷ್ಟರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದಾರೆ. ಇದೀಗ ಭಾರತ ಅತಿದೊಡ್ಡ ಆರ್ಥಿಕತೆಯಲ್ಲಿ ವಿಶ್ವದ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಂಪ್ ಆಗಿದೆ. ಇಟಿ ನೌ ಸುದ್ದಿ ವಾಹಿನಿ ಪ್ರಕಾರ ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ದಾಟಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಒಂದೆರಡು ವರ್ಷದಲ್ಲಿ ಈಡೇರಬಹುದು.

ಅಮೆರಿಕ ಸದ್ಯ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಸಮೀಪದಲ್ಲಿರುವ ಚೀನಾ ನಂತರದ ಸ್ಥಾನದಲ್ಲಿದೆ. ಜರ್ಮನಿ ಮತ್ತು ಜಪಾನ್ ದೇಶಗಳ ನಂತರದ ಸ್ಥಾನದಲ್ಲಿ ಭಾರತ ಇತ್ತು. ಇದೀಗ ಜರ್ಮನಿ ಮತ್ತು ಜಪಾನ್​ನ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಭಾರತವು ಜಪಾನ್​ನ ಜಿಡಿಪಿಯನ್ನು ಹಿಂದಿಕ್ಕಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಡೆಲ್, ಫಾಕ್ಸ್​ಕಾನ್ ಸೇರಿದಂತೆ 27 ಕಂಪನಿಗಳಿಗೆ ಪಿಎಲ್​ಐ ಸ್ಕೀಮ್​ನಲ್ಲಿ ಹಾರ್ಡ್​ವೇರ್ ಉತ್ಪಾದನೆಗೆ ಅನುಮತಿ

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿತ್ತು. ಎರಡನೇ ತ್ರೈಮಾಸಿಕ ಅವಧಿಯಲ್ಲಿ (ಜುಲೈನಿಂದ ಸೆಪ್ಟೆಂಬರ್) ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್​ಬಿಐ ನಿರೀಕ್ಷಿಸಿದೆ. ಆದರೆ, ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಪ್ರಕಾರ ಎರಡನೇ ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿ ನಿರೀಕ್ಷೆಮೀರಿ ಹೆಚ್ಚು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ.

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಪ್ರಕಾರ 2023-24ರಿಂದ ಹಿಡಿದು 2025-26ರವರೆಗೆ ಮೂರು ವರ್ಷ ಶೇ. 6ರಿಂದ ಶೇ. 7.1ರವರೆಗಿನ ದರದಲ್ಲಿ ಭಾರತದ ಆರ್ಥಿಕತೆ ಬೆಳೆಯಬಹುದು. ಜಾಗತಿಕವಾಗಿ ಅನಿಶ್ಚಿತ ವಾತಾವರಣ ಇದ್ದರೂ ಭಾರತದ ಆರ್ಥಿಕ ಪ್ರಗತಿಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಆ ವರದಿಯಲ್ಲಿ ಹೇಳಲಾಗಿದೆ. ಜಾಗತಿಕ ಬೆಳವಣಿಗಳಿಂದ ಹಣದುಬ್ಬರ ಹೆಚ್ಚಬಹುದು. ಇದರಿಂದ ಆರ್ಥಿಕತೆಯ ವೇಗ ತಗ್ಗಬಹುದು. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ಉತ್ತಮ ವೇಗದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Explained: ಇಸ್ರೇಲ್ ಯುದ್ಧದ ಮಧ್ಯೆಯೂ ಕಚ್ಛಾ ತೈಲ ಬೆಲೆ ಇಳಿದಿರುವುದು ಯಾಕೆ? ಇಲ್ಲಿವೆ ಕಾರಣಗಳು

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಮಾತ್ರವಲ್ಲ, ಮಾರ್ಗನ್ ಸ್ಟಾನ್ಲೀ ರೀಸರ್ಚ್, ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್, ಐಎಂಎಫ್ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳೂ ಕೂಡ ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು