Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?

xAI Corp: ಟ್ವಿಟ್ಟರ್ ಖರೀದಿಸಿದ ಬಳಿಕ ಇಲಾನ್ ಮಸ್ಕ್ ಇದೀಗ ಎಕ್ಸ್ ಎಐ ಕಾರ್ಪ್ ಎಂಬ ಹೊಸ ಕಂಪನಿ ಸ್ಥಾಪಿಸಿದ್ದು, ಪ್ರಪಂಚ ಅರಿಯುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಡೆಲ್ ತಯಾರಿಸುವ ಗುರಿ ಹೊಂದಿದ್ದಾರಂತೆ.

Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?
ಇಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 13, 2023 | 1:18 PM

ನವದೆಹಲಿ: ವಿಶ್ವದ ಅತಿದೊಡ್ಡ ಶ್ರೀಮಂತ ಇಲಾನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆ (AI- Artificial Intelligence) ಕ್ಷೇತ್ರದಲ್ಲಿ ಗಂಭೀರವಾಗಿ ಹೆಜ್ಜೆಗಳನ್ನಿಡಲು ನಿರ್ಧರಿಸಿದ್ದಾರೆ. ಚ್ಯಾಟ್​ಜಿಪಿಟಿ ನಿರ್ಮಾತೃ ಓಪನ್ ಎಐ (OpenAI) ಸಂಸ್ಥೆಯ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದ ಮಸ್ಕ್ ಅವರು ತಮ್ಮದೇ ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಎಕ್ಸ್​ಎಐ ಕಾರ್ಪ್ (xAI Corp) ಎಂಬ ಸಂಸ್ಥೆಯನ್ನು ಸ್ಥಾಪಿಸಿರುವುದಾಗಿ ಇಲಾನ್ ಮಸ್ಕ್ ಅವರೇ ಸ್ವತಃ ಹೇಳಿದ್ದಾರೆ. ಈ ವಿಶ್ವದ ನಿಜ ಸ್ವರೂಪ (Universe True Nature) ಅರಿಯುವುದು ಈ ಸ್ಟಾರ್ಟಪ್​ನ ಉದ್ದೇಶ ಎಂದು ಅದರ ವೆಬ್​ಸೈಟ್​ನಲ್ಲಿ ಘೋಷಿಸಲಾಗಿದೆ.

ಈ ಸ್ಟಾರ್ಟಪ್​ನಲ್ಲಿ ಹಲವು ಗಣ್ಯರ ಹೆಸರು ಕಾಣುತ್ತವೆ. ಗೂಗಲ್ ರಿಸರ್ಚ್, ಮೈಕ್ರೋಸಾಫ್ಟ್ ರಿಸರ್ಚ್, ಓಪನ್ ಎಐ, ಡೀಪ್​ಮೈಂಡ್, ಟ್ವಿಟ್ಟರ್, ಟೆಸ್ಲಾ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡಿದ ಪರಿಣಿತರು ಇಲಾನ್ ಮಸ್ಕ್ ಅವರ ಹೊಸ ತಂಡದಲ್ಲಿ ಇದ್ದಾರೆನ್ನಲಾಗಿದೆ.

ಇದನ್ನೂ ಓದಿOnline Gaming: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

ಎಐ ಸಹವಾಸ ಮಸ್ಕ್ ಅವರಿಗೆ ಹೊಸದೇನಲ್ಲ

ಆರಂಭದಲ್ಲೇ ಹೇಳಿದಂತೆ ಇಲಾನ್ ಮಸ್ಕ್ ಅವರು ಓಪನ್ ಎಐ ಕಂಪನಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಓಪನ್​ಎಐಗೆ ಬಂಡವಾಳ ಹಾಕಿದ ಮೊದಲಿಗರಲ್ಲಿ ಮಸ್ಕ್ ಅವರೂ ಒಬ್ಬರು. ಈಗ ಓಪನ್ ಎಐ ಜೊತೆ ಅವರು ಜೋಡಿತವಾಗಿಲ್ಲ. ಓಪನ್ ಎಐನಿಂದ ಜಿಪಿಟಿ-4 ಬಿಡುಗಡೆ ಆದಾಗ ಎಲಾನ್ ಮಸ್ಕ್ ಅವರು ತಾವೂ ಒಂದು ಎಐ ಮಾಡೆಲ್ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ಏಪ್ರಿಲ್ ತಿಂಗಳಲ್ಲಿ ಹೇಳಿದ್ದರು. ಇದೀಗ ಅವರು ಎನ್​ವಿಡಿಯಾ ಕಾರ್ಪ್ ಸಂಸ್ತೆಯಿಂದ ಸಾವಿರಾರು ಗ್ರಾಫಿಕ್ಸ್ ಪ್ರೋಸಸಿಂಗ್ ಯೂನಿಟ್​ಗಳನ್ನು ಪಡೆದುಕೊಂಡಿದ್ದಾರೆ. ಹೊಸ ಎಲ್​ಎಲ್​ಎಂ ರೂಪಿಸಲು ಮಸ್ಕ್ ಅವರಿಗೆ ಈ ಯೂನಿಟ್​ಗಳು ಸಹಾಯಕ್ಕೆ ಬರಲಿವೆ. ಹಿಂದೊಮ್ಮೆ ಅವರು ಟ್ರೂತ್ ಜಿಪಿಟಿ ಎಂಬ ಹೊಸ ಎಐ ಸಾಧನ ತಯಾರಿಸುವುದಾಗಿ ಹೇಳಿದ್ದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಎಲ್​ಎಲ್​ಎಂಗಳಿಗೆ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಟ್ರೈನಿಂಗ್ ನೀಡಲು ಜಿಪಿಯುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ, ಇಲಾನ್ ಮಸ್ಕ್ ಅವರು ಸರ್ವಸನ್ನದ್ಧರಾಗಿ ಎಐ ಜಗತ್ತಿಗೆ ಕಾಲಿಟ್ಟಿರುವ ಸಾಧ್ಯತೆ ಇದೆ. ಆದರೆ, ಭಾರೀ ಮೊತ್ತದ ಬಂಡವಾಳ ಹಾಕಿ ಈಗಾಗಲೇ ಎಐ ಜಗತ್ತಿನಲ್ಲಿ ಬಹಳ ಮುಂದಿರುವ ಗೂಗಲ್, ಓಪನ್​ಎಐ ಕಂಪನಿಗಳೊಂದಿಗೆ ಮಸ್ಕ್ ಅವರ ಎಕ್ಸ್ ಎಐ ಸರಿಸಮಾನವಾಗಿ ಸ್ಪರ್ಧಿಸಲಾಗದು ಎಂಬುದು ಕೆಲ ಉದ್ಯಮಿಗಳ ಅನಿಸಿಕೆ.

ಇದನ್ನೂ ಓದಿLithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ

ಓಪನ್​ಎಐ ಸ್ಥಾಪಕ ಸ್ಯಾಮ್ ಆಲ್ಟ್​ಮನ್ ಅವರು ಕಳೆದ ತಿಂಗಳು ಭಾರತಕ್ಕೆ ಬಂದಿದ್ದಾಗ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸ್ಯಾಮ್ ಆಲ್ಟ್​ಮನ್ ಜೊತೆಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾರತದ ಉದ್ಯಮಿಯೊಬ್ಬರು ಕಡಿಮೆ ಬಂಡವಾಳದಲ್ಲಿ ಭಾರತೀಯ ಕಂಪನಿಗಳು ಎಐ ಮಾಡೆಲ್ ರೂಪಿಸಬಹುದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಸ್ಯಾಮ್ ಆಲ್ಟ್​ಮನ್, ಅದು ವ್ಯರ್ಥ ಪ್ರಯತ್ನ ಆಗುತ್ತೆ ಎಂಬರ್ಥದಲ್ಲಿ ಉತ್ತರಿಸಿದ್ದರು. ಆದರೆ, ಸಾಕಷ್ಟು ಸಿರಿತನ ಹೊಂದಿರುವ ಹಾಗೂ ಮಂಗಳ ಗ್ರಹದಲ್ಲಿ ವಹಾಹತು ಸ್ಥಾಪಿಸುವ ದೊಡ್ಡ ಆಲೋಚನೆ ಹೊಂದಿರುವ ಇಲಾನ್ ಮಸ್ಕ್ ಏನು ಬೇಕಾದರೂ ಮಾಡಿಯಾರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್