AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ

Auction of Lithium Mining: ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಅವುಗಳ ಗಣಿಗಾರಿಕೆಗೆ ಹರಾಜು ನಡೆಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದೆ. ಖಾಸಗಿ ಕಂಪನಿಗಳೂ ಈ ಹರಾಜಿನಲ್ಲಿ ಪಾಲ್ಗೊಳ್ಳಬಹುದು.

Lithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ
ಲಿಥಿಯಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 3:37 PM

Share

ನವದೆಹಲಿ: ಎಲೆಕ್ಟ್ರಿಕ್ ವಾಹನ ಇತ್ಯಾದಿಗೆ ಬಳಕೆಯಾಗುವ ಲಿಥಿಯಂ ಖನಿಜದ ಗಣಿಗಾರಿಕೆಗೆ (Lithium mining) ಚಾಲನೆ ಕೊಡಲು ಸಿದ್ಧವಾಗಿರುವ ಕೇಂದ್ರ ಸರ್ಕಾರ ಇದೀಗ ಮೈನಿಂಗ್ ಹರಾಜು ಪ್ರಸ್ತಾವಕ್ಕೆ (mining auction) ಅನುಮೋದನೆ ನೀಡಿದೆ. ಖಾಸಗಿ ಕಂಪನಿಗಳು ಕೂಡ ಲಿಥಿಯಂ ಗಣಿಗಾರಿಕೆಯ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಕ ಕಾಯ್ದೆಯ ತಿದ್ದುಪಡಿಗೆ ಕೇಂದ್ರ ಸಂಪುಟವು ಒಪ್ಪಿಗೆ ಕೊಟ್ಟಿದೆ.

ಲಿಥಿಯಂ ಮಾತ್ರವಲ್ಲದೇ ಐದು ಇತರ ಪ್ರಮುಖ ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧವನ್ನು ಸರ್ಕಾರ ಹಿಂಪಡೆದಿದೆ. ಈಗ ಈ ಆರು ಖನಿಜಗಳ ಮೈನಿಂಗ್ ಮಾಡಲು ಖಾಸಗಿ ಕಂಪನಿಗಳಿಗೂ ಅವಕಾಶ ಇರಲಿದೆ. ಲಿಥಿಯಮ್ ಗಣಿಗಾರಿಕೆಗೆ ನ್ಯಾಷನಲ್ ಅಲೂಮಿನಿಯಮ್ ಕಂಪನಿ, ಮಿನರಲ್ ಎಕ್ಸ್​ಪ್ಲೊರೇಶನ್ ಕಾರ್ಪೊರೇಶನ್, ಹಿಂದೂಸ್ತಾನ್ ಕಾಪರ್ ಈ ಮೂರು ಪ್ರಮುಖ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ್ದಾಗಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳೂ ಪೈಪೋಟಿ ನಡೆಸಲು ಸಾಧ್ಯವಾಗಬಹುದು.

ಇದನ್ನೂ ಓದಿPoverty Index: 15 ವರ್ಷದಲ್ಲಿ 41 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ

ಲಿಥಿಯಮ್ ಯಾಕೆ ಮುಖ್ಯ?

ಲಿಥಿಯಮ್ ಸದ್ಯ ಭೂಮಿಯಲ್ಲಿ ನಮಗೆ ಗೊತ್ತಿರುವ ಲೋಹಗಳ ಪೈಕಿ ಅತ್ಯಂತ ಮೃದು ಹಾಗು ಹಗುರವಾದುದು. ಇದರ ವಿಶೇಷ ಗುಣಗಳಲ್ಲಿ ಒಂದೆಂದರೆ ಅದು, ರಾಸಾಯನಿಕ ಶಕ್ತಿಯನ್ನು ಸಂಗ್ರಹಿಸಿ ಎಲೆಕ್ಟ್ರಿಕ್ ಶಕ್ತಿಯಾಗಿ ಪರಿವರ್ತಿಸಬಲ್ಲುದು. ಎಲೆಕ್ಟ್ರಿಕ್ ವಾಹನಗಳಿಗೆ ಬಳಸುವ ಬ್ಯಾಟರಿಗೆ ಲಿಥಿಯಮ್ ಅಗತ್ಯ.

ವಿಶ್ವದಲ್ಲಿ ಎಲ್ಲೆಲ್ಲಿ ಸಿಗುತ್ತದೆ ಲಿಥಿಯಮ್?

ವಿಶ್ವದ ಬಹುಪಾಲು ಲಿಥಿಯಮ್ ಉತ್ಪಾದನೆ ನಡೆಯುವುದು ಆಸ್ಟ್ರೇಲಿಯಾ, ಚಿಲಿ ಮತ್ತು ಚೀನಾದಲ್ಲಿ. ಆಸ್ಟ್ರೇಲಿಯಾವೊಂದರಲ್ಲೇ ಶೇ. 47ರಷ್ಟು ಲಿಥಿಯಮ್ ಉತ್ಪಾದನೆ ಆಗುತ್ತದೆ. ಚಿಲಿ ಮತ್ತು ಚೀನಾದಲ್ಲಿ ಕ್ರಮವಾಗಿ ಶೇ. 30 ಮತ್ತು ಶೇ. 15ರಷ್ಟು ಲಿಥಿಯಮ್ ಪ್ರೊಡಕ್ಷನ್ ಇದೆ.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ 59 ಲಕ್ಷ ಟನ್​ಗಳಷ್ಟು ಲಿಥಿಯಮ್ ರಿಸರ್ವ್ ಪತ್ತೆಯಾಗಿದೆ. ನೂರಕ್ಕೆ ನೂರರಷ್ಟು ಲಿಥಿಯಮ್ ಅನ್ನು ಆಮದು ಮಾಡಿಕೊಳ್ಳಬೇಕಿರುವ ಭಾರತಕ್ಕೆ ಈಗ ಕಾಶ್ಮೀರ ಕಣಿವೆಯಲ್ಲಿ ಪತ್ತೆಯಾದ ಲಿಥಿಯಮ್ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗ ಲಿಥಿಯಮ್ ನಿಕ್ಷೇಪವನ್ನು ಹರಾಜಿನಲ್ಲಿ ಮಾರಲು ಸರ್ಕಾರ ಹೊರಟಿದೆ.

ಇದೇ ಹೊತ್ತಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಇನ್ನಷ್ಟು ಲಿಥಿಯಮ್ ನಿಕ್ಷೇಪಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಭಾರತದ ಎಲೆಕ್ಟ್ರಿಕ್ ವಾಹನ ಯೋಜನೆಗೆ ಲಿಥಿಯಮ್ ಬಹಳ ಮುಖ್ಯವಾದ್ದರಿಂದ ಈ ಬೆಳವಣಿಗೆ ಗಮನಾರ್ಹವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ