ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?

Benefits of ESI: ಸಂಘಟಿತ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಭದ್ರತೆಗೆಂದು ರೂಪಿಸಲಾದ ಇಎಸ್​ಐ ಸ್ಕೀಮ್ ಒಂದು ವಿಮಾ ಯೋಜನೆಯಾಗಿದ್ದು ಹಲವು ಪ್ರಯೋಜನಗಳನ್ನು ತರುತ್ತದೆ.

ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?
ಇಎಸ್​ಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 5:15 PM

ನೌಕರರ ರಾಜ್ಯ ಇನ್ಷೂರೆನ್ಸ್ ನಿಗಮದಿಂದ ನಡೆಸುವ ಇಎಸ್​ಐ ಯೋಜನೆ (ESI Scheme) ಹೆಸರು ಕೇಳಿರಬಹುದು. ಇಪಿಎಸ್​ನಂತೆ ಇದು ಕಡಿಮೆ ವೇತನ ವರ್ಗದ ನೌಕರರಿಗೆ ನೀಡಲಾಗುವ ವಿಮಾ ಸೌಲಭ್ಯವಾಗಿದೆ. ಇಎಸ್​ಐಸಿ ನಡೆಸುವ ಈ ಸ್ಕೀಮ್​ನಲ್ಲಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಮಾ ಕವರೇಜ್ ಕೊಡಲಾಗುತ್ತದೆ. ಸದಸ್ಯ ನೌಕರರಿಗೆ ಅನಾರೋಗ್ಯ, ತಾಯ್ತನ (Maternity), ಅಂಗವೈಕಲ್ಯಕ್ಕೆ (Disability) ಪರಿಹಾರ ಕೊಡಲಾಗುತ್ತದೆ. ಕೆಲಸ ಮಾಡುವಾಗ ಗಾಯಗೊಂಡು ಸಾವನ್ನಪ್ಪಿದರೆ ಪರಿಹಾರ ಸಿಗುತ್ತದೆ. ನೌಕರರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವೂ ಇರುತ್ತದೆ.

ದೇಶಾದ್ಯಂತ 1.5 ಕೋಟಿಗೂ ಹೆಚ್ಚು ಇಎಸ್​ಐ ಸದಸ್ಯರಿದ್ದಾರೆ. ಪ್ರತೀ ವರ್ಷ 10 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರ ಸೇರ್ಪಡೆ ಆಗುತ್ತಿದೆ. ಒಟ್ಟು ಫಲಾನುಭವಿಗಳ ಸಂಖ್ಯೆ 8 ಕೋಟಿಯಷ್ಟಿರುವುದು ತಿಳಿದುಬಂದಿದೆ.

ಏನಿದು ಇಎಸ್​ಐ ಯೋಜನೆ?

ಇದು ಸಂಘಟಿತ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಡಿಮೆ ಸಂಬಳದ ನೌಕರರಿಗೆಂದು ರೂಪಿಸಲಾದ ಯೋಜನೆ. 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಎಲ್ಲಾ ಸಂಸ್ಥೆಗಳು ಇಎಸ್​ಐ ಯೋಜನೆ ಜಾರಿಗೊಳಿಸುವುದು ಕಡ್ಡಾಯ. ತಿಂಗಳಿಗೆ 21,000 ರೂ ಹಾಗು ಅದಕ್ಕಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳನ್ನು ಇಎಸ್​ಐ ಸ್ಕೀಮ್​ಗೆ ಸೇರಿಸುವುದು ಆ ಸಂಸ್ಥೆಯ ಹೊಣೆಗಾರಿಕೆ. ಉದ್ಯೋಗಿಯ ಸಂಬಳದ ಶೇ. 3.25ರಷ್ಟು ಹಣವನ್ನು ಸಂಸ್ಥೆ ಹೆಚ್ಚುವರಿಯಾಗಿ ಹಾಕುತ್ತದೆ. ಉದ್ಯೋಗಿಯ ಸಂಬಳದಿಂದ ಶೇ. 0.75ರಷ್ಟು ಹಣ ಇದಕ್ಕೆ ಹೋಗುತ್ತದೆ. ಒಟ್ಟು ಶೇ. 4ರಷ್ಟು ಸಂಬಳವು ಇಎಸ್​ಐ ಸ್ಕೀಮ್​ಗೆ ಭರ್ತಿಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿAadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

ಉದ್ಯೋಗಿಯ ಸಂಬಳ 21,000 ರೂ ಒಳಗೆ ಇರುವವರೆಗೂ ಈ ಯೋಜನೆ ಚಾಲೂ ಇರುತ್ತದೆ. ಕೆಲಸ ಬದಲಿಸಿದರೂ ಅದೇ ಇಎಸ್​ಐ ನಂಬರ್ ಮುಂದುವರಿಯುತ್ತಿರುತ್ತದೆ. ಆದರೆ ಆ ಸಂಬಳದ ಗಡಿ ದಾಟಿದರೆ ಸ್ಕೀಮ್ ನಿಂತುಹೋಗುತ್ತದೆ.

ಈ ಸ್ಕೀಮ್​ನಲ್ಲಿ ಇಎಸ್​ಐಸಿ ಸದಸ್ಯರಿಗೆ ವೈದ್ಯಕೀಯ ಕವರೇಜ್, ಮೆಟರ್ನಿಟಿ ಕವರೇಜ್ ಇರುತ್ತದೆ. ಕೆಲಸ ಮಾಡುವಾಗ ಅಂಗ ಊನವಾದರೆ ಅದಕ್ಕೆ ಪರಿಹಾರ ಇರುತ್ತದೆ. ಸದಸ್ಯರ ಕುಟುಂಬಕ್ಕೂ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಇರುತ್ತದೆ.

ಮತ್ತೊಂದು ವಿಶೇಷತೆ ಎಂದರೆ ಇಎಸ್​ಐ ಸದಸ್ಯ ಕೆಲಸ ಮಾಡುವಾಗ ಸಾವನ್ನಪ್ಪಿದರೆ ಅವರ ಅವಲಂಬಿತರೊಬ್ಬರಿಗೆ ತಿಂಗಳಿಗೆ ಕಂತುಗಳ ರೂಪದಲ್ಲಿ ಪರಿಹಾರ ಸಿಗುತ್ತಾ ಹೋಗುತ್ತದೆ.

ಸದಸ್ಯ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ವೆಚ್ಚಕ್ಕೆಂದು 15,000 ರೂ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!