AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

How To Get Aadhaar Virtual ID: ಆಧಾರ್ ವರ್ಚುವಲ್ ಐಡಿಯನ್ನು ಆಧಾರ್ ನಂಬರ್​ನಂತೆಯೇ ಬಳಸಬಹುದು. ಇದು ಆಧಾರ್ ಸಂಖ್ಯೆ ಅಲ್ಲದ, 16 ಅಂಕಿಗಳ ತಾತ್ಕಾಲಿಕ ಸಂಖ್ಯೆಯಾಗಿದೆ. ಎಸ್ಸೆಮ್ಮೆಸ್ ಮೂಲಕವೂ ವಿಐಡಿಯನ್ನು ಸುಲಭವಾಗಿ ಸೃಷ್ಟಿಸಬಹುದು.

Aadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 2:41 PM

ಆಧಾರ್ ನಮಗೆ ಅನಿವಾರ್ಯ ಅಲ್ಲವಾದರೂ ಬಹಳ ಅಗತ್ಯ ಇರುವ ದಾಖಲೆ. ವೈಯಕ್ತಿಕ ಗುರುತು, ವಿಳಾಸ (Address Proof) ಇತ್ಯಾದಿಗೆ ಇದು ಅಧಿಕೃತ ಪುರಾವೆ. ಹಾಗೆಯೇ, ಸರ್ಕಾರದ ಯೋಜನೆಗಳಿಗೆ ಆಧಾರ್ ಬೇಕು. ಇದೇ ಹೊತ್ತಿನಲ್ಲಿ ಆಧಾರ್ ನಂಬರ್​ಗಳು ಖರೀಮರ ಕೈಗೆ ಸಿಕ್ಕು ದುರುಪಯೋಗವಾಗುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಹೀಗಾಗಿ, ಎಲ್ಲೆಡೆ ಆಧಾರ್ ನಂಬರ್ ಕೊಡುವ ಮುನ್ನ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಆಧಾರ್​ನ ವರ್ಚುವಲ್ ಐಡಿಯಿಂದ (Aadhaar Virtual ID) ಇದನ್ನು ತಪ್ಪಿಸಲು ಸಾಧ್ಯ.

ಏನಿದು ಆಧಾರ್ ವರ್ಚುವಲ್ ಐಡಿ?

ಆಧಾರ್ ನಂಬರ್ ಬದಲು ಅದರ ವರ್ಚುವಲ್ ಐಡಿಯನ್ನು ಬಳಸುವ ಅವಕಾಶ ಇದೆ. ಗುರುತಿನ ಅಧಿಕೃತತೆ ಅಥವಾ ಅಥೆಂಟಿಕೇಶನ್ ಮಾಡುವಾಗ ಅಥವಾ ಇಕೆವೈಸಿ ಮಾಡುವಾಗ ಆಧಾರ್ ನಂಬರ್ ಬದಲು ಆಧಾರ್ ವಿಐಡಿ ಬಳಸಬಹುದು. ಇದು ಆಧಾರ್ ನಂಬರ್​ಗೆ ಜೋಡಿತವಾದ 16 ಅಂಕಿಗಳ ತಾತ್ಕಾಲಿಕ ಸಂಖ್ಯೆ. ಆಧಾರ್ ನಂಬರ್ ಬಹಿರಂಗಪಡಿಸದೆಯೇ ವರ್ಚುವಲ್ ಐಡಿಯನ್ನು ಆಧಾರ್​ನಂತೆಯೇ ಬಳಸಬಹುದು.

ಆಧಾರ್ ನಂಬರ್ ಹೊಂದಿರುವವರು ವಿಐಡಿ ಜನರೇಟ್ ಮಾಡಲು ಹಲವು ಆಯ್ಕೆಗಳಿವೆ. ಹಳೆಯ ವಿಐಡಿ ಪಡೆಯಲು, ಹೊಸ ವಿಐಡಿ ಸೃಷ್ಟಿಸಲು ಅವಕಾಶಗಳಿವೆ.

ಇದನ್ನೂ ಓದಿRation Card Aadhaar Linking: ಆಧಾರ್, ರೇಷನ್ ಕಾರ್ಡ್ ಲಿಂಕ್ ಮಾಡುವ ಡೆಡ್​ಲೈನ್ ಸೆಪ್ಟಂಬರ್ 30ಕ್ಕೆ ವಿಸ್ತರಣೆ; ಯಾರಿಗೆ ಇದು ಕಡ್ಡಾಯ? ಲಿಂಕ್ ಮಾಡುವುದು ಹೇಗೆ?

ಆಧಾರ್ ವರ್ಚುವಲ್ ಐಡಿ ಹೇಗೆ ಪಡೆಯುವುದು?

ಆಧಾರ್​ನ ಹೆಲ್ಪ್​ಲೈನ್ ನಂಬರ್ 1947ಗೆ ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ವಿಐಡಿ ಜನರೇಟ್ ಮಾಡಬಹುದು. ಅದಕ್ಕಾಗಿ ಯುಐಡಿಎಐನ ಈ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ: myaadhaar.uidai.gov.in/genericGenerateOrRetriveVID

ಅಲ್ಲಿ ಆಧಾರ್ ನಂಬರ್ ಹಾಗೂ ಕ್ಯಾಪ್ಚಾ ಕೋಡ್ ಹಾಕಿ ಒಟಿಪಿ ಪಡೆದು ಸಬ್ಮಿಟ್ ಮಾಡಿ. ನಿಮಗೆ 16 ಅಂಕಿಗಳ ವರ್ಚುವಲ್ ಐಡಿ ಸಿಗುತ್ತದೆ.

ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರವಲ್ಲದೇ ಆಧಾರ್​ನ ಮೊಬೈಲ್ ಆ್ಯಪ್​ನಲ್ಲೂ ವಿಐಡಿ ಸೃಷ್ಟಿಸುವ ಅವಕಾಶವಿದೆ.

ವಿಐಡಿ ಮರೆತುಹೋದರೆ ಮರಳಿಪಡೆಯುವುದು ಹೇಗೆ?

ಇಮೇಲ್ ಇತ್ಯಾದಿ ಅಪ್ಲಿಕೇಶನ್​ನಲ್ಲಿ ಪಾಸ್​ವರ್ಡ್ ಮರೆತುಹೋದರೆ ಫರ್ಗಾಟ್ ಪಾಸ್ವರ್ಡ್ ಎಂಬ ಅವಕಾಶ ಬಳಸಿ ಪಾಸ್​ವರ್ಡ್ ಮರಳಿಪಡೆಯುತ್ತೇವೆ. ಅದೇ ರೀತಿ ನೀವು ಹಿಂದೆ ಪಡೆದ ಆಧಾರ್ ವರ್ಚುವಲ್ ಐಡಿಯ ನಂಬರ್ ಅನ್ನು ಮರೆತುಹೋಗಿದ್ದರೆ, ಅದನ್ನು ಮರಳಿ ಪಡೆಯಬಹುದು. ಅಥವಾ ಹೊಸ ಐಡಿಯನ್ನೂ ಸೃಷ್ಟಿಸಬಹುದು.

ಇದನ್ನೂ ಓದಿSIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ

ಮೈ ಆಧಾರ್ ಪೋರ್ಟಲ್ ಮತ್ತು ಆ್ಯಪ್ ಮೂಲಕ ಇದು ಸಾಧ್ಯ. ಹಾಗೆಯೇ ಎಸ್ಸೆಮ್ಮೆಸ್ ಮೂಲಕವೂ ವರ್ಚುಲ್ ಐಡಿಯನ್ನು ಮರಳಿ ಪಡೆಯಬಹುದು. RVID ಹಾಗೂ ಆಧಾರ್ ನಂಬರ್​ನ ಕೊನೆಯ 4 ಅಂಕಿಗಳನ್ನು ಟೈಪಿಸಿ 1947ಗೆ ಕಳುಹಿಸಿದರೆ ನಿಮ್ಮ ಹಿಂದಿನ ವರ್ಚುವಲ್ ಐಡಿಯನ್ನು ಮರಳಿ ಪಡೆಯಬಹುದು.

ವರ್ಚುವಲ್ ಐಡಿ ರಿಟ್ರೀವ್ ಮಾಡಿದರೆ ಹೊಸ ನಂಬರ್ ಸೃಷ್ಟಿಯಾಗುತ್ತಾ?

ನಾವು ಒಮ್ಮೆ ಆಧಾರ್ ವರ್ಚುವಲ್ ಐಡಿ ಸೃಷ್ಟಿಸಿದರೆ ಅದು ಖಾಯಂ ಎಂಬಂತಿಲ್ಲ. ಅದೇ ನಂಬರ್ ಅನ್ನು ಮರಳಿಪಡೆಯಬಹುದು, ಅಥವಾ ಹೊಸ ನಂಬರ್ ಕೂಡ ಪಡೆಯಬಹುದು. ಹೊಸ ವಿಐಡಿ ರಚಿಸಿದರೆ ಹಳೆಯ ವಿಐಡಿ ನಿಷ್ಕ್ರಿಯಗೊಳ್ಳುತ್ತದೆ.

ಯಾವುದೇ ಆಧಾರ್ ವರ್ಚುವಲ್ ಐಡಿ ಹೊಸ ವಿಐಡಿ ರಚನೆಯಾಗುವವರೆಗೂ ಬಳಕೆಗೆ ಸಿಂಧುವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ